- ಸನ್ನಡತೆಗೆ ಮೇಲೆ ಬಿಡುಗಡೆಯಾದ್ರೂ ದಂಡ ಕಟ್ಟಲಾಗದೆ ಜೈಲಲ್ಲೇ ಇದ್ದ ದುರ್ಗಪ್ಪ
- ಕೈದಿಯ ಶ್ರಮದ ಹಣ ಬಳಸಿ ಬಿಡುಗಡೆಗೆ ಜೈಲು ಅಧೀಕ್ಷಕಿ ಕ್ರಮ----
ಕನ್ನಡಪ್ರಭ ವಾರ್ತೆ ಕಲಬುರಗಿಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ಕೇಂದ್ರ ಕಾರಾಗೃಹ ಈ ಬಾರಿ ಅಲ್ಲಿನ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರ ಮಾನವೀಯತೆ, ಅಂತಃಕರಣದ ಸ್ಪರ್ಶ ವಿರುವಂತಹ ಆಡಳಿತಾತ್ಮಕ ಕ್ರಮದಿಂದಾಗಿ ಸುದ್ದಿಯಾಗಿದೆ.
ಕೊಲೆ ಆರೋಪದಡಿ ಜೈಲು ಸೇರಿದ್ದ ಕೈದಿ ದುರ್ಗಪ್ಪ ತನ್ನ ಸನ್ನಡತೆಯಿಂದಾಗಿ ಜೀವಾವದಿ ಜೈಲು ಶಿಕ್ಷೆಯಿಂದ ವಿನಾಯ್ತಿ ಪಡೆದು 1 ಲಕ್ಷ ರು ದಂಡ ಕಟ್ಟಿ ಮನೆಗೆ ಹೋಗುವ ಅವಕಾಶ ಪಡೆದಿದ್ದ. ಆದರೆ, ಈತನ ಮನೆ ಮಂದಿ ಯಾರೂ ಹಣ ಪಾವತಿಸಿ ಈತನನ್ನ ಊರಿಗೆ ಕರೆದೊಯ್ಯಲು ಮೂಗು ಮುರಿದಿದ್ದರಿಂದ ದುರ್ಗಪ್ಪ ಸನ್ನಡತೆಯಲ್ಲಿ ಶಿಕ್ಷೆಯಿಂದ ವಿನಾಯ್ತಿ ಪಡೆದರೂ ಅನಿವಾರ್ಯವಾಗಿ ಜೈಲಲ್ಲೇ ಕೊಳೆಯುವಂತಾಗಿತ್ತು.ಕಳೆದ 2024 ರ ಡಿಸೆಂಬರ್‌ನಲ್ಲಿ ನಡೆದ ಸನ್ನಡತೆಯ 7 ಮಂದಿ ಕೈದಿಗಳ ಬಿಡುಗಡೆ ಪಟ್ಟಿಯಲ್ಲೇ ಇದ್ದ ಹಿರಿಯ ದುರ್ಗಪ್ಪ(68) ನಿಗೆ ಕರೆದೊಯ್ಯಲು ಕುಟುಣಬದವರು ಬಾರದೆ ಇದ್ದಾಗ ಪೆಚ್ಚು ಮೋರೆ ಹಾಕಿದ್ದ ದುರ್ಗಪ್ಪನ ಅಸಹಾಯಕತೆ ಕಣ್ಣಾರೆ ಕಂಡಿದ್ದ ಮುಖ್ಯ ಅಧೀಕ್ಷಕಿ ಡಾ. ಅನಿತಾ ಕೈದಿಯನ್ನ ಮತ್ತೆ ಜೈಲಲ್ಲೇ ಮುಂದುವರಿಯವ ಅವಕಾಶ ಕಲ್ಪಿಸಿದ್ದರು.
ಮುಂದೆ ಈತನ ಪ್ರಕರಣವನ್ನ ಅಮೂಲಾಗ್ರವಾಗಿ ಪರಿಶೀಲಿಸಿದ ಡಾ. ಅನಿತಾ ಈತನನ್ನ ಕರೆದೊಯ್ಯಲು ಮನೆ ಮಂದಿ ಬಾರದಿರಲು ಹಣವೇ ಮುಖ್ಯ ಕಾರಣವೆಂದು ಅರಿತರು. ಜೊತೆಗೆ ದುರ್ಗಪ್ಪ ಜೈಲಲ್ಲಿದ್ದಾಗ ಅಡುಗೆ ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದ, ಅದಕ್ಕೆ ಆತನಿಗೆ ಕೂಲಿರೂಪದಲ್ಲಿ ಹಣವನ್ನೂ ನೀಡಲಾಗುತ್ತಿತ್ತು. ಅದೆಲ್ಲವೂ ಆತನ ಖಾತೆಗೇ ಜಮಾ ಆಗುತ್ತಿತ್ತು.ದುರ್ಗಪ್ಪನ ಬ್ಯಾಂಕ್ ಖಾತೆಯ ಮಾಹಿತಿ ಪಡೆದಾಗ ಅಲ್ಲಿ 2. 80 ಲಕ್ಷ ರು ಹಣ ಜಮಾ ಇರೋದು ಗೊತ್ತಾಗಿ ಡಾ. ಅನಿತಾ ದುರ್ಗಪ್ಪನನ್ನ ಅವರೂರಿಗೆ ಸಿಬ್ಬಂದಿ ಸಮೇತ ಕಳುಹಿಸಿ ಬ್ಯಾಂಕ್‌ಗೆ ಹೋಗಿ ಜಮಾ ಆಗಿದ್ದ ಹಣದ ರಾಶಿಯಿಂದ ದಂಡ ಭರಿಸಲು ಅದೆಷ್ಟು ಮೊತ್ತದ ಹಣ ಬೇಕೋ ಅದನ್ನ ವಿಥ್‌ಡ್ರಾ ಮಾಡಿಸಿದ್ದಾರೆ. ಕೈದಿ ದುರ್ಗಪ್ಪ ದಂಡ ತುಂಬಲು ಹಣದ ಸಮೇತ ಬಂದಾಕ್ಷಣವೇ ಆ ಹಣ ಪಡೆದುಕೊಂಡು ಕೈದಿಗೆ ಸೆರೆವಾಸದಿಂದ ಮುಕ್ತಿ ನೀಡಿದ್ದಾರೆ.
