ಜೈ ಹನುಮಾನ್‌ ಚಿತ್ರದ ಚಿತ್ರೀಕರಣಕ್ಕೆ ಅಂಜನಾದ್ರಿಯಲ್ಲಿ ಚಾಲನೆ

KannadaprabhaNewsNetwork |  
Published : Feb 23, 2026, 02:30 AM IST
22ುಲು1,2 | Kannada Prabha

ಸಾರಾಂಶ

ಚಿತ್ರೀಕರಣಕ್ಕೆ ಪೂರ್ವದಲ್ಲಿ ನಟ ರಿಷಬ್ ಶೆಟ್ಟಿ ದಂಪತಿ ಆಂಜನೇಯ ಸ್ವಾಮಿಗೆ ಪೂಜೆ

ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಖ್ಯಾತ ನಟ ರಿಷಬ್‌ ಶೆಟ್ಟಿ ನಟಿಸಲಿರುವ ಜೈ ಹನುಮಾನ್‌ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.

ಕಾಂತಾರ ನಟ ರಿಷಬ್‌ ಶೆಟ್ಟಿ ಜೈ ಹನುಮಾನ್‌ ಚಿತ್ರದ ನಾಯಕ ನಟರಾಗಿದ್ದು, ಚಿತ್ರದ ನಿರ್ದೇಶಕ ಪ್ರಶಾಂತ ವರ್ಮಾ ಅವರ ಚಿತ್ರಕ್ಕೆ ಮೈತ್ರಿ ಮೂವೀಸ್ ಅವರ ನವೀನ್ ಯರನೇನಿ, ರವಿಶಂಕರ್ ನಿರ್ಮಾಪಕರಾಗಿದ್ದಾರೆ. ಚಿತ್ರೀಕರಣಕ್ಕೆ ಪೂರ್ವದಲ್ಲಿ ನಟ ರಿಷಬ್ ಶೆಟ್ಟಿ ದಂಪತಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಎರಡು ತಿಂಗಳ ಹಿಂದೆ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ನಟ ರಿಷಬ್‌ ಶೆಟ್ಟಿ ಅವರು ಜೈ ಹನುಮಾನ್‌ ಚಿತ್ರೀಕರಣ ಪ್ರಾರಂಭಿಸುವ ನಿರ್ಧಾರ ಕೈಗೊಂಡಿದ್ದರು. ಹನುಮ ಜನಿಸಿದ ಸ್ಥಳ ಪುಣ್ಯಭೂಮಿಯಾಗಿದ್ದು, ಇಲ್ಲಿಂದ ಚಿತ್ರೀಕರಣಗೊಂಡ ಎಲ್ಲ ಚಿತ್ರಗಳು ಯಶಸ್ವಿಗೊಂಡಿರುವ ಹಿನ್ನೆಲೆ ಮತ್ತು ಅಂಜನೇಯ ಜನ್ಮಸ್ಥಳ, ರಾಮಾಯಣ ಇತಿಹಾಸ, ಪಂಪಾಸರೋವರ ಸೇರಿದಂತೆ ಐತಿಹಾಸಿಕ ಸ್ಥಳಗಳು ಇಲ್ಲಿರುವುದರಿಂದ ಜೈ ಹನುಮಾನ್‌ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ನಿಗದಿಪಡಿಸಿ ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಅಂಜನಾದ್ರಿ ದೇವಸ್ಥಾನ ಸಮಿತಿಯಿಂದ ರಿಷಬ್ ಶೆಟ್ಟಿ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.

ನೂಕುನುಗ್ಗಲು: ಹೊಸಪೇಟೆಯಿಂದ ಅಂಜನಾದ್ರಿಗೆ ಆಗಮಿಸಿದ ಕಾಂತಾರ ಚಿತ್ರದ ನಟ ರಿಷಬ್‌ ಶೆಟ್ಟಿ ಅವರನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ನಡೆಸಿದರು. ರಾಂಪುರ ಮಾರ್ಗವಾಗಿ ವೇದಪಾಠ ಶಾಲೆಯ ಮೂಲಕ ಅಂಜನಾದ್ರಿ ಬೆಟ್ಟ ಹತ್ತಿದ ನಟನಿಗೆ ಪೊಲೀಸರು ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಒರಿಜಿನಲ್‌ ಚಾಯ್ಸ್‌ ಬ್ಯಾಡ್‌ ಚಾಯ್ಸ್‌. ಸೆಲ್ಲಿಂಗ್ ವಿಸ್ಕಿ ಈಸ್‌ ರಿಸ್ಕಿ’ : ಜಡ್ಜ್‌
ಉಚಿತ ಆರೋಗ್ಯ 10ನೇ ಗ್ಯಾರಂಟಿ ಯೋಜನೆ- ವಸತಿ 8, ಇ-ಖಾತಾ 9ನೇ ಗ್ಯಾರಂಟಿ ಸ್ಕೀಂ : ಡಿಕೆಶಿ