ಶಿರಸಿ: ಎಲ್ಲಿ ನೋಡಿದರೂ ಹಲಸಿನ ಹಣ್ಣಿನ ಘಮಘಮ. ಹಣ್ಣಿನಿಂದ ತಯಾರಾಗುತ್ತಿರುವ ಹಲಸಿನ ಖಾದ್ಯ, ಮತ್ತೊಂದೆಡೆ ಆಕರ್ಷಿಸುತ್ತಿರುವ ಹಲಸು,ಬಕ್ಕೆ ಹಣ್ಣುಗಳಿಂದ ಮಾಡಿದ ಅಲಂಕಾರ ನಗರದ ಕದಂಬ ಮಾರ್ಕೆಟಿಂಗ್‌ನಲ್ಲಿ ಆಯೋಜಿಸಲಾದ ಹಲಸಿನ ಮೇಳದಲ್ಲಿ ನೂರಾರು ಜನರು ಭೇಟಿ ನೀಡಿ ಆಸ್ವಾದ ಸವಿದರು.
ಮೇಳದಲ್ಲಿ ಹಸಲು, ಬಕ್ಕೆ ಹಣ್ಣು ಮಾತ್ರವಲ್ಲದೇ ಹಲಸಿನ ಹೊಳಿಗೆ, ಹಲಸಿನ ಕೇಕ್, ಪತ್ರೊಡೆ ಸೇರಿದಂತೆ ನೂರಕ್ಕೂ ಅಧಿಕ ಖಾದ್ಯ, ೭೫ ಕ್ಕೂ ಅಧಿಕ ಹಲಸಿನ ಕಾಯಿ, ತಳಿಗಳ ಪ್ರದರ್ಶನದಲ್ಲಿ ನೂರಾರು ಗ್ರಾಹಕರು ತಮಗಿಷ್ಟವಾದ ಖಾದ್ಯ ಖರೀದಿಸಿ ಖುಷಿಪಟ್ಟರು.
ಹಲಸಿನಿಂದ ತಯಾರಿಸಿದ ಕೇಕ್ ಕತ್ತರಿಸುವ ಮೂಲಕ ೧೨ನೇ ಹಲಸಿನ ಮೇಳ ಬೆಂಗಳೂರಿನ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಶಾಮಲಮ್ಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ರೈತರು ಭಾಗಿಯಾದರೆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಅಸ್ಸಾಂ, ಮಣಿಪುರ, ಮೇಘಾಲಯ ರಾಜ್ಯದಲ್ಲಿ ಹಲಸು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಅವರಿಗೆ ಮೌಲ್ಯವರ್ಧನೆ ತಿಳಿದಿಲ್ಲ. ಅವರಿಗೆ ತರಬೇತಿ ನೀಡಿದ ಪರಿಣಾಮ ಹಪ್ಪಳ, ಚಿಪ್ಸ್, ಉಪ್ಪಿನಕಾಯಿ ತಯಾರಿಸುತ್ತಿದ್ದಾರೆ.ಬಕ್ಕೆ ತಳಿ ಗುರುತಿಸಿ, ಕೃಷಿ ವಿದ್ಯಾಲಯದಲ್ಲಿ ಕಸಿ ಮಾಡಿ ತಳಿ ಅಭಿವೃದ್ಧಿಪಡಿಸಿದ್ದೇವೆ. ಉತ್ತಮ ತಳಿ ಗುರುತಿಸಿ, ಅದನ್ನು ಸಂರಕ್ಷಿಸಿ, ಆ ರೈತರಿಗೆ ಹಕ್ಕುಪತ್ರ ನೀಡುವುದನ್ನು ಮಾಡುತ್ತಿದ್ದೇವೆ. ಮಲೆನಾಡಿನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದಕ್ಕೆ ಹಲಸಿನ ಗಿಡಗಳು ಬೇಗವಾಗಿ ಬೆಳೆಯುವುದಿಲ್ಲ. ಈ ಪ್ರದೇಶಕ್ಕೆ ಹೊಂದಾಣಿಕೆಯಾಗುವ ತಳಿ ನೀಡಬೇಕಿದೆ. ತಳಿ ಗುರುತಿಸಿ, ಉಳಿಸಿಕೊಂಡು ಹೋಗಬೇಕಿದೆ. ಹಲಸಿನ ಕಟ್ಟಿಗೆ ಬೇಡಿಕೆ ಇರುವುದಿಂದ ಕಡಿದು ಮಾರಾಟ ಮಾಡುತ್ತಿದ್ದಾರೆ.