ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೇಂದ್ರ ಜಲಶಕ್ತಿ ಮಂತ್ರಾಲಯ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಪ್ರತಿಯೊಂದು ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಮನೆ ಮನೆಗೆ ಗಂಗೆ ಎಂಬ ಘೋಷಣೆಯೊಂದಿಗೆ ಪ್ರತಿಯೊಂದು ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ನೀಡಿದೆ ಎಂದರು. ಈ ಒಂದು ಯೋಜನೆಯಲ್ಲಿ ಪ್ರತಿಯೊಂದು ಮನೆಗೂ ಶುದ್ಧ ಮತ್ತು ಸುರಕ್ಷಿತ ನೀರನ್ನು ನೀಡುವ ಒಂದು ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಇಂಗು ಗುಂಡಿ ಮತ್ತು ಕೈ ತೋಟ ನಿರ್ಮಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಪ್ರೇರಣೆ ಸಿಗಲಿ ಎಂದು ಗ್ರಾಮ ದೇವತೆ ಹಬ್ಬದಂದು ನಡೆಸಲಾಗಿದೆ ಎಂದರು.
ಇಂಗು ಗುಂಡಿ ಮತ್ತು ಕೈ ತೋಟ ನಿರ್ಮಿಸಿಕೊಂಡರೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಮುಂದಿನ ಪೀಳಿಗೆಗೆ ನೀರಿನ ಉಳಿತಾಯ ಮಾಡಬಹುದಾಗಿದೆ. ಕಾರ್ಯಾತ್ಮಕ ನಳ ಸಂಪರ್ಕದಲ್ಲೂ ಸಹ ಭಾಗಿತ್ವ ಪಡೆಯಬಹುದಾಗಿದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷರಾದ ಜಿ.ಮಹೇಶ್, ರಾಚಪ್ಪ, ಹೊಣಕಾರನಾಯಕ, ಬಸವನಾಯಕ, ಚೈತ್ರ ಮಲ್ಲಿಕಾರ್ಜುನ, ಮುಖಂಡರಾದ ಮಹದೇವನಾಯಕ ಹಾಗೂ ಗ್ರಾಮಸ್ಥರು, ಐಎಸ್‌ಆರ್‌ಎ ತಂಡದ ಸಿಬ್ಬಂದಿ ಇದ್ದರು.