ರೈತರಿಗೆ ಗ್ಯಾರಂಟಿಗಳಿಗಿಂತ ನೀರಾವರಿ ಸೌಲಭ್ಯ ಕೊಟ್ಟರೆ ಸಾಕು

KannadaprabhaNewsNetwork |  
Published : Nov 15, 2026, 01:30 AM IST
14ಎಚ್ಎಸ್ಎನ್13 : ಪುಷ್ಪಗಿರಿಯ ಸಮೀಪ ದೇವರ ಕೆರೆ ಅಭಿವೃದ್ಧಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಮಾರು ೧೨ ಲಕ್ಷದ  ಅನುದಾನದ ವೆಚ್ಚದಲ್ಲಿ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಹೂಳು ಎತ್ತುವ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುತ್ತಾ ರೈತರಿಗೆ ಯಾವ ಗ್ಯಾರೆಂಟಿ ಯೋಜನೆ ಅವಶ್ಯಕತೆ ಇಲ್ಲ. ಅವರಿಗೆ ನೀರು ಮತ್ತು ವಿದ್ಯುತ್ತನ್ನು ಕೊಟ್ಟರೆ ಅವರಿಗೆ ಅದೇ ಎಲ್ಲಾ ಗ್ಯಾರಂಟಿ ಯೋಜನೆಗಳು ಇದ್ದಂತೆ . ಸರ್ಕಾರ ಕೆಲವೊಂದು ಯೋಜನೆಯಲ್ಲಿ ಕೆಲಸ ಮಾಡಲು ಬಾರಿ ಕಷ್ಟಕರವಾಗಿರುತ್ತದೆ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥಾಪಕರಾದ ಡಾ. ವೀರೇಂದ್ರ ಹೆಗಡೆಯವರು ಹಲವಾರು ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಉಪಯೋಗದಿಂದ ಸುತ್ತ ಮುತ್ತಲಿನ ರೈತರಿಗೆ ಅಂರ್ತಜಲ ಹೆಚ್ಚಳವಾಗುತ್ತದೆ. ಅದೇ ರೀತಿ ಹಲವಾರು ಪ್ರಾಣಿ ಪಕ್ಷಿಗಳು ಬಂದು ನೆಲೆಸಿ ನೀರಿನ ದಾಹವನ್ನು ಇಂಗಿಸಿಕೊಳ್ಳುತ್ತವೆ. ಈ ಪ್ರಕೃತಿ ಮಡಿಲು ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರೈತರಿಂದ ರೈತರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಿರ್ವಹಿಸುತ್ತಿದೆ ಎಂದು ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಪುಷ್ಪಗಿರಿಯ ಪ್ರಕೃತಿ ಮಡಿಲಲ್ಲಿ ಇರುವ ದೇವರ ಕೆರೆ ಸುಮಾರು ೪ರಿಂದ ೫ ಎಕರೆ ವಿಸ್ತೀರ್ಣವಿದ್ದು, ನೀರು ಸಂಪೂರ್ಣ ಬತ್ತಿ ಹೋಗಿದೆ. ಹಾಗಾಗಿ ಈ ಕೆರೆಯ ಅಭಿವೃದ್ಧಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಮಾರು ₹ ೧೨ ಲಕ್ಷದ ಅನುದಾನದದಲ್ಲಿ ಹೂಳು ಎತ್ತುವ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುತ್ತಾ ರೈತರಿಗೆ ಯಾವ ಗ್ಯಾರೆಂಟಿ ಯೋಜನೆ ಅವಶ್ಯಕತೆ ಇಲ್ಲ. ಅವರಿಗೆ ನೀರು ಮತ್ತು ವಿದ್ಯುತ್ತನ್ನು ಕೊಟ್ಟರೆ ಅವರಿಗೆ ಅದೇ ಎಲ್ಲಾ ಗ್ಯಾರಂಟಿ ಯೋಜನೆಗಳು ಇದ್ದಂತೆ . ಸರ್ಕಾರ ಕೆಲವೊಂದು ಯೋಜನೆಯಲ್ಲಿ ಕೆಲಸ ಮಾಡಲು ಬಾರಿ ಕಷ್ಟಕರವಾಗಿರುತ್ತದೆ. ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥಾಪಕರಾದ ಡಾ. ವೀರೇಂದ್ರ ಹೆಗಡೆಯವರು ಹಲವಾರು ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಉಪಯೋಗದಿಂದ ಸುತ್ತ ಮುತ್ತಲಿನ ರೈತರಿಗೆ ಅಂರ್ತಜಲ ಹೆಚ್ಚಳವಾಗುತ್ತದೆ. ಅದೇ ರೀತಿ ಹಲವಾರು ಪ್ರಾಣಿ ಪಕ್ಷಿಗಳು ಬಂದು ನೆಲೆಸಿ ನೀರಿನ ದಾಹವನ್ನು ಇಂಗಿಸಿಕೊಳ್ಳುತ್ತವೆ. ಈ ಪ್ರಕೃತಿ ಮಡಿಲು ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಹಾಸನದ ಶ್ರೀ.ಕ್ಷೇ.ಧ.ಗ್ರಾ. ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಮಾತನಾಡುತ್ತ, ಈ ಕ್ಷೇತ್ರದಲ್ಲಿ ಹೂಳೆತ್ತುವ ಕಾರ್ಯಕ್ರಮ ನಮಗೆ ಸಿಕ್ಕಿರುವುದು ದೈವ ಸಂಕಲ್ಪ. ಈ ಕಾರ್ಯವು ೪೪ವರ್ಷಗಳಿಂದ ನಿರಂತರವಾಗಿ ರಾಜ್ಯದಲ್ಲಿ ೧೦೫೦ ಕೆರೆಗಳನ್ನು ಹೂಳೆತ್ತುವ ಕಾರ್ಯದಲ್ಲಿ ನಮ್ಮ ಕ್ಷೇತ್ರದಿಂದ ಸುಮಾರು 85 ಕೋಟಿ ವೆಚ್ಚದಲ್ಲಿ ಕೆಲಸ ಮಾಡಿದ್ದೇವೆ. ಈ ಭೂಮಿಯಲ್ಲಿ ನೀರು ಅತ್ಯವಶ್ಯಕ. ರೈತರಿಗೆ ಜೀವ ಜಂತುಗಳು, ಕಾಡುಪ್ರಾಣಿಗಳು, ದನ-ಕರುಗಳು ಕುಡಿಯಲು ನೀರನ್ನು ಉಳಿಸಿಕೊಳ್ಳಬೇಕು. ದೇಶವನ್ನು ಬೆಳೆಸಿ ನೀರನ್ನು ಹಿತಮಿತವಾಗಿ ಬಳಸಿ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷ ಮಾತನಾಡುತ್ತಾ, ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರದ ಆದೇಶ ಮೇರೆಗೆ ಜಮೀನಲ್ಲಿ ನೀರಿನ ಹೊಂಡದ ಯೋಜನೆಯು ಸಹ ನಮ್ಮಲ್ಲಿ ಖಾತ್ರಿ ಯೋಜನೆಯಲ್ಲಿ ಇದೆ. ರೈತರು ಇದನ್ನು ಸದುಪಯೋಗ ಮಾಡಿಕೊಂಡು ನಿಮ್ಮ ಖಾತೆಗೆ ನೇರವಾಗಿ ಹಣವು ಬರಬಹುದು. ಹಾಗಾಗಿ ನೀರಿನ ಹೊಂಡದ ಮೂಲಕ ಉಳಿಸಿ ಶೇಖರಣೆ ಮಾಡಿದರೆ ನಿಮ್ಮ ಭೂಮಿಯಲ್ಲಿ ಅಂತರ್ಜಲ ಹೆಚ್ಚುತ್ತದೆ ಎಂದು ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ಎಲ್‌ಐಸಿ ಚಂದ್ರಶೇಖರ್‌ ಮಾತನಾಡುತ್ತಾ, ಈ ಪ್ರಕೃತಿಯ ಮಡಿಲಲ್ಲಿ ನಾವು ಇರುವುದು ತುಂಬಾ ಸಂತೋಷ. ಇಂದಿನ ದಿನಗಳಲ್ಲಿ ಹೆಚ್ಚು ಕಾಡನ್ನು ಉಳಿಸಿ ದೇಶವನ್ನು ಬೆಳೆಸಿ ಎಂಬುದು ವೇದವಾಕ್ಯ ಇದ್ದರೂ ಮನುಷ್ಯ ಪಟ್ಟಣ ಅಭಿವೃದ್ಧಿಗಾಗಿ ಕಾಡನ್ನು ನಾಶ ಮಾಡುತ್ತಿದ್ದಾನೆ. ಕಾಡು ನಾಶವಾದರೆ ಮಳೆ ಕಡಿಮೆಯಾಗಿ ಅಭಿವೃದ್ಧಿ ಕುಂಠಿತವಾಗುತ್ತದೆ. ಹಾಗಾಗಿ ದೇಶವು ಉಳಿಯಬೇಕಾದರೆ ಪ್ರಕೃತಿಯನ್ನು ಉಳಿಸಿ ಕಾಡನ್ನು ಬೆಳೆಸಿ ನೀರನ್ನು ಉಳಿಸಿ ಎಂದು ಕರೆ ನೀಡಿದರು.ಬೇಲೂರು ತಾಲೂಕು ಯೋಜನೆ ಅಧಿಕಾರಿಯಾದ ಮಂಜುಳಾ ಮಾತನಾಡುತ್ತಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ೨೦೨೬ನೇ ಸಮುದಾಯ ಅಭಿವೃದ್ಧಿ ಅನುದಾನದಲ್ಲಿ ಸುಮಾರು ₹ ೪ ಕೋಟಿ ೧೩ ಲಕ್ಷದ ೯೮ ಸಾವಿರದ ೬೩೦ರೂಗಳು ಅನುದಾನದ ಕೆಲಸ. ಅದರ ವಿವರಗಳು, ಗ್ರಾಮ ಕಲ್ಯಾಣ, ರುದ್ರು ಭೂಮಿ ,ಜ್ಞಾನದೀಪ, ಹಾಲು ಉತ್ಪಾದಕರ ಸಂಘದ ಕಟ್ಟಡ ರಚನೆ ,ದೇವಸ್ಥಾನ, ಜಲಮಂಗಳ ಪರಿಕರ, ಶೌಚಾಲಯ, ಸಮುದಾಯ ಭವನ, ಶಾಲಾ ಕೊಠಡಿ, ಮಾಶಾಸನ ವಿತರಣೆ, ಸುಜ್ಞಾನ ನಿಧಿ, ಡೆಸ್ಕ್ ಬೆಂಚು ಶಾಲಾ ಪರಿಕರ, ನಮ್ಮೂರು ನಮ್ಮ ಕೆರೆ ಎಂಬ ಕಾರ್ಯಕ್ರಮದಲ್ಲಿ ಒಟ್ಟು ೮೬೧ ಕಾಮಗಾರಿಯನ್ನು ಮುಗಿಸಿ ಇವತ್ತು ಇಲ್ಲಿ ೧೨ ಲಕ್ಷದ ಕಾಮಗಾರಿಗೆ ಭೂಮಿ ಪೂಜೆ ನಡೆಸುತ್ತಿದ್ದೇವೆ. ಇದಕ್ಕೆ ಸ್ಥಳೀಯರು ಹೆಚ್ಚಾಗಿ ಸಹಕಾರ ನೀಡಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್, ರಾಜಗೆರೆ ಕಲಾವಿದ ಶಿವಣ್ಣ, ಕೆರೆ ಸಮಿತಿ ಅಧ್ಯಕ್ಷ ನಂಜೇಶ್, ಗ್ರಾಮಸ್ಥರು ಹಾಗೂ ಮಠದ ಭಕ್ತರು, ಸ್ವಸಹಾಯ ಸಂಘದ ಸಧಸ್ಯರು, ಮೇಲ್ವಿಚಾರಕಿ ರಜಿನಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ವೇ ಕಾರ್ಯಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರ ಘೇರಾವ್
ನಂದನ ಪ್ಯಾಲೇಸ್‌ನಿಂದ ಸಿಬ್ಬಂದಿಗೆ ಕಾರ್, ಬೈಕ್ ಗಿಫ್ಟ್‌