ಧರ್ಮಸ್ಥಳ ತೇಜೋವಧೆ ಖಂಡಿಸಿ ಜೈನ ಸಮುದಾಯ ಮೌನ ಪ್ರತಿಭಟನೆ

KannadaprabhaNewsNetwork |  
Published : Aug 20, 2025, 01:30 AM IST
ಪುಣ್ಯಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಜೈನ ಸಮುದಾಯದಿಂದ ಮೌನ ಪ್ರತಿಭಟನಾ ಮೆರವಣಿಗೆ | Kannada Prabha

ಸಾರಾಂಶ

ಧರ್ಮಸ್ಥಳದ ತೇಜೋವಧೆ ಪ್ರಯತ್ನ ಖಂಡಿಸಿ ಮೂಡುಬಿದಿರೆ ಜೈನ ಧರ್ಮ ಹಿತ ರಕ್ಷಣಾ ಸಮಿತಿಯಿಂದ ‘ಶ್ರಾವಕರ ನಡೆ, ಧರ್ಮ ರಕ್ಷಣೆ ಕಡೆ’ ಜಾಥಾ ಮಂಗಳವಾರ ನಡೆಯಿತು.

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ತೇಜೋವಧೆ ಪ್ರಯತ್ನ ಖಂಡಿಸಿ ಇಲ್ಲಿನ ಜೈನ ಧರ್ಮ ಹಿತ ರಕ್ಷಣಾ ಸಮಿತಿಯಿಂದ ‘ಶ್ರಾವಕರ ನಡೆ, ಧರ್ಮ ರಕ್ಷಣೆ ಕಡೆ’ ಜಾಥಾ ಮಂಗಳವಾರ ನಡೆಯಿತು.

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಸಾವಿರ ಕಂಬದ ಬಸದಿ ಎದುರು ಜಾಥಾಕ್ಕೆ ಚಾಲನೆ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳವು ನಮ್ಮ ನಾಡಿನ ಕೋಟ್ಯಾಂತರ ಜನರ ನಂಬಿಕೆ, ಶ್ರದ್ಧೆಗಳ ಧಾರ್ಮಿಕ ಪುಣ್ಯಸ್ಥಳವಾಗಿದೆ. ಇಂಥ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಸಮಾಜ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಹೆಮ್ಮೆಯ ನಾಯಕರು. ಇಂಥ ಮೇರು ವ್ಯಕ್ತಿಯ ಏಳಿಗೆಯನ್ನು ಸಹಿಸಿದ ಸಮಾಜ ವಿರೋಧಿ ವಿಕೃತ ಮನಸ್ಸಿನ ಸಮಾಜ ಘಾತಕ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿವೆ ಎಂದು ಆಕ್ಷೇಪಿಸಿದರು.ಶ್ರೀಕ್ಷೇತ್ರ ಹಾಗೂ ಹೆಗ್ಗಡೆ ಅವರ ಕುರಿತು ಅಪಪ್ರಚಾರ, ನಿಂದನೆ, ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವುದರ ಮೂಲಕ, ಸಮಾಜದಲ್ಲಿ ಅಶಾಂತಿ, ಭಯದ ವಾತಾವರಣ ಸೃಷಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ನಮ್ಮ ಶ್ರದ್ದೆ ಹಾಗೂ ನಂಬಿಕೆಗಳಿಗೆ ತೀವ್ರ ಘಾಸಿಯಾಗಿದೆ ಎಂದರು.ನಿರಂತವಾಗಿ ಸುಳ್ಳು ಆರೋಪ ಮಾಡುತ್ತಿರುವ ಕ್ರಿಮಿನಲ್ ಹಿನ್ನಲೆಯ ಮೂಲ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಜೈನ ಸಮುದಾಯದ ಮುಖಂಡರು ತಾಲೂಕು ತಹಸೀಲ್ದಾರ್ ಶ್ರೀಧರ್ ಮುಂದಲಮನಿ ಅವರಿಗೆ ಮನವಿ ಸಲ್ಲಿಸಿದರು.ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕುಲದೀಪ ಎಂ. ಚೌಟರ ಅರಮನೆ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪುರಸಭೆ ಸದಸ್ಯೆ ಶ್ವೇತಾ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪ್ರಮುಖರಾದ ಮಹೇಂದ್ರವರ್ಮ ಜೈನ್, ಶೈಲೇಂದ್ರ ಕುಮಾರ್, ಸಂಪತ್ ಸಾಮ್ರಾಜ್ಯ, ಕೃಷ್ಣರಾಜ ಹೆಗ್ಡೆ, ರಾಜವರ್ಮ ಬೈಲಂಗಡಿ, ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಸುಧೇಶ್ ಕುಮಾರ್, ಅಕ್ಷಯ್ ಜೈನ್, ಆದರ್ಶ್ ಮೂಡುಬಿದಿರೆ ಶಾಂತಿ ಪ್ರಸಾದ್ ಹೆಗ್ಡೆ, ಅಭಿಜಿತ್ ಎಂ., ನಾಗವರ್ಮ ಜೈನ್, ಕೆ.ಪಿ ಜಗದೀಶ್ ಅಧಿಕಾರಿ, ವಕೀಲರಾದ ದಿವಿಜೇಂದ್ರ, ಶ್ವೇತಾ ಜೈನ್, ಸುಭಾಶ್ಚಂದ್ರ ಚೌಟ ಸಹಿತ ಜೈನ ಸಮುದಾಯದವರು ಪಾಲ್ಗೊಂಡರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