ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೂರದ ನಗರಗಳಿಗೆ ಪ್ರಯಾಣಿಸದೇ, ಬೆಳಗಾವಿಯಲ್ಲೇ ಜಾಗತಿಕ ಮಟ್ಟದ ಕಣ್ಣು ಚಿಕಿತ್ಸೆಯನ್ನು ಪಡೆಯುವ ಹಕ್ಕು ಬೆಳಗಾವಿಯ ಜನರಿಗೆ ಇದೆ. ಡಾ.ಲಕ್ಷ್ಮಣ ಜಂಬಗಿ ಹಾಗೂ ಡಾ.ವರ್ಷಾ ಜಂಬಗಿ ಅವರ 30 ವರ್ಷಗಳ ಸೇವಾ ಪರಂಪರೆಯ ಮೇಲೆ ನಿರ್ಮಿತವಾಗಿರುವ ಈ ಸಂಸ್ಥೆ, ಮಾನವೀಯ ಸೇವೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ರೋಗಿಗಳಿಗೆ ಅತಿ ಶೀಘ್ರ ಹಾಗೂ ಉತ್ತಮ ದೃಷ್ಟಿ ಫಲಿತಾಂಶ ಒದಗಿಸುತ್ತದೆ ಎಂದು ತಿಳಿಸಿದರು.ನಮ್ಮ ನೇತ್ರ ಆಸ್ಪತ್ಪೆಯು 35,000 ಚದರ ಅಡಿಗಳ ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ನೇತ್ರ ಸಂಸ್ಥೆ ಆರಂಭವಾಗುತ್ತಿದೆ. ಒಂದೇ ಸೂರಿನಡಿ ಸಂಪೂರ್ಣ ಕಣ್ಣಿನ ಚಿಕಿತ್ಸೆಯನ್ನು ಒದಗಿಸುವ ಈ ಸಂಸ್ಥೆಯಲ್ಲಿ ಕ್ಯಾಟರಾಕ್ಟ್, ಕಾರ್ನಿಯಾ, ರೆಟಿನಾ, ಗ್ಲೂಕೋಮಾ, ಮಕ್ಕಳ ನೇತ್ರಚಿಕಿತ್ಸೆ, ಒಕ್ಯುಲೋಪ್ಲಾಸ್ಟಿ, ನ್ಯೂರೋ-ಆಫ್ತಾಲ್ಮಾಲಜಿ, ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸೆ ಸೇರಿದಂತೆ ವಿಶೇಷ ಡ್ರೈ ಐ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಸೌಲಭ್ಯಗಳಿವೆ.
ಈ ಪ್ರದೇಶದಲ್ಲೇ ಮೊದಲ ಬಾರಿಗೆ ರೋಬೋಟಿಕ್ 4 ಡಿ ಫ್ಯಾಕೋ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ಮುಕ್ತಿಗಾಗಿ ಜೈಸ್ಸ್ ಎಂಇಎಲ್ 90 ಎಕ್ಸೈಮರ್ ಲೇಸರ್ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಹೆಚ್ಚಿನ ನಿಖರತೆ, ಸುರಕ್ಷತೆ ಹಾಗೂ ವೇಗವಾದ ಗುಣಮುಖತೆ ಈ ತಂತ್ರಜ್ಞಾನದ ವಿಶೇಷತೆಗಳಾಗಿವೆ ಎಂದು ತಿಳಿಸಿದರು.ಡಾ.ಅಮೋಘ ಜಂಬಗಿ ಅವರೊಂದಿಗೆ ವಿವಿಧ ಉಪವಿಭಾಗಗಳಲ್ಲಿ ಫೆಲೋಶಿಪ್ ಪಡೆದ ಪರಿಣತ ವೈದ್ಯರ ತಂಡ ಕಾರ್ಯನಿರ್ವಹಿಸಲಿದ್ದು, ಡಾ.ಜಗದೀಶ ಪಾಟೀಲ, ಡಾ.ಹೇಮಂತ್, ಡಾ.ಸ್ನೇಹಾ ಬಂಡೂರ್ಗೆ ಹಾಗೂ ಡಾ.ಮಿತಾಲಿ ಶಾ ಸೇರಿದಂತೆ ತಜ್ಞ ವೈದ್ಯರು ಸೇವೆ ಸಲ್ಲಿಸಲಿದ್ದಾರೆ. ದಿನದ 24 ಗಂಟೆಗಳೂ ಸಮಗ್ರ ನೇತ್ರ ಆರೈಕೆ ಲಭ್ಯವಾಗಲಿದೆ. ಸಂಸ್ಥೆಯು ಉತ್ತಮ ಚಿಕಿತ್ಸೆಗಳೊಂದಿಗೆ ಸಮುದಾಯ ಮಟ್ಟದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಎಲ್ಲ ವರ್ಗದ ರೋಗಿಗಳಿಗೆ ಗುಣಮಟ್ಟದ ಕಣ್ಣಿಗೆ ಚಿಕಿತ್ಸೆ ದೊರಕುವಂತೆ ಕಾರ್ಯನಿರ್ವಹಿಸಲಿದೆ. ಉದ್ಘಾಟನಾ ಸಮಾರಂಭಕ್ಕೆ ಗಣ್ಯರು ಹಾಗೂ ವಿವಿಧ ಸಮುದಾಯಗಳ ನಾಯಕರು ಉಪಸ್ಥಿತರಲಿದ್ದಾರೆ. ಇದರಿಂದ ಬೆಳಗಾವಿಯಲ್ಲಿ ವಿಶ್ವಮಟ್ಟದ ನೇತ್ರ ಆರೈಕೆ ಸುಲಭವಾಗಿ ಲಭ್ಯವಾಗುವ ಮಹತ್ವದ ಘಟ್ಟವಾಗಲಿದೆ ಎಂದು ಮಾಹಿತಿ ನೀಡಿದರು.