ಸಾಂಸ್ಕೃತಿಕ ಹಿರಿಮೆಗೆ ಅಗಡಿ ಗ್ರಾಮದ ಕೊಡುಗೆ ಅಪಾರ-ಜಯ ಬಸವ ಮೃತ್ಯುಂಜಯಶ್ರೀ

KannadaprabhaNewsNetwork |  
Published : Apr 07, 2024, 01:53 AM IST
೬ಎಚ್‌ವಿಆರ್೨ | Kannada Prabha

ಸಾರಾಂಶ

ಹಾವೇರಿ ಜಿಲ್ಲೆ ಸಾಧು, ಸಂತರ, ಶರಣರ, ದಾರ್ಶನಿಕರ ತವರೂರಾಗಿದೆ. ಜಿಲ್ಲೆಯಲ್ಲಿಯೇ ಅಗಡಿ ಗ್ರಾಮ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಗೆ ಗ್ರಾಮದ ಕೊಡುಗೆ ಅಪಾರ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಹಾವೇರಿ: ಹಾವೇರಿ ಜಿಲ್ಲೆ ಸಾಧು, ಸಂತರ, ಶರಣರ, ದಾರ್ಶನಿಕರ ತವರೂರಾಗಿದೆ. ಜಿಲ್ಲೆಯಲ್ಲಿಯೇ ಅಗಡಿ ಗ್ರಾಮ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಗೆ ಗ್ರಾಮದ ಕೊಡುಗೆ ಅಪಾರ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮಠ-ಮಂದಿರಗಳಿಂದ ಮರಿ ಕಲ್ಯಾಣವೆನಿಸಿರುವ ಗ್ರಾಮದಲ್ಲಿ ಹೃದಯ ಶ್ರೀಮಂತ ಭಕ್ತರಿದ್ದಾರೆ. ಹತ್ತು ಹಲವು ಐತಿಹಾಸಿಕ ಹಿನ್ನೆಲೆಗೆ ಅಗಡಿ ಗ್ರಾಮ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.ನರಸೀಪುರದ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮಶ್ರೀ ಮಾತನಾಡಿ, ಮನೆ ಅಂದರೆ ಪ್ರೀತಿ, ಪ್ರೇಮ, ವಿಶ್ವಾಸ, ಭಕ್ತಿ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಗಳನ್ನು ಉದ್ದೀಪನಗೊಳಿಸುವ ದಿವ್ಯತಾಣ, ಇಂತ ಭಕ್ತರ ಮನೆಗಳೇ ಮಠಗಳು ಎಂದ ಅವರು, ಇಂದು ಬದುಕನ್ನು ಪರೋಪಕಾರಕ್ಕಾಗಿ ಸವೆಸುವ ಸಂಕಲ್ಪ ಮಾಡಬೇಕು. ತನ್ನಲ್ಲಿರುವುದು ಕೆಟ್ಟು ಹೋಗುವ ಮುನ್ನ ಇಲ್ಲವಾಗುವ ಮುನ್ನ ನೀಡಬೇಕು. ಸಹಾಯ-ಸಹಕಾರದ ಬಾಳ್ವೆಯೇ ನಿಜ ಬಾಳು ಎಂದು ತಿಳಿಸಿದರು.ಶಿವ ಬ್ಯಾಂಕ್ ನಿರ್ದೇಶಕ ಶಂಬಣ್ಣ ಬಸೇಗೆಣ್ಣಿ ಅತಿಥಿಯಾಗಿ ಮಾತನಾಡಿ, ಗ್ರಾಮದ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಯುವಕರಾಗಿದ್ದು, ಇಂತಹ ಅಪರೂಪದ ಕಾರ್ಯಕ್ರಮ ಆಯೋಜಿಸಿ ಮಾದರಿಯಾಗಿದ್ದಾರೆ. ಯಾವುದೇ ದೇಶದ ಭವಿಷ್ಯ ಅಲ್ಲಿನ ಯುವಕರನ್ನೇ ಅವಲಂಬಿಸಿದೆ. ಯುವಕರು ಇದ್ದಾರೆ ಎನ್ನುವ ಕಾರಣಕ್ಕೆ ಜೀವನವು ಚಾಲನೆಯನ್ನು ಕಂಡುಕೊಂಡಿದೆ ಎಂದರು. ಪ್ರಭುಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ, ಮಹಾಂತ ಶರಣರು, ಸಂತೋಷ್ ಹಿರೇಮಠ, ಶರಣೆ ಜಯಶ್ರೀದೇವಿ, ಬಸಪ್ಪ ಬಳಲುಕೊಪ್ಪ, ಈರಯ್ಯ, ನಾಗರಾಜ್ ಬಸೇಗೆಣ್ಣಿ, ಪರಮೇಶ್ ಕಡ್ಲಿ, ಮಂಜಯ್ಯ ಹಿರೇಮಠ, ಜಗದೀಶ್ ಮರಗೂರ, ಈರಣ್ಣ ಕಾಯಕದ ಮತ್ತಿತರ ಉಪಸಿತರಿದ್ದರು. ಶಿವಪ್ಪ ಬಳಕೊಪ್ಪ ಸ್ವಾಗತಿಸಿದರು. ನ್ಯಾಯವಾದಿ ಮಹಾಂತೇಶ್ ಮೂಲಿಮನಿ ನಿರೂಪಿಸಿದರು. ಪ್ರಭ ಹಳೇಮನಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು