ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
"ಶ್ರೀ ಸಿದ್ಧಾರೂಢ ಮಹಾರಾಜ ಕೀ ಜೈ, ಜೈ ಜೈ ಸಿದ್ಧಾರೂಢ, ಹುಬ್ಬಳ್ಳಿ ಎಂಬುದು ಕಲ್ಯಾಣ; ಸಿದ್ಧಾರೂಢ ಬಸವಣ್ಣ "..! ಸೇರಿದಂತೆ ಹಲವಾರು ಜಯಘೋಷಗಳು ಆಕಾಶದಲ್ಲಿ ಪ್ರತಿಧ್ವನಿಸಿದಂತೆ ಕೇಳಿ ಬರುತ್ತಿದ್ದವು.
ಶಕ್ತಿ ಯೋಜನೆ: ಹೆಚ್ಚಿದ ಭಕ್ತಗಣಪ್ರತಿವರ್ಷ 3.5 ಲಕ್ಷದಿಂದ 3.5 ಲಕ್ಷ ವರೆಗೂ ಜಮೆಯಾಗುತ್ತಿದ್ದ ಭಕ್ತಗಣ, ಈ ಶಕ್ತಿ ಯೋಜನೆಯಿಂದ ಕೊಂಚ ಜಾಸ್ತಿಯಾಗಿತ್ತು. 5- 6 ಲಕ್ಷಕ್ಕೂ ಅಧಿಕ ಜನಸ್ತೋಮ ಜಮೆಯಾಗಿತ್ತು. ಮಹಾರಾಷ್ಟ್ರ, ಗೋವಾ, ಆಂಧ್ರ, ತೆಲಂಗಾಣ, ತಮಿಳನಾಡು ಸೇರಿದಂತೆ ಕರ್ನಾಟಕದ ಕಲಬುರಗಿ, ಬೀದರ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜನರು ಅಜ್ಜನ ರಥೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು.
ರಥಕ್ಕೆ ಚಾಲನೆ
ವಿವಿಧ ಮೇಳ
ಮಠದಿಂದ ಮಹಾದ್ವಾರದ ವರೆಗಿನ ರಥಬೀದಿಯ ಇಕ್ಕೆಲಗಳು ಭರ್ತಿಯಾಗಿದ್ದವು. ರಥಬೀದಿಯಂತೂ ಕಾಲಿಡಲೂ ಆಗದಷ್ಟು ಕಿಕ್ಕಿರಿದು ಭಕ್ತರಿಂದ ತುಂಬಿ ಹೋಗಿತ್ತು. ರಥಬೀದಿ ಅಕ್ಕಪಕ್ಕದಲ್ಲಿನ ಅಜ್ಜನ ತೇರನ್ನು ರಥಬೀದಿಯ ಅಕ್ಕಪಕ್ಕದ ಕಟ್ಟಡಗಳು, ಗಿಡಮರಗಳು ಸಹ ಗೋಪುರಗಳ ಮೇಲೆ ನಿಂತು ಜನ ವೀಕ್ಷಿಸಿದರು. ಯುವಕರು ತಮ್ಮ ಹತ್ತಿರ ರಥ ಬರುತ್ತಿದ್ದಂತೆ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಪುನಃ ಸಿದ್ಧಾರೂಢನ ಹೆಜ್ಜೆಯನ್ನೇ ಅನುಕರಿಸಿದ ಭಕ್ತರು ರಥದ ಹಿಂದೆಯೇ ಮಠದತ್ತ ತಾವೂ ತೆರಳಿದರು. ಅಜ್ಜನ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಲು ಮೂರ್ನಾಲ್ಕು ದಿನಗಳಿಂದಲೇ ವಿವಿಧ ಜಿಲ್ಲೆಗಳಿಂದ ಜನತೆ ಆಗಮಿಸಿದ್ದರು. ಹಲವರು ಮಠದಲ್ಲೇ ಶಿವರಾತ್ರಿಯ ಜಾಗರಣೆ ಕೈಗೊಂಡಿದ್ದರು.
ಹಲವರು ನೆಂಟರಿಷ್ಟರ, ಸ್ನೇಹಿತರ ಮನೆಯಲ್ಲಿದ್ದು ರಥೋತ್ಸವದ ವೇಳೆಗೆ ಮಠದತ್ತ ಹೆಜ್ಜೆ ಹಾಕಿದ್ದರು. ಮಠಕ್ಕೆ ಬಂದು ಸೇರುವ ಆರ್.ಎನ್. ಶೆಟ್ಟಿ ಫ್ಯಾಕ್ಟರಿ ರಸ್ತೆ, ಹೆಗ್ಗೇರಿ ರಸ್ತೆ, ಗಿರಣಿಚಾಳ್ ರಸ್ತೆ, ಹಳೇಹುಬ್ಬಳ್ಳಿ ಮಾರ್ಕೇಟ್ ರಸ್ತೆ, ಆನಂದನಗರ ರಸ್ತೆ, ಕಲಘಟಗಿ ರಸ್ತೆಗಳಲ್ಲೆಲ್ಲ ವಾಹನಗಳು ಮೂರ್ನಾಲ್ಕು ಕಿಮೀ ಉದ್ದಕ್ಕೂ ಸಾಲುಗಟ್ಟಿದ್ದವು. ಗೋಕುಲ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ವಿಕಾಸನಗರ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿ ರಥಬೀದಿಗೆ ಬಂದಿದ್ದರು ಭಕ್ತರು. ಹಾಗಾಗಿ ಎಲ್ಲೆಲ್ಲೂ ಟ್ರಾಫಿಕ್ ಜಾಮ ಸಹಜವಾಗಿತ್ತು.
ಅಜ್ಜನ ಜಾತ್ರೆಯಿಂದಾಗಿ ಇಲ್ಲಿನ ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧೆಡೆಗಳಿಂದ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಉಚಿತವಾಗಿ ಆಟೋ ಸೇವೆ ನೀಡಲಾಗಿತ್ತು. ಸರಿಸುಮಾರು 300ಕ್ಕೂ ಹೆಚ್ಚು ಆಟೋಗಳು ಉಚಿತವಾಗಿ ಸೇವೆ ಸಲ್ಲಿಸಿದವು.