ಕನ್ನಡಪ್ರಭ ವಾರ್ತೆ ಹಲಗೂರು
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜೆ.ಜೆ.ಪಬ್ಲಿಕ್ ಶಾಲೆಗೆ ಶೇ.95ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ 15, ಉನ್ನತ ಶ್ರೇಣಿಯಲ್ಲಿ 15, 22 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಧನುಷ್ ಕೆ. 620 (99.2), ಲಿಖಿತ್ ಕುಮಾರ್ ಹೆಚ್.ಎಸ್.618 (ಶೇ.98.8), ದಿಗಂತ್ ಗೌಡ ಬಿ.ಎಸ್.617 (ಶೇ.98.7), ಅಮೃತ್ ಜೆ. 615 (98.4), ಮನೋಗ್ನ ಏನ್.ವಿ.609 (ಶೇ.97.4), ಮಾನಸ ಎಂ.ಜಿ.604 (ಶೇ.96.6), ಅರುಣ್ ಎಸ್.601 (ಶೇ.96.1), ಅಭಯ್ ಗೌಡ ಬಿ.ವಿ.598 (ಶೇ.95.6), ವಿಭವ್ ಎಚ್.ಆರ್.594(ಶೇ.95) ಪಡೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಜೆ.ಜೆ.ಪಬ್ಲಿಕ್ ಶಾಲೆ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ.
ಅನಿತಾ ಪ್ರೌಢಶಾಲೆಗೆ ಶೇ.86.73 ರಷ್ಟು ಫಲಿತಾಂಶಮಳವಳ್ಳಿ: ಪಟ್ಟಣದ ಅನಿತಾ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.86.73ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾಗಿದ್ದ 98 ವಿದ್ಯಾರ್ಥಿಗಳಲ್ಲಿ 85 ಮಂದಿ ತೇರ್ಗಡೆ ಹೊಂದಿದ್ದಾರೆ. 27 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 45 ಪ್ರಥಮ ದರ್ಜೆ, 11 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕೆ.ಎಂ.ಮನೋಜ್(618), ಎಂ.ಯೋಗಿತಾ(618), ಬಿ.ಬಿ.ಐಷಾ (611), ಎಂ.ರಿಷಿತಾ (610), ಸ್ಪೂರ್ತಿ (596), ಫರ ಜವದ್ (594) ಅಂಕ ಪಡೆದು ಶಾಲೆಗೆ ಕೀರ್ತಿಗೆ ತಂದಿದ್ದಾರೆ ಎಂದು ಮುಖ್ಯಶಿಕ್ಷಕಿ ಆಶಾ ಕುಮಾರಿ ತಿಳಿಸಿದ್ದಾರೆ.ಶ್ರೀವಿದ್ಯಾಗಣಪತಿ ಪ್ರೌಢಶಾಲೆಗೆ ಶೇ.77.42 ರಷ್ಟು ಫಲಿತಾಂಶ
ಮಂಡ್ಯ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕೊತ್ತತ್ತಿ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆಗೆ ಶೇ.77.42 ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 124 ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 2, ಪ್ರಥಮ ದರ್ಜೆ 53, ದ್ವಿತೀಯ ದರ್ಜೆ 27 ಸೇರಿದಂತೆ ಒಟ್ಟು 96 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ.ಎಸ್.ಸ್ಪೂರ್ತಿ 625ಕ್ಕೆ 580(ಶೇ.92.80) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.ದ್ವಿತೀಯ ಸ್ಥಾನವನ್ನು ಎಂ.ಜಯಲಕ್ಷ್ಮಿ 567(90.72) ಅಂಕ ಪಡೆದಿದ್ದಾರೆ. ಟಿ.ಪಿ.ಚಿನ್ಮಯಿ 529(ಶೇ.84.64)ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.