ಜಗಜೀವನರಾವ್ ಜೀವನ ಮಾದರಿ: ಪ್ರೊ. ಡಾಣಿ

KannadaprabhaNewsNetwork |  
Published : Apr 06, 2026, 02:30 AM IST
05ಕೆಪಿಎಲ್01 ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಡಾ. ಬಾಬು ಜಗಜೀವನರಾಮ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು | Kannada Prabha

ಸಾರಾಂಶ

ಹಸಿರು ಕ್ರಾಂತಿಯ ಹರಿಕಾರರಾಗಿ ರೈತರ ಬದುಕನ್ನು ಹಸನು ಮಾಡುವಲ್ಲಿ ಡಾ. ಬಾಬು ಜಗಜೀವನರಾವ್ ಶ್ರಮ ದೊಡ್ಡದು

ಕೊಪ್ಪಳ: ರೈತರ ಮತ್ತು ದಲಿತರ ಬದುಕು ಹಸನಾಗಿಸುವಲ್ಲಿ ಬಾಬು ಜಗಜೀವನರಾವ್ ಶ್ರಮ ಮತ್ತು ಜೀವನ ಎಲ್ಲರಿಗೂ ಮಾದರಿ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ ಡಾಣಿ ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಬಾಬು ಜಗಜೀವನರಾಮ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಉಪಪ್ರಧಾನಿಯಾಗಿ,ಹಸಿರು ಕ್ರಾಂತಿಯ ಹರಿಕಾರರಾಗಿ ರೈತರ ಬದುಕನ್ನು ಹಸನು ಮಾಡುವಲ್ಲಿ ಡಾ. ಬಾಬು ಜಗಜೀವನರಾವ್ ಶ್ರಮ ದೊಡ್ಡದು. ಅವರ ಸಾಧನೆ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶವನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಕೆ.ರಮೇಶ, ಆಡಳಿತಾಧಿಕಾರಿ ತಿಮ್ಮಾರಡ್ಡಿ ಮೇಟಿ, ಕನ್ನಡ ವಿಭಾಗದ ಪ್ರಾಧ್ಯಾಪಕ ವೀರೇಶ ಉತ್ತಂಗಿ, ಪ್ರದರ್ಶನ ಕಲಾ ವಿಭಾಗ ಪ್ರಾದ್ಯಾಪಕ ಅನಂತಕುಮಾರ ದೊರೆ, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಂಜುನಾಥ ಹಾಗೂ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ರಂಗನಾಥ ಕೋಳೂರು ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇವೇಗೌಡ ಜತೆ ಬಿಎಸ್‌ವೈ ಅರ್ಧತಾಸು ಮಾತುಕತೆ ಕುತೂಹಲ
‘ಸ್ಟಿಂಗ್‌ ಆಪರೇಷನ್‌’ - ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆಗೊಂಡ ಕೃಪಾ ಆಳ್ವ