ಕನ್ನಡಪ್ರಭ ವಾರ್ತೆ ಮದ್ದೂರು
ನಗರದ ಬಳಿಯ ಗೊರವನಹಳ್ಳಿಯಲ್ಲಿ ಶ್ರೀಮಾರಮ್ಮ ದೇವಿಯವರ ಉದ್ಘಾಟನಾ ಮಹೋತ್ಸವದ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನಲ್ಲಿ ವಿಶ್ವಾಸವಿಟ್ಟು ಬಹುಮತ ನೀಡಿ ಅಧಿಕಾರ ನೀಡಿದರೆ ಉತ್ತಮ ಜನಪರ ಆಡಳಿತ ನೀಡುವ ಆಸೆಯಿದ್ದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ ಎಂದರು.
ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆ ಕೊಟ್ಟಿದ್ದಾರೆ. ಬಸ್ ದರವನ್ನು ಶೇ.30ಕ್ಕೂ ಹೆಚ್ಚು ಏರಿಕೆ ಜೊತೆಗೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ 2000 ಸಾವಿರ ಸೇರಿದಂತೆ ಎಲ್ಲಾ ಗ್ಯಾರಂಟಿಗಳನ್ನು ನೀಡುತ್ತಿದ್ದು, ನಿಮ್ಮ ಹಣವನ್ನೇ ತಂದು ಗ್ಯಾರಂಟಿ ಯೋಜನೆಗಳೆಂದು ಕೊಡುತ್ತಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.ಉಚಿತ ಆರೋಗ್ಯ, ವಿದ್ಯಾಭ್ಯಾಸವನ್ನು ಆಳುವ ಸರ್ಕಾರದಿಂದ ಕೊಡುವ ಅಭಿಲಾಷೆ ಇಟ್ಟುಕೊಂಡಿದ್ದೆ. ಆದರೆ, ಅದನ್ನು ನೀವು ಏಕೋ ಅರ್ಥ ಮಾಡಿಕೊಳ್ಳಲಿಲ್ಲ. ಕಿವಿಗೂ ಹಾಕಿಕೊಳ್ಳಲಿಲ್ಲ. ಈ ಸರ್ಕಾರವು ಕೈಗಾರಿಗೆಗಳನ್ನು ಸ್ಥಾಪಿಸುವವರಿಗೆ ಸರಿಯಾದ ಸೌಲಭ್ಯ ನೀಡುತ್ತಿಲ್ಲ. ಹೀಗಾಗಿ ನಾನು ಯಾವ ರೀತಿ ಕೈಗಾರಿಕೆಗಳನ್ನು ರಾಜ್ಯಕ್ಕೆ ತರಲಿ ಎಂದರು ಪ್ರಶ್ನಿಸಿದರು.
ಒಂದು ತಟ್ಟೆಯಲ್ಲಿ ಊಟ ಮಾಡಿದವರೇ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದ ಅವರು, 3 ಬಾರಿ ಅನಾರೋಗ್ಯದದ ಹಿನ್ನೆಲೆಯಲ್ಲಿ ಯಮನ ಸಮೀಪಕ್ಕೆ ಹೋಗಿ ನಿಮ್ಮಗಳ ಅಶೀರ್ವಾದದಿಂದ ವಾಪಸ್ ಬಂದಿದ್ದೇನೆ. ನಿಮ್ಮ ಆಶೀರ್ವಾದವಿದ್ದರೆ ಕೈಲಾದ ಮಟ್ಟಿಗೆ ನಿಮ್ಮಗಳ ಸೇವೆ ಮಾಡುತ್ತೇನೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಶ್ರೀ ಮಾರಮ್ಮ ದೇವಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಜಿ.ಬಿ.ಲಿಂಗಯ್ಯ, ಕಾರ್ಯದರ್ಶಿ ಯು.ಎಸ್. ರವಿ, ಮುಖಂಡರಾದ ರಾಘವ್, ಸುರೇಶ್, ಪ್ರಸನ್ನ, ಸಿದ್ದರಾಜು, ಶಿವರಾಮು ಸೇರಿದಂತೆ ಹಲವರು ಹಾಜರಿದ್ದರು.