ಕನ್ನಡಪ್ರಭ ವಾರ್ತೆ ಮೂಲ್ಕಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಭ್ರಾಮರೀ ಯಕ್ಷ ಝೇಂಕಾರ -೨೦೨೪ ಆಂತರ್ ಕಾಲೇಜು ತೆಂಕುತಿಟ್ಟು ಯಕ್ಷಾಗಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ. ಮೋಹನ ಆಳ್ವ, ದೇಶದಲ್ಲಿನ ಅನೇಕ ಜಾನಪದ ಕಲೆಗಳು ನಶಸಿ ಹೋಗುತ್ತಿದ್ದು ೫೦೦ ವರ್ಷಕ್ಕೂ ಮಿಕ್ಕಿ ಇತಿಹಾಸವಿರುವ ಯಕ್ಷಗಾನ ಕಲೆ ಹೊಸ ಹೊಸ ಕಲ್ಪನೆ, ಚಿಂತನೆಗಳೊಂದಿಗೆ ಬೆಳೆಯುತ್ತ ಬಂದಿದೆ. ನಾನು ನೂರಾರು ನಾಟಕ ಯಕ್ಷಗಾನಗಳಲ್ಲಿ ನಾನಾ ಪಾತ್ರಗಳನ್ನು ಮಾಡಿದ್ದೇನೆ. ಆಗೆಲ್ಲ ಸ್ತ್ರೀವೇಷಗಳನ್ನು ಹುಡುಗರೇ ಮಾಡುತ್ತಿದ್ದರು. ಹುಡುಗಿಯರು ನಾಟಕ ಯಕ್ಷಗಾನಗಳಲ್ಲಿ ಇರುತ್ತಲೇ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಭರತನಾಟ್ಯ, ನಾಟಕ ಯಕ್ಷಗಾನಗಳಲ್ಲಿ ಹುಡುಗಿಯರದ್ದೇ ಮೇಲುಗೈಯಾಗಿದೆ ಎಂದರು.ದೇವಳದ ಅರ್ಚಕ ಶ್ರೀಹರಿನಾರಾಯುಣದಾಸ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಉದ್ಯಮಿ ಯಾದವ ಕೋಟ್ಯಾನ್, ಪ್ರವೀಣ್ ಭಂಡಾರಿ ಕೊಡೆತ್ತೂರುಗುತ್ತು, ಕಾಲೇಜಿನ ಹಿರಿಯ ಹಳೆ ವಿದ್ಯಾರ್ಥಿ ಗಂಗಾಧರ ದೇವಾಡಿಗ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ , ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ದೀಪಕ್, ಕಾರ್ಯದರ್ಶಿ ಬಿ. ನಿಶಾ, ಪುಷ್ಪರಾಜ ಜೆ. ಶೆಟ್ಟಿ, ಎಲ್. ಕೃಷ್ಣರಾಜ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ತೀರ್ಪುಗಾರರಾದ ತಾರಾನಾಥ ವರ್ಕಾಡಿ, ಮುರಳೀಧರ ಭಟ್ ಕಟೀಲು, ಅಂಡಾಲ ದೇವಿಪ್ರಸಾದ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ. ಸ್ವಾಗತಿಸಿದರು. ಸಂಘಟಕಿ ಆಶಾಲತಾ ಕೀರ್ತಿ ಶೆಟ್ಟಿ ವಿಜೇತರ ವಿವರ ನೀಡಿದರು.
ದ್ವಿತೀಯ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಚೂಡಾಮಣಿ, ತೃತೀಯ ವಿ.ವಿ. ಕಾಲೇಜು ಮಂಗಳೂರು ಇಲ್ಲಿನ ವರಾಹಾವತಾರಕ್ಕೆ ಲಭಿಸಿದೆ.