ಹಲಸಿನ ಹಣ್ಣಿನ ವ್ಯಾಪಾರ ಬಲು ಜೋರು

KannadaprabhaNewsNetwork |  
Published : Jun 16, 2025, 01:30 AM ISTUpdated : Jun 16, 2025, 01:31 AM IST
ಪೋಟೊ15ಕೆಎಸಟಿ1: ಕುಷ್ಟಗಿ ಪಟ್ಟಣದಲ್ಲಿ ತಳ್ಳುಗಾಡಿಯ ಮೂಲಕ ಹಲಸಿನ ಹಣ್ಣುಗಳನ್ನು  ವ್ಯಾಪಾರ ಮಾಡುತ್ತಿರುವುದು. | Kannada Prabha

ಸಾರಾಂಶ

ಗ್ರಾಹಕರು ಮಳೆಗಾಲ ಮುಗಿಯುವವರೆಗೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣನ್ನು ಸವಿಯುತ್ತಾರೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಹಸಿದಾಗ ಹಲಸು, ಉಂಡಾಗ ಮಾವು ಎಂಬ ಗಾಧೆಮಾತಿನಂತೆ ಹಲಸು ಹಸಿವು ತಣಿಸುವ, ಆರೋಗ್ಯಭರಿತ ಹಣ್ಣು. ಇದೀಗ ಹಲಸಿನ ಹಣ್ಣಿನ ಸುಗ್ಗಿಕಾಲ ಆರಂಭವಾಗಿದ್ದು, ಇದರ ಪರಿಮಳ ಕುಷ್ಟಗಿ ತಾಲೂಕಿನಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಹಣ್ಣುಗಳಿಗೆ ಹೊಲಿಸಿದರೆ ಅತಿ ಹೆಚ್ಚು ಪೌಷ್ಟಿಕಾಂಶ ಈ ಹಣ್ಣು ಹೊಂದಿದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಸೇರಿದಂತೆ ಇತರೆ ಪೌಷ್ಟಿಕಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಗ್ರಾಹಕರು ಮಳೆಗಾಲ ಮುಗಿಯುವವರೆಗೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣನ್ನು ಸವಿಯುತ್ತಾರೆ.

ಜೀವನೋಪಾಯಕ್ಕೂ ದಾರಿ:

ಮಲೆನಾಡಿನ ಶಿವಮೊಗ್ಗ, ಶಿಕಾರಿಪುರ, ಸಾಗರ, ಶಿರಸಿ ಸೇರಿದಂತೆ ಅನೇಕ ಭಾಗದಲ್ಲಿ ಹೆಚ್ಚಾಗಿ ಹಲಸು ಹಣ್ಣು ಬೆಳೆಯಲಾಗುತ್ತಿದ್ದು, ಅಲ್ಲಿಂದ ವ್ಯಾಪಾರ ಮಾಡಿಕೊಂಡು ಬಂದು ಹಣ್ಣುಗಳನ್ನು ತಳ್ಳು ಗಾಡಿಗಳಲ್ಲಿ ಪಟ್ಟಣ ಪ್ರದೇಶದ ಬೀದಿ ಬೀದಿಗಳಲ್ಲಿ ಮಾರಾಟ ಮಾಡುತ್ತಾರೆ. ಇನ್ನೂ ಕೆಲವೆಡೆ ತೊಳೆ ತೆಗೆದು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವುದು ಕಂಡು ಬರುತ್ತಿದೆ.

₹200 ರಿಂದ ₹350ಗೆ ಮಾರಾಟ:

ಮಾರುಕಟ್ಟೆಯಲ್ಲಿ ಹಲಸಿನ ಹಣ್ಣು ಗಾತ್ರಕ್ಕೆ ತಕ್ಕಂತೆ ಮಾರಾಟವಾಗುತ್ತಿದೆ. ಸಣ್ಣ ಗಾತ್ರದ ಹಣ್ಣಿಗೆ ₹100, ದೊಡ್ಡ ಗಾತ್ರ ₹150 ರಿಂದ ₹ 250ಗೆ ಮಾರಾಟವಾಗುತ್ತಿದೆ. ಬಸವ ಜಯಂತಿಯ ಸಮಯದಲ್ಲಿ ಆರಂಭವಾಗಿ ಆಷಾಢದ ಅಂತ್ಯದವರೆಗೂ ಈ ಹಣ್ಣು ಸವಿಯಲು ಲಭ್ಯವಿರುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ತೆಂಗಿನಂತೆ ಬಹುಪಯೋಗಿ:

ತೆಂಗಿನ ಮರದಂತೆ ಹಲಸಿನ ಮರವು ಕೂಡ ಬಹುಪಯೋಗಿ ಮರ. ಹಲಸಿನ ಎಲೆಯು ಚರ್ಮರೋಗ, ಮಧು ಮೇಹದಂತಹ ಕಾಯಿಲೆಗೆ ಉಪಯೋಗವಾದರೆ ಹಲಸಿನ ಕಾಯಿಯಿಂದ ರುಚಿಕಟ್ಟಾದ ಚಿಪ್ಸ್, ಹಪ್ಪಳ, ಪಲ್ಯ, ಸಾರು ಸೇರಿದಂತೆ ಬಗೆ ಬಗೆಯ ತಿನಿಸು ಮಾಡಲಾಗುತ್ತದೆ.ಇದರ ಬೀಜಗಳಂತೂ ಪೌಷ್ಟಿಕಾಂಶಗಳ ಕಣಜ ಎಂದೇ ಭಾವಿಸಲಾಗುತ್ತದೆ. ಇದರಲ್ಲಿ ಪ್ರೋಟೀನ್, ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ, ಮೂಳೆ, ಹೃದಯ ಆರೋಗ್ಯಕ್ಕೂ ಉತ್ತಮವಾಗಿದೆ.

ಹೊಸಪೇಟೆಯಿಂದ ಹಲಸಿನ ಹಣ್ಣುಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಆದರೆ ಕೆಲ ಗ್ರಾಹಕರು ಹಣ್ಣುಗಳನ್ನು ಕಡಿಮೆ ಬೆಲೆಗೆ ಕೇಳುತ್ತಿದ್ದು, ದಿನಾಲು ಸಾವಿರಾರು ರೂಪಾಯಿ ವ್ಯಾಪಾರವಾಗಲಿದೆ.1 ಕೆಜಿಗೆ ₹160 ಪಡೆಯುತ್ತಿದ್ದೇವೆ ಎಂದು ಕುಷ್ಟಗಿ ವ್ಯಾಪಾರಿ ಶರಣಪ್ಪ ಭಜಂತ್ರಿ ಹೇಳಿದರು.

ಹಲಸಿನ ಹಣ್ಣು ಆರೋಗ್ಯಕ್ಕೆ ಉತ್ತಮವಾಗಿದ್ದು, ಇದನ್ನು ನಾವು ಸೀಸನ್ ಮುಗಿಯುವ ತನಕವೂ ತಿನ್ನುತ್ತೇವೆ. ವಾರದಲ್ಲಿ ಎರಡು ಹಣ್ಣನ್ನು ಮನೆಗೆ ಕೊಂಡೋಯ್ದು ತಿನ್ನುತ್ತೇವೆ ಎಂದು ಗ್ರಾಹಕ ಪ್ರಭು ಜಹಗೀರದಾರ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