ಕನ್ನಡಪ್ರಭ ವಾರ್ತೆ ಉಡುಪಿ
ಅವರು ವಿಧಾನ ಪರಿಷತ್ತಿನ ನೂತನವಾಗಿ ಚುನಾಯಿತರಾದ ಐವನ್ ಡಿಸೋಜಾ ಅವರಿಗೆ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಉಡುಪಿ, ಸಿಎಸ್ಐ, ಯುಬಿಎಂಸಿ, ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ಗಳು, ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ, ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ, ಭಾರತೀಯ ಕಥೊಲಿಕ್ ಯುವ ಸಂಚಾಲನ, ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕರು ಜಂಟಿಯಾಗಿ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂ, ಮಿಷನ್ ಕಾಂಪೌಂಡ್, ಉಡುಪಿ ಇಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜಾ ತಾನು ಎಲ್ಲ ವರ್ಗ ಧರ್ಮಗಳಿಗೆ ಶಾಸಕನಾಗಿ ಆಯ್ಕೆಯಾಗಿದ್ದು ಆದರೆ ನನ್ನ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗುವ ಕೆಲಸ ಎಲ್ಲಿಯಾದರೂ ನಡೆದಲ್ಲಿ ಮೊದಲಿಗನಾಗಿ ದನಿ ಎತ್ತುವ ಕೆಲಸ ಮಾಡಲಿದ್ದೇನೆ ಎಂದರು.ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಿಎಸ್ಐಕೆಎಸ್‌ಡಿ ಉಡುಪಿ ಏರಿಯಾ ಕೌನ್ಸಿಲ್ ಮುಖ್ಯಸ್ಥ ವಂ|ಐವಾನ್ ಡಿ ಸೋನ್ಸ್, ಉಡುಪಿ ಜಿಲ್ಲಾ ಫುಲ್ ಗೊಸ್ಪೆಲ್ ಪಾಸ್ಟರ್ ಅಸೋಸಿಯೇಶನ್ ಅಧ್ಯಕ್ಷರಾದ ಪಾಸ್ಟರ್ ಸೆಲ್ವಕುಮಾರ್, ಸೈಂಟ್ ಮೇರಿಸ್ ಸೀರಿಯ್ ಕ್ಯಾಥೆಡ್ರಲ್ ಬ್ರಹ್ಮಾವರ ಇದರ ಪ್ರತಿನಿಧಿ ವಂ|ಎಂಟನಿ ಡಿಸಿಲ್ವಾ, ಉಡುಪಿ ದ.ಕ. ಕೊಡಗು ಯುನೈಟೆಡ್ ಬಾಸೆಲ್ ಮಿಶನ್ ಮುಖ್ಯಸ್ಥ ವಂ|ವಿಜಯ್ ಹಾರ್ವಿನ್, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಂಘಟಕಿ ವೆರೋನಿಕಾ ಕರ್ನೆಲಿಯೋ ಸನ್ಮಾನಿತರ ಪರಿಚಯ ಮಾಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ವಂದಿಸಿದರು. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.