ನಾಳೆಯಿಂದ ಪುತ್ತೂರು ಜೈನ ಭವನದಲ್ಲಿ ಹಲಸು ಮತ್ತು ಹಣ್ಣು ಮೇಳ

KannadaprabhaNewsNetwork | Published : May 23, 2024 1:02 AM

ಸಾರಾಂಶ

ಮೇಳದಲ್ಲಿ ವಿವಿಧ ತಳಿಯ ಹಲಸಿನ ಹಣ್ಣುಗಳು, ಪ್ರಸಿದ್ಧ ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಿದ ತಳಿಗಳು ಹಾಗೂ ಇತರ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹಲಸಿನ ಹಣ್ಣಿನ ಹತ್ತು ಹಲವು ಬಗೆಯ ಖಾದ್ಯಗಳ ಮಳಿಗೆಗಳಿವೆ.

ಕನ್ನಡಪ್ರಭ ವಾರ್ತೆ ಪುತ್ತೂರು

ನವತೇಜ ಟ್ರಸ್ಟ್, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್, ಅಡಿಕೆ ಪತ್ರಿಕೆ ಮತ್ತು ಜೆಸಿಐ ಇವುಗಳ ಸಂಯುಕ್ತ ಆಶ್ರಯದಲ್ಲಿ ೭ನೇ ವರ್ಷದ ಹಲಸು ಮತ್ತು ಹಣ್ಣುಗಳ ಮೇಳ ಮೇ ೨೪, ೨೫ ಹಾಗೂ ೨೬ ರಂದು ಪುತ್ತೂರಿನ ಬೈಪಾಸ್ ಬಳಿಯಲ್ಲಿರುವ ಜೈನ ಭವನದಲ್ಲಿ ನಡೆಯಲಿದೆ ಎಂದು ನವತೇಜ ಟ್ರಸ್ಟ್‌ ಅಧ್ಯಕ್ಷ ಅನಂತ ಕುಮಾರ್ ನೈತಡ್ಕ ತಿಳಿಸಿದ್ದಾರೆ.

ಅವರು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ ೨೪ರಂದು ವಿವಿಧ ಮಳಿಗೆಗಳನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ ಸುಬ್ರಹ್ಮಣ್ಯ ಭಟ್ ಉದ್ಘಾಟಿಸುವರು. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶುಭಾಶಂಸನೆ ಮಾಡುವರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸುವರು. ನಾ. ಕಾರಂತ ಪೆರಾಜೆ ಲೇಖನಗಳ ಸಂಗ್ರಹ ‘ಫಲಪ್ರದ’ ಪುಸ್ತಕವನ್ನು ಪಡಾರು ರಾಮಕೃಷ್ಣ ಶಾಸ್ತ್ರಿ ಅನಾವರಣ ಮಾಡುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಭಾರತೀಯ ಗೇರು ಸಂಶೋಧನಾಲಯ ನಿರ್ದೇಶಕ ಡಾ. ದಿನಕರ ಅಡಿಗ, ಬನ್ನೂರು ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಪಾಲ್ಗೊಳ್ಳುವರು.

ಮೇ ೨೫ರಂದು ಬೆಳಗ್ಗೆ ನಡೆಯುವ ಗೋಷ್ಠಿಯಲ್ಲಿ ಮಾತೃತ್ವಂ ಶ್ರೀ ರಾಮಚಂದ್ರ ಮಠದ ಅಧ್ಯಕ್ಷ ಈಶ್ವರೀ ಶ್ಯಾಮ ಭಟ್ ಬೇರ್ಕಡವು ಅಧ್ಯಕ್ಷತೆ ವಹಿಸುವರು. ನಾಡು ಮಾವು ಸಂರಕ್ಷಣೆಗಾರ ಡಾ. ಮನೋಹರ ಉಪಾಧ್ಯ, ಸುಳ್ಯ ನಾಡು ಮಾವು ಸಂರಕ್ಷಣೆಗಾರ ಜಯರಾಮ ಮುಂಡೋಳಿಮುಲೆ, ಪುಣಚ ಕೊಕ್ಕೋ ಮೌಲ್ಯವರ್ಧನೆಗಾರ ನವೀನ ಕೃಷ್ಣ ಶಾಸ್ತ್ರಿ ಪುಣಚ, ರಂಬುಟಾನ್ ಕೃಷಿ ಮಾರುಕಟ್ಟೆಯ ವಿಶ್ವಪ್ರಸಾದ್ ಸೇಡಿಯಾಪು, ಮಾಪಲತೋಟ ಸುಬ್ರಾಯ ಭಟ್ ಮರ್ಕಂಜ ಸುಳ್ಯ, ಪುತ್ತೂರು ನವನೀತ ನರ್ಸರಿಯ ವೇಣುಗೋಪಾಲ್ ಎಸ್.ಜೆ. ಪಾಲ್ಗೊಳ್ಳಲಿದ್ದಾರೆ.ಮೇ ೨೬ ರಂದು ಬೆಳಗ್ಗೆ ಹಲಸು ಮೌಲದ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ರಮೇಶ್ ಕೊಂಕಣಾಜೆ ವೇಣೂರು, ಗೋಪಾಲಕೃಷ್ಣ ಕಾಂಚೋಡು ಉಜಿರೆ, ಶ್ವೇತಾ ಮರಕ್ಕಿಣಿವಿಚಾರ ಮಂಡನೆ ಮಾಡಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಸುದ್ದಿ ಬಿಡುಗಡೆ ಸಂಪಾದಕ ಡಾ. ಯು. ಪಿ. ಶಿವಾನಂದ ವಹಿಸಲಿದ್ದು, ಪುತ್ತೂರು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಸಮನಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಮಾಲಕ ಬಲರಾಮ ಆಚಾರ್ಯ, ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಸಂಘಟನಾ ಕಾರ್ಯದರ್ಶಿ ರತ್ನಾಕರ ಕುಳಾಯಿ, ಪುತ್ತೂರು ಸಮೃದ್ಧಿ ಗಿಡಗೆಳೆತನ ಸಂಘದ ಅಧ್ಯಕ್ಷ ನಿರಂಜನ ಪೋಳ್ಯ, ಜೇಸಿ ವಲಯ ೧೫ ವಲಯ ಉಪಾಧ್ಯಕ್ಷ ಜೇಸಿ ಶಂಕರ ರಾವ್ ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮದಲ್ಲಿ ಮೇಳದಲ್ಲಿ ವಿವಿಧ ತಳಿಯ ಹಲಸಿನ ಹಣ್ಣುಗಳು, ಪ್ರಸಿದ್ಧ ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಿದ ತಳಿಗಳು ಹಾಗೂ ಇತರ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹಲಸಿನ ಹಣ್ಣಿನ ಹತ್ತು ಹಲವು ಬಗೆಯ ಖಾದ್ಯಗಳ ಮಳಿಗೆಗಳಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನವತೇಜದ ಸುಹಾಸ್ ಮರಿಕೆ, ಜೆಸಿಐ ಉಪಾಧ್ಯಕ್ಷ ಅನೂಪ್ ಕೆ.ಜೆ. ಇದ್ದರು.

Share this article