ಪುರುಷರ ಸ್ಥಾಪಿತ ಸಿದ್ಧಾಂತವನ್ನು ಮಹಿಳೆಯರೂ ಮಾಡಬೇಕಿದೆ

KannadaprabhaNewsNetwork | Published : Mar 20, 2025 1:17 AM

ಸಾರಾಂಶ

ಆರ್ಥಿಕ ಸ್ವಾತಂತ್ರ್ಯ ಇಲ್ಲದಿದ್ದರೆ ನಮಗೆ ಮುಕ್ತ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು ಸಣ್ಣ ಉದ್ಯಮಿಗಳಾಗಿ ಬೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಪುರುಷರ ಸ್ಥಾಪಿತ ಸಿದ್ಧಾಂತವನ್ನು ರಾಜಕೀಯದಲ್ಲಿ ಮಹಿಳೆಯರು ಮಾಡಬೇಕಿದ್ದು ಅದಕ್ಕೆ ಸಂಬಂಧಿಸಿದ ಕಾನೂನು ಇದೆ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎನ್‌. ಉಷಾರಾಣಿ ಹೇಳಿದರು.ಮಾನಸ ಗಂಗೋತ್ರಿಯ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಕನ್ನಡ ಲೇಖಕಿಯರ ಟ್ರಸ್ಟ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸವಾನತೆ ಹೊಂದಬೇಕು. ಮಹಿಳೆಯರು ಸಮಪಾಲು ಇದ್ದರು ಇನ್ನಷ್ಟು ಹೋರಾಟ ನಡೆಸಬೇಕಿದೆ ಎಂದರು. ಆರ್ಥಿಕ ಸ್ವಾತಂತ್ರ್ಯ ಇಲ್ಲದಿದ್ದರೆ ನಮಗೆ ಮುಕ್ತ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು ಸಣ್ಣ ಉದ್ಯಮಿಗಳಾಗಿ ಬೆಳೆದಿದ್ದಾರೆ. ಪ್ರತಿಯೊಬ್ಬ ಮಹಿಳೆಯರು ಕೂಡ ಹಣಕಾಸು ವ್ಯವಹಾರದ ಜ್ಞಾನ ಹೊಂದಬೇಕು. ಗ್ರಾಮೀಣ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಬೇಕಿದ್ದು ವಿದ್ಯಾವಂತ ಮಹಿಳೆಯರು ಮಾತ್ರ ಮೌಲಿಕ ಯುವ ಜನಾಂಗವನ್ನು ರೂಪಿಸಬಲ್ಲಳು. ಅದು ದೇಶಕ್ಕೆ ಆಸ್ತಿಯಾಗಿದೆ ಎಂದು ಅವರು ಹೇಳಿದರು.ಮಹಿಳೆಯರು ಮತ್ತು ಪುರುಷರು ಸಮಾನವಾಗಿ ಒಟ್ಟಾಗಿ ನಿಂತು, ಪರಸ್ಪರ ಉನ್ನತ ಎತ್ತರಕ್ಕೆ ಏರಿಸುವ ಭವಿಷ್ಯ ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಬೇಕು. ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗುತ್ತದೆ ಮತ್ತು ಒಟ್ಟಾಗಿ, ಭವಿಷ್ಯದ ಪೀಳಿಗೆಗೆ ಉತ್ತಮ ನಾಳೆಯನ್ನು ರೂಪಿಸಬಹುದು. ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ಮಾಡದೇ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಹಾಗೆಯೇ ಮಹಿಳೆಯರು ನಮ್ಮ ಸಂಸ್ಕೃತಿ ಮರೆಯಬಾರದು ಎಂದರು.ಮಹಿಳೆಯರು ಅತ್ಯಂತ ಜಾಗರೂಕರಾಗಿದ್ದು ಮಕ್ಕಳ ಮತ್ತು ಸಾಂಸಾರಿಕ ಸಮಸ್ಯೆಗಳ ಬಗ್ಗೆ ಸಮಯೋಚಿತ ತೀರ್ಮಾನ ತೆಗೆದುಕೊಳ್ಳುವ ಹಾಗೂ ಸಂಬಂಧಗಳನ್ನು ಬೆಸೆಯುವ ಕೌಶಲ್ಯವನ್ನು ಬೆಳೆಸಿಕೊಳ್ಳಿ ರಾಜಕೀಯದಲ್ಲಿ ಭಾಗವಹಿಸದಿದ್ದರೆ ನೀತಿ ನಿಯಮ ರೂಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಟ್ಟರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಾಧ್ಯ. ಮಹಿಳೆ ಒಂದೇ ಕ್ಷೇತ್ರ ಅಲ್ಲದೇ ಹಲವು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಇಂದು ಇಡೀ ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ ಎಂದು ಅವರು ತಿಳಿಸಿದರು.ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಧೈರ್ಯವಾಗಿ ಮುಂದೆ ಬಂದು ಕಾನೂನಿನ ನೆರವು ಪಡೆದುಕೊಳ್ಳಬೇಕು. ಮಕ್ಕಳಿಗೆ ಮತ್ತು ಮಹಿಳೆಯರ ರಕ್ಷಣೆಗೆ ಹಲವು ಕಾನೂನು ಜಾರಿಗೆ ತರಲಾಗಿದೆ. ಇದರ ಬಗ್ಗೆ ತಿಳಿದುಕೊಂಡರೆ ಮುಂದೆ ಯಾರಿಗಾದರೂ ಅನ್ಯಾಯವಾದಾಗ ಅವರಿಗೆ ನೀವು ಸಹಾಯ ಮಾಡಬಹುದು ಎಂದರು.ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ಡಾ. ವೈ.ಸಿ. ಭಾನುಮತಿ ಹಾಗೂ ವಿಜ್ಞಾನ ಲೇಖಕಿ ಶ್ರೀಮತಿ ಹರಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕನ್ನಡ ಲೇಖಕಿಯರ ಟ್ರಸ್ಟ್‌ ನ ಉಪಾಧ್ಯಕ್ಷೆ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಡಿ. ಶಶಿಕಲಾ, ಕನ್ನಡ ಲೇಖಕಿಯರ ಟ್ರಸ್ಟ್‌ ನ ಅಧ್ಯಕ್ಷೆ ಪ್ರೊ. ಪದ್ಮಾಶೇಖರ್, ಹೇಮಾ ನಂದೀಶ್, ಮೀನಾ ಮೈಸೂರು, ಉಷಾ ನರಸಿಂಹನ್, ಪ್ರೊ.ಸ.ನ. ಗಾಯತ್ರಿ ಮೊದಲಾದವರು ಇದ್ದರು.

Share this article