ಅದು ಕಡಿಮೆಯಾಗಿ ತಳಿ ಸಂರಕ್ಷಣೆಯಾಗಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಡಿಕೆ ಕಾಳಮೆಣಸು ವ್ಯಾಪಾರಸ್ಥರು ಲಾಭದ ಸ್ವಲ್ಪ ಭಾಗ ಸಂಶೋಧನೆಗೆ ನೀಡಿದರೆ ಅನುಕೂಲವಾಗುತ್ತದೆ. ಸರ್ಕಾರಗಳು ಮೆಡಿಕಲ್, ಎಂಜೀನಿಯರಿಂಗ್ ವಿಭಾಗಕ್ಕೆ ನೀಡಿದ ಪ್ರಾಮುಖ್ಯತೆ ಕೃಷಿ ಹಾಗೂ ತೋಟಗಾರಿಕೆಗೆ ನೀಡುತ್ತಿಲ್ಲ. ನಮ್ಮಲ್ಲಿರುವ ಹಲಸು, ಉಪ್ಪಾಗೆ ಸಂಸ್ಕರಿಸಿ, ಮಾರಾಟ ಮಾಡಿದರೆ ಆರ್ಥಿಕವಾಗಿ ಬಲಿಷ್ಠರಾಗಬಹುದು ಎಂದ ಅವರು, ಉತ್ತರಕನ್ನಡ ಚಿನ್ನದ ಗಣಿ, ಅದಿರನ್ನು ತೆಗೆದು ನಮಗಿಷ್ಟವಾದ ವಸ್ತು ಮಾಡಿಕೊಳ್ಳಬಹುದು. ರೈತರು ಕೊರಗಬಾರದು. ಬಹಳಷ್ಟು ಅವಕಾಶವಿದೆ. ಅಡಿಕೆಗೆ ಪೂರಕ ಬೆಳೆಯಿದೆ. ಶೇ. ೮೦ ರಷ್ಟು ಪಣಿಯೂರು ಕಾಳುಮೆಣಸು ಇಳುವರಿಯಲ್ಲಿ ಪ್ರಸಿದ್ಧಿಪಡಿಸಿದೆ ಎಂದು ಹೇಳಿದರು.
ಆನಂದ ಹಲಸು ಎಂಬ ಹಲಸು ತಳಿ ಮತ್ತು ಕದಂಬ ಹಾಗೂ ನೆಲಸಿರಿಯ ಅಡಿಯಲ್ಲಿ ಹಲಸಿನ ಬೀಜದ ಬ್ರಾಂಡ್‌ನ್ನು ಬಿಡುಗಡೆಗೊಳಿಸಲಾಯಿತು.
ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ ಅಧ್ಯಕ್ಷತೆ ವಹಿಸಿದ್ದರು.
ಗಮನಸೆಳೆದ ರಂಗೋಲಿ:
ಇಂದಿನ ಕಾರ್ಯಕ್ರಮ:
ಸಾತ್ವಿಕ ಫುಡ್ ಪ್ರೈ. ಲಿ, ಬೆಳ್ಳೆಕೆರೆ ಇದರ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್.ಬೆಳ್ಳೆಕೆರೆ ತಮ್ಮ ಕಂಪನಿಯ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನ ೨.೩೦ ಸಮಾರೋಪ ನಡೆಯಲಿದ್ದು, ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಡಾ. ರೂಪಾ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಜೀವ ವೈವಿದ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. "ಹೊಸ ತಲೆಮಾರಿನ ಕೃಷಿಕರ ಮುಂದಿರುವ ಅನನ್ಯ ಸಾಧ್ಯತೆಗಳು " ಎನ್ನುವ ವಿಷಯ ಕುರಿತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ದಿವಾಕರ ಹೆಗಡೆ ಕೆರೆಹೊಂಡ ಅವರ ವಿಶೇಷ ಉಪನ್ಯಾಸವಿದೆ. ಹಲಸಿನ ತಳಿ ಸಂರಕ್ಷಣೆ ಮಾಡಿರುವ ಉತ್ಸಾಹಿ ರೈತರಿಗೆ ಹಾಗೂ ಉದ್ಯಮಿಗಳಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