--------.....ಬಾಕ್ಸ್.....
ಚಿಂತಾಪುರದ ದುರ್ಗಪ್ಪನ ಚಿಂತೆಗೆ ಸಿಕ್ಕ ಪರಿಹಾರಕೈದಿ ದುಗ್ರಪ್ಪ ರಾಯಚೂರು ಜಿಲ್ಲೆಯ ಚಿಂತಾಪುರ ಗ್ರಾಮದ ನಿವಾಸಿ. ಕೊಲೆ ಪ್ರಕರಣದಲ್ಲಿ 2103 ರ ನ. 19 ರಂದು ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದ. ತನ್ನ ಸನ್ನಡತೆಯಿಂದಾಗಿ 2024 ರ ಡಿಸಂಬರ್ ತಿಂಗಳಲ್ಲೇ ದುರ್ಗಪ್ಪನಿಗೆ ಬಿಡುಗಡೆ ಭಾಗ್ಯ ದೊರಕಿತ್ತು, ಕೊಲೆಯಾದವರ ಕುಟುಂಬಕ್ಕೆ ನೀಡುವ ಪರಿಹಾರದ ಹಣದ ರೂಪದಲ್ಲಿ ಲಕ್ಷ ರು. ದಂಡ ತೆತ್ತು ಬಿಡುಗಡೆ ಹೊಂದುವಂತೆಯೂ ಸೂಚಿಸಲಾಗಿತ್ತು. ಬಂಧುಗಳು ಸಹ ದುರ್ಗಪ್ಪನಿಗೆ ಹಣ ಪಾವತಿಸಿ ಮನೆಗೆ ಕರೆದೊಯ್ಯಲು ಆಸಕ್ತಿ ತೋರಿರಲಿಲ್ಲ. ಇದರಿಂದಾಗಿ ಮತ್ತೆ 2 ತಿಂಗಳ ಬಹೆಚ್ಚುವರಿ ಜೈಲಲ್ಲೇ ಉಳಿಯುವಂತಾಗಿತ್ತು. ಜೈಲಲ್ಲೇ ಅಡುಗೆ ತಯ್ಯಾರಿಸುವ ಕೆಲಸದಲ್ಲಿದ್ದ ದುರ್ಗಪ್ಪನ ಖಾತೆಯಲ್ಲಿ ಜಮಾ ಇದ್ದ ಹಣವೇ ಇಂದು ಆತನ ಸೆರೆಮನೆ ಮುಕ್ತಿಗೆ ನೆರವಾಗಿತ್ತು.
-----------ಕೋಟ್.....
ಕಲಬುರಗಿ ಜೈಲಲ್ಲಿ ಸುಧಾರಣೆ ತರಲು ಅವಕಾಶಗಳು ಇವೆ. ನಾನಿಲ್ಲಿ ಬಂದ ದಿನದಿಂದ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಕೈದಿಗಳಿಗೆ ಶಿಕ್ಷೆ ಜೊತೆಗೇ ಅವರ ಸುಧಾರಣೆಯೂ ನಮ್ಮ ಹೊಣೆ. ಸನ್ನಡತೆ ಮೇಲೆ ದುರ್ಗಪ್ಪ ಬಿಡುಗಡೆಯಾದರೂ ಆತನನ್ನು ಕರೆದೊಯ್ಯಲು ಯಾರು ಬರಲಿಲ್ಲ. ಹಿರಿಯನಾದ್ದರಿಂದ ಹೊರಗೆ ಹಾಕೋದು ಸರಿಯಾದ ಕ್ರಮವಲ್ಲವೆಂದು ಆತನನ್ನು ಜೈಲಲ್ಲೇ ಉಳಿಸಿಕೊಂಡು ಆಡಳಿತಾತ್ಮಕ ಕ್ರಮಕ್ಕೆ ಮುಂದಾದೇವು. ಇದೀಗ ಆತನಿಗೆ ಊರಿಗೆ ಕಳುಹಿಸಕೊಡಲಾಗಿದೆ.-ಡಾ. ಅನಿತಾ ಮುಖ್ಯ ಅಧೀಕ್ಷಕಿ, ಕೇಂದ್ರ ಕಾರಾಗೃಹ, ಕಲಬುರಗಿ
---------ಫೋಟೋ- ಜೈಲರ
ಕಲಬುರಗಿ ಬಂದೀಖಾನೆಯ ಮುಖ್ಯ ಅಧೀಕ್ಷಕಿ ಡಾ. ಅನಿತಾ ಇವರೊಂದಿಗೆ ಕೈದಿ ದುರ್ಗಪ್ಪ---