ಮಂಗಳೂರು: ತುಳು ನಮ್ಮ ಪ್ರಾದೇಶಿಕ ಭಾಷೆಯಾದರೂ ಅದರ ಅಭಿಮಾನದಿಂದ ತುಳು ಸಿನಿಮಾಗಳನ್ನು ನಿರ್ಮಿಸುವ ನಿರ್ಮಾಪಕರು ಕಲಾವಿದರಿಗೆ ಆಸರೆಯಾಗಿದ್ದಾರೆ. ಜೈ ತುಳು ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ. ವಿಶ್ವದ ತುಳುವರು ಈ ಸಿನಿಮಾವನ್ನು ಗೆಲ್ಲಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ಎಂ. ರೈ ಹೇಳಿದರು. ಅವರು ಬಜಪೆ ಬಳಿಯ ಮರವೂರಿನ ಶೂಲಿನ್ ಪ್ಯಾಲೇಸ್‌ನಲ್ಲಿ ‘ಜೈ’ ತುಳು ಸಿನಿಮಾದ ನೂರನೇ ದಿನದ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಸಿನಿಮಾ ಕ್ಷೇತ್ರದ ವಿವಿಧ ಸಾಧಕರನ್ನು ಹಾಗೂ ಜೈ ಸಿನಿಮಾಕ್ಕೆ ಸಹಕರಿಸಿದ ಗಣ್ಯರನ್ನು, ಭಾರತ್ ಸಿನಿಮಾದ ಮಾಲಕ ಬಾಲಕೃಷ್ಣ ಶೆಟ್ಟಿ, ಹಾಗೂ ಸುರತ್ಕಲ್ ಸಿನಿ ಗ್ಯಾಲಾಕ್ಸಿನ ಮುಖ್ಯಸ್ಥ ದೀಪಕ್, ಸಿನಿಮಾ ತಂತ್ರಜ್ಞರನ್ನು, ಕಲಾವಿದರನ್ನು ಗೌರವಿಸಲಾಯಿತು.ಉದ್ಯಮಿ ಡಾ.ಆರ್.ಕೆ.ಶೆಟ್ಟಿ, ಚಿತ್ರ ನಿರ್ಮಾಪಕರಾದ ಮುಗ್ರೋಡಿ ಸುಧಾಕರ ಶೆಟ್ಟಿ, ಅನಿಲ್ ಶೆಟ್ಟಿ, ಮಂಜುನಾಥ ಅತ್ತಾವರ್, ಸಮಾಜ ಸೇವಕ ಭಾಸ್ಕರಚಂದ್ರ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ರಜತ್ ಹೆಗ್ಡೆ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಡಾ.ಶಿವಚರಣ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಲೀಲಾಕ್ಷ ಕರ್ಕೇರ, ಲಕ್ಷ್ಮಣ್ ಕುಂದರ್, ಬಾಳ ಜಗನ್ನಾಥ ಶೆಟ್ಟಿ, ಶ್ಯಾಮ್, ನಾರಾಯಣ ಪೂಜಾರಿ, ಚಿತ್ರ ನಟಿ ಅದ್ವಿತಿ ಶೆಟ್ಟಿ, ನಟ ರಾಜ್ ದೀಪಕ್ ಶೆಟ್ಟಿ, ನವೀನ್ ಶೆಟ್ಟಿ ಆರ್ಯನ್ಸ್ ಮತ್ತಿತರರು ಇದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದರು.