ಕನ್ನಡಪ್ರಭ ವಾರ್ತೆ ಮೈಸೂರುನಾವೆಲ್ಲರೂ ಸಮಾನರು ನಾವೆಲ್ಲರೂ ಒಂದೇ ಎನ್ನುವ ಮನೋಭಾವ ನಮ್ಮಲ್ಲಿ ಬರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಹೇಳಿದರು.ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ರೇಣುಕಾಚಾರ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ರೇಣುಕಾಚಾರ್ಯ ಜಯಂತಿಯನ್ನು ನಾವೆಲ್ಲರೂ ಕೂಡ ಆಚರಿಸುತ್ತಾ ಬರುತ್ತಿದ್ದೇವೆ. ಇವರು ನಮ್ಮ ಮನಸ್ಸಿನಲ್ಲಿ ಇರುತ್ತಾರೆ ಹಾಗೂ ಮತ್ತೆ ನಮ್ಮ ಮನೆಗಳಲ್ಲಿಯೂ ಕೂಡ ಇವರನ್ನು ಆಚರಿಸುತ್ತೇವೆ. ಬುಧವಾರ ಸರ್ಕಾರಿ ಕಾರ್ಯಕ್ರಮವಾಗಿಯೂ ಅರ್ಥಪೂರ್ಣವಾಗಿಯೂ ಕೂಡಾ ಆಯೋಜನೆ ಮಾಡಿ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.ನಾವು ಯಾವುದೇ ಜಯಂತಿಯನ್ನು ಆಚರಿಸಬೇಕಾದರೆ ಅದರ ಮೂಲ ಉದ್ದೇಶ ಮತ್ತು ಅದರ ಆಶಯಗಳನ್ನು ಮೊದಲು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.ಸಾವಿರ ವರ್ಷಗಳ ಕಾಲ ಹಿಂದೆ ಇದ್ದವರನ್ನು ನಾವು ನೆನೆಸಿಕೊಂಡು ಅವರ ಜಯಂತಿಯನ್ನು ಆಚರಣೆ ಮಾಡುತ್ತಾ ಇದ್ದೇವೆ ಎಂದರೆ ಅವರು ಹುಟ್ಟಿರುತ್ತಾರೆ. ಅವರಿಗೆ ಸಾವು ಇರುವುದಿಲ್ಲ ಎಂದು ನಾವು ಅರಿಯಬೇಕು. ಅಂತವರ ಜಯಂತಿಯನ್ನು ನಾವು ಹುಟ್ಟುಹಬ್ಬ ಆಚರಿಸುವವರ ಸಾಲಿನಲ್ಲಿ ರೇಣುಕಾಚಾರ್ಯರು ಸೇರಿದ್ದಾರೆ. ಯಾರಿಗೆ ಹುಟ್ಟು, ಸಾವು ಇಲ್ಲವೋ ಅಂತಹ ಮಹಾ ಚರಿತ್ರೆಗಳನ್ನು ಜಯಂತಿಯಾಗಿ, ಹುಟ್ಟುಹಬ್ಬವಾಗಿ ನಾವು ಆಚರಣೆ ಮಾಡುತ್ತೇವೆ ಎಂದರು.ಇಡೀ ಸಮಾಜಕ್ಕೆ ಬೆಳಕಾದವರು ವಿಶ್ವಗುರು ರೇಣುಕಾಚಾರ್ಯರು. ವೀರಶೈವ ಪರಂಪರೆಯಲ್ಲಿ ಮಹಾನ್ ಚೇತನರಾಗಿ ಎಂದೆಂದಿಗೂ ನಮಗೆ ದಾರಿದೀಪವಾಗಿದ್ದಾರೆ ಎಂದು ಅವರು ಹೇಳಿದರು.ಯಾವುದೇ ಜಾತಿ, ಪಂಗಡ ಎಂಬುದು ಕೇಳಿ ಪಡೆದದಲ್ಲ. ಇದು ನಮ್ಮ ಆಯ್ಕೆಯಲ್ಲ, ನಾವು ನಮ್ಮ ತಂದೆ ತಾಯಿಯ ಹೊಟ್ಟೆಯಲ್ಲಿಯೇ ಜನಿಸಬೇಕು ಎಂದು ನಿರ್ಧಾರ ಮಾಡಿಕೊಂಡು ಬಂದಿರುವುದಿಲ್ಲ. ನಾವು ಗಂಡಾಗಿ ಅಥವಾ ಹೆಣ್ಣಾಗಿ ಇದೆ ಊರಿನಲ್ಲಿ ಜನಿಸಬೇಕು ಎಂದುಕೊಂಡು ನಾವು ಬಂದಿರುವುದಿಲ್ಲ ನಮ್ಮ ಜಾತಿ ನಮ್ಮ ಕುಟುಂಬ ಎಲ್ಲವೂ ಕೂಡ ಪ್ರಕೃತಿಯ ಆಯ್ಕೆಯಾಗಿದೆ ಎಂದು ಅವರು ತಿಳಿಸಿದರು.ನಮ್ಮ ಆಯ್ಕೆ ಅಲ್ಲದಿದ್ದರೂ ಪ್ರಕೃತಿಯ ವಿಸ್ಮಯ ನಮಗೆ ಕೊಟ್ಟಿರುವ ಕೊಡುಗೆ ಶ್ರೇಷ್ಠ. ನಮ್ಮ ದೇಹವೇ ದೇವಾಲಯದ ರೀತಿ. ನಮ್ಮ ಆತ್ಮವೇ ದೇವರು ಎಂದು ನಾವು ಹೇಗೆ ಜೀವನ ಮಾಡುತ್ತೆವೋ ಹಾಗೆಯೇ ಅವರವರ ಜಾತಿಗಳು ಎಲ್ಲಾ ಧರ್ಮಗಳು ಅವರವರದೇ ರೀತಿಯಲ್ಲಿ ಇರುತ್ತದೆ ಎಂದರು.ಯಾವುದೇ ಜಾತಿ, ಧರ್ಮ ಎಂಬುದು ಉಳಿಯುವುದಿಲ್ಲ. ನಾವೆಲ್ಲರೂ ಸಮಾನರು ಇದನ್ನೇ ನಮಗೆ ರೇಣುಕಾಚಾರ್ಯರು ಸಹ ಹೇಳಿದ್ದಾರೆ. ಸಹಬಾಳ್ವೆಯಿಂದ ಸಾಮರಸ್ಯವಾಗಿ ಜ್ಞಾನ ಬೆಳೆಸಿಕೊಳ್ಳಬೇಕು ಹಾಗೂ ಬದುಕಬೇಕು ಎಂದು ಸಾರಿದ್ದಾರೆ ಅವರು ಏನೆಲ್ಲಾ ಹೇಳಿದ್ದಾರೆ. ಅವನಲ್ಲ ಪಾಲನೆ ಮಾಡುವುದರಿಂದ ಅವರ ಜಯಂತಿಯನ್ನು ಆಚರಣೆ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂದರು.ಬಸವಣ್ಣ ಅವರು ನಮಗೆ ಹೇಳಿದ್ದಾರೆ ನಮಗಿಂತ ಯಾರು ಕೀಳಲ್ಲ ಎಂದು ಅವರು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಚಿಕ್ಕವರು ಎಂದು ಭಾವಿಸುವುದು ತಪ್ಪಲ್ಲ. ಅಲ್ಲಿ ನಾವು ಪ್ರಕೃತಿಗೆ ತಲೆಬಾಗಿರುತ್ತೇವೆ. ಎಲ್ಲಿ ನಾವು ಪ್ರಕೃತಿಗೆ ತಲೆ ಬಾಗುತ್ತೇವೆ ಅಲ್ಲಿ ಪ್ರಕೃತಿಯೇ ನಮ್ಮನ್ನು ಬೆಳೆಸುತ್ತದೆ ಎಂದು ಅವರು ಹೇಳಿದರು.