ಜಗಳೂರು ತಾಲೂಕಲ್ಲಿ ಒಂದೇ ರಾತ್ರಿ ೬೦ ಮಿಮೀ ಮಳೆ

KannadaprabhaNewsNetwork |  
Published : May 15, 2024, 01:37 AM ISTUpdated : May 15, 2024, 01:38 AM IST
14 ಜೆ.ಜಿ.ಎಲ್ 1) ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಕೆರೆಗೆ ಒಂದೇ ರಾತ್ರಿ ೬೦ಮಿಮೀ ಮಳೆ, ಶೇ.೩೦ ರಷ್ಟು ನೀರು ಬಂದಿದೆ. | Kannada Prabha

ಸಾರಾಂಶ

ಜಗಳೂರು ತಾಲೂಕಿನ ಅನೇಕ ಕಡೆ ಗುಡುಗು ಸಹಿತ ಕೃತಿಕಾ ಮಳೆ ಅಬ್ಬರಿಸಿದ್ದು, ಅಂದಾಜು ೬೦ ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಾಲೂಕಿನ ಗಡಿಮಾಕುಂಟೆ, ಸೊಕ್ಕೆ, ಚಿಕ್ಕಉಜ್ಜಿನಿ, ಕ್ಯಾಸೇನಹಳ್ಳಿ, ಗೌರಿಪುರ, ಲಕ್ಕಂಪುರ, ಕೆಚ್ಚೇನಹಳ್ಳಿ ಸೇರಿಂತೆ ಅನೇಕ ಗ್ರಾಮಗಳಲ್ಲಿ ಧಾರಕಾರ ಮಳೆಯಾಗಿದೆ.

- ಹವಾಮಾನ ಇಲಾಖೆ ಮಾಹಿತಿ । ಗಡಿಮಾಕುಂಟೆ ಕೆರೆಗೆ ಶೇ.೩೦ ನೀರು

- - - - ದೊಣೆಹಳ್ಳಿಯಲ್ಲಿ ಜಯಶೀಲ ರೆಡ್ಡಿ ಅವರ ಕಟ್ಟಡದ ಸಿಮೆಂಟ್ ಶೀಟ್‌ಗಳಿಗೆ ಹಾನಿ

- ಬಿಸ್ತುವಳ್ಳಿಯಲ್ಲಿ 3 ಮರಗಳು ಧರೆಗೆ, ವಿವಿಧೆಡೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ರೆಂಬೆಗಳು - - - ಕನ್ನಡ ಪ್ರಭ ವಾರ್ತೆ ಜಗಳೂರು

ತಾಲೂಕಿನ ಅನೇಕ ಕಡೆ ಗುಡುಗು ಸಹಿತ ಕೃತಿಕಾ ಮಳೆ ಅಬ್ಬರಿಸಿದ್ದು, ಅಂದಾಜು ೬೦ ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಾಲೂಕಿನ ಗಡಿಮಾಕುಂಟೆ, ಸೊಕ್ಕೆ, ಚಿಕ್ಕಉಜ್ಜಿನಿ, ಕ್ಯಾಸೇನಹಳ್ಳಿ, ಗೌರಿಪುರ, ಲಕ್ಕಂಪುರ, ಕೆಚ್ಚೇನಹಳ್ಳಿ ಸೇರಿಂತೆ ಅನೇಕ ಗ್ರಾಮಗಳಲ್ಲಿ ಧಾರಕಾರ ಮಳೆಯಾಗಿದೆ.

ತಾಲೂಕಿನ ಬೃಹತ್ ಕೆರೆಯಾದ ಗಡಿಮಾಕುಂಟೆ ಕೆರೆ ೨೦೨೨ರಲ್ಲಿ ಅಷ್ಟು ಮಳೆ ಬಂದರೂ ತುಂಬಿರಲಿಲ್ಲ. ಆದರೆ, ರಾತ್ರಿ ಸುರಿದ ಮಳೆಗೆ ಭಾಗಶಃ ನೀರು ಕೆರೆಗೆ ಹರಿದುಬಂದಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ದೊಣೆಹಳ್ಳಿ ಗ್ರಾಮದಲ್ಲಿ ಜಯಶೀಲ ರೆಡ್ಡಿ ಅವರಿಗೆ ಸೇರಿದ ಕಟ್ಟಡದ ಮೇಲ್ಭಾಗದ ಸಿಮೆಂಟ್ ಶೀಟ್‌ಗಳು ಭಾಗಶಃ ಹಾರಿಹೋಗಿದೆ. ಸಮೀಪದ ರಾಷ್ಟ್ರೀಯ ಹೆದ್ದಾರಿ-೫೦ರ ಸರ್ಕಲ್‌ನಲ್ಲಿ ಮೂಕಣ್ಣ ಎಂಬವರಿಗೆ ಸೇರಿದ ಅಂಗಡಿಯ ಮುಂಭಾಗದ ಶೀಟ್‌ಗಳು ಹಾರಿಹೋಗಿವೆ. ಗ್ರಾಮದ ಅಲ್ಲಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ತಂತಿಗಳ ಮೇಲೆ ರೆಂಬೆಗಳು ಬಿದ್ದಿದ್ದು, ಬೆಸ್ಕಾಂ ಸಿಬ್ಬಂದಿ ಅಗತ್ಯ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಮರಗಳು ಧರೆಗೆ:

ಚಿತ್ರದುರ್ಗ ರಸ್ತೆ ಸಂಪರ್ಕಿಸುವ ಬಿಸ್ತುವಳ್ಳಿ ಗ್ರಾಮದಲ್ಲಿ ಸಂಜೆ ಸುರಿದ ಮಳೆಗೆ ಮೂರು ಮರಗಳು ಧರೆಗೆ ಉರುಳಿವೆ. ಹೀಗಾಗಿ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಾಳಮ್ಮಹಳ್ಳಿ ಗ್ರಾಮದಲ್ಲಿ ನಿರ್ಮಾಣ ಹಂತದ ಜೆಜೆಎಂ ಕಾಮಗಾರಿಯ ಓವರ್ ಟ್ಯಾಂಕ್‌ಗೆ ಅಳವಡಿಸಿಲಾಗಿರುವ ಕಬ್ಬಿಣದ ಏಣಿ ಬಿರುಗಾಳಿಗೆ ಮುರಿದುಬಿದ್ದಿದೆ.

ಒಟ್ಟಿನಲ್ಲಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕೃತಿಕಾ ಮಳೆಯ ಅಬ್ಬರ ಜೋರಾಗಿದೆ. ಬರಗಾಲದಿಂದ ತತ್ತರಿಸಿದ್ದ ಜನರಿಗೆ ಮಳೆಯು ಕೊಂಚ ನೆಮ್ಮದಿ ತಂದಿದೆ ಎಂದು ಕೆರೆಗಳ ಸಮಿತಿ ಅಧ್ಯಕ್ಷ ಯು.ಜಿ. ಶಿವಕುಮಾರ್, ಮುಖಂಡ ಗಡಿಮಾಕುಂಟೆ ಸಿದ್ದೇಶ್ ತಿಳಿಸಿದ್ದಾರೆ.

- - - -14ಜೆ.ಜಿ.ಎಲ್1:

ಜಗಳೂರು ತಾಲೂಕಿನ ಗಡಿಮಾಕುಂಟೆ ಕೆರೆಗೆ ಒಂದೇ ರಾತ್ರಿ ೬೦ ಮಿಮೀ ಮಳೆ, ಶೇ.೩೦ರಷ್ಟು ನೀರು ಬಂದಿದೆ.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು