ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜನೆ ಮಾಡಿದ್ದ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲೆ ಹಾಗೂ ವಾಸ್ತುಶಿಲ್ಪದಿಂದ ಕೂಡಿದ ಜಗತ್ಪ್ರಸಿದ್ಧ ಬೇಲೂರು ದೇವಾಲಯ ನಿರ್ಮಾಣವನ್ನು ಸತತ ೨೬ ವರ್ಷಗಳು ತನ್ಮಯತೆಯಿಂದ ನಿರ್ಮಿಸಿದ್ದು, ಇದು ಪೂಜ್ಯರು ಕಲೆಗೆ ನೀಡುತ್ತಿದ್ದ ಮನ್ನಣೆ ಹಾಗೂ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು. ಸೋಮನಾಥಪುರ, ಹಳೇಬೀಡು ಹಾಗೂ ಕೈದಾಳದಲ್ಲಿ ಇರುವ ದೇವಾಲಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಅಮರಶಿಲ್ಪಿ ಜಕಣಾಚಾರಿ ಅವರ ಜನ್ಮಸ್ಥಳ ಕ್ರೀಡಾಪುರಿ ಎಂಬ ಗ್ರಾಮಕ್ಕೆ ಕೈದಾಳ ಎಂಬ ಹೆಸರು ಬಂದ ಬಗ್ಗೆ ಮಾಹಿತಿ ನೀಡಿ, ಕೈದಾಳ ಗ್ರಾಮವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸ್ವಚ್ಛತೆ ಇಲ್ಲದೇ ಇರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.ತಹಸೀಲ್ದಾರ್ ವೈ. ಎಂ. ರೇಣುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರ ಕಲಾ ನೈಪುಣ್ಯತೆಯಿಂದ ಪುರಾಣ ಮಹಾಕಾವ್ಯಗಳು ಕಲ್ಲಿನಲ್ಲಿ ಜೀವಂತವಾದವು ಎಂದು ಶಿಲ್ಪಿಗಳ ಕಲಾರಾಧನೆ ಹಾಗೂ ಕೊಡುಗೆಯನ್ನು ಸ್ಮರಿಸಿದರು.ತಾಲೂಕು ವಿಶ್ವಕರ್ಮ ಜನಾಂಗದ ಅಧ್ಯಕ್ಷ ಗಂಗಾಧರಚಾರ್ ಮಾತನಾಡಿದರು. ಅರ್ಚಕ ಮಲ್ಲೇಶಾಚಾರ್ ಪೂಜಿಸಿದರು. ಸುಜಾತ ಅಲಿ ಸ್ವಾಗತಿಸಿದರು, ಶಿಕ್ಷಕ ರೇವಣ್ಣಚಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಪನೋಂದಣಾಧಿಕಾರಿ ರಾಕೇಶ್, ಕೃಷಿ ಇಲಾಖೆ ಅಧಿಕಾರಿ ಸಪ್ನ, ಶಿರೆಸ್ತೆದಾರ್ ಲೋಕೇಶ್, ಪ್ರಸಾದ್, ಪುರಸಭೆ ಮಾಜಿ ಸದಸ್ಯ ಮಹೇಶ್, ಎ.ಎಸ್.ಸುರೇಶ್, ಡಕಣ್ಣಾಚಾರ್, ನಾಗರಾಜ್, ಕುಮಾರ್, ಶಿವ,ಕೃಷ್ಭಚಾರ್, ನಾಗೇಂದ್ರಚಾರ್, ಪುರು?ತಮ್, ಬಾಬು, ಕಲೇಶಚಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಇದ್ದರು.