ರೇಣುಕಾಚಾರ್ಯರು ನಮಗೆ ಸಮಾನತೆ, ಸಹಬಾಳ್ವೆ, ಜ್ಞಾನವನ್ನು ನೀಡಿದ್ದಾರೆ. ನಾವು ಚೆನ್ನಾಗಿದ್ದು ಸಮಾಜವನ್ನು ಚೆನ್ನಾಗಿ ಇಡುವುದರ ಮೂಲಕ ನಮ್ಮ ಮಕ್ಕಳಿಗೆ ಆದರ್ಶವಾಗಿ ಬದುಕಬೇಕು, ನಾವು ಒಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದ್ದಾಗ ಮುಂದಿನ ಪೀಳಿಗೆ ಮಾದರಿಯಾಗಿ ಒಂದು ಉತ್ತಮ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ. ಅದರಿಂದ ರೇಣುಕಾಚಾರ್ಯರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಎಂ. ಷಡಕ್ಷರಯ್ಯ ಮಾತನಾಡಿ, ಕರ್ನಾಟಕ ರಾಜ್ಯ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸುತ್ತಾ ಇರುವುದು ಬಹಳ ಸಂತೋಷದ ವಿಷಯ ಎಂದರು.ಚರಿತ್ರೆಯಲ್ಲಿ ವೀರಶೈವರ ಧರ್ಮವನ್ನು ಸ್ಥಾಪಿಸಿದವರು. ವೀರಶೈವ ಧರ್ಮವನ್ನು ಪ್ರಚಾರ ಮಾಡಲು ಇಡೀ ಜಗತ್ತನ್ನೇ ಸುತ್ತಿದ್ದಾರೆ. ಅವರ ತತ್ತ್ವ ಸಿದ್ಧಾಂತ ಬಸವಣ್ಣನ ತತ್ವಗಳನ್ನು ಹೋಲುವಂತದ್ದು ಬಸವಣ್ಣ ಮತ್ತು ರೇಣುಕಾಚಾರ್ಯರ ತತ್ತ್ವಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ ಎಂದು ಅವರು ಹೇಳಿದರು.ರೇಣುಕಾಚಾರ್ಯರು ನಮಗೆ ಕೊಟ್ಟಿರುವಂತಹ ಕೊಡುಗೆ ಮತ್ತು ಆದರ್ಶಗಳು ಅಪಾರವಾದದ್ದು, ಅದನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಒಂದು ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಅವರು ತಿಳಿಸಿದರು.ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಮಾಜಿ ಮೇಯರ್ ಸುನಂದಾ ಪಾಲನೇತ್ರ, ಶ್ರೀ ಭಾರತೀಯ ಅಗಸ್ತ್ಯ ಮಹರ್ಷಿ ಸಂಶೋಧನ ಸಂಸ್ಥೆಯ ಹಿರಿಯ ವಕೀಲ ಮೈಸೂರು ನಿರ್ದೇಶಕ ಓಂ ಶ್ಯಾಂಭಟ್, ರೇಣುಕಾಚಾರ್ಯ ಸಮಿತಿ ಅಧ್ಯಕ್ಷ ಎಚ್.ಎಸ್. ಪ್ರಕಾಶ್ ಕುಮಾರ್, ಉಪಾಧ್ಯಕ್ಷ ಜ್ಞಾನ ಶಂಕರ್, ಕಂಡೇಶ್ ಕಾಶಿ ವಿಶ್ವನಾಥ ಶೆಟ್ಟಿ, ಖಜಾಂಜಿ ಎನ್.ಜಿ. ಗಿರೀಶ್ ಇದ್ದರು.----------------eom/mys/dnm/