ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಉತ್ಕೃಷ್ಟ ತಂತ್ರಜ್ಞಾನ ಹೊಂದಿದೆ: ಡಾ.ಶಿವಲಿಂಗಸ್ವಾಮಿ

KannadaprabhaNewsNetwork | Published : Mar 9, 2025 1:46 AM

ಸಾರಾಂಶ

ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಉತ್ಕೃಷ್ಟ ತಂತ್ರಜ್ಞಾನ ಹೊಂದಿದೆ. ಬಾಹ್ಯಗ್ರಹಗಳು, ನಕ್ಷತ್ರಗಳು, ಕಪ್ಪುಕುಳಿಗಳ ಉಗಮ, ಕಪ್ಪುದ್ರವ್ಯ ಮತ್ತು ಕಪ್ಪುಶಕ್ತಿಯ ಇರುವಿಕೆಯ ಅಧ್ಯಯನದ ಬಗ್ಗೆ ಅನುಕೂಲಕಾರಿಯಾಗಿದೆ. ಶಕ್ತಿ ಸಂರಕ್ಷಣಾ ವಿಜ್ಞಾನದಲ್ಲಿ ಕ್ರಯೋಜನಿಕ್ ತಂತ್ರಜ್ಞಾನದಂತಹ ಉನ್ನತ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಸಂಶೋಧನೆಯಲ್ಲಿ ತೊಡಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಉತ್ಕೃಷ್ಟ ತಂತ್ರಜ್ಞಾನ ಹೊಂದಿದೆ. ಬಾಹ್ಯಗ್ರಹಗಳು, ನಕ್ಷತ್ರಗಳು, ಕಪ್ಪುಕುಳಿಗಳ ಉಗಮ, ಕಪ್ಪುದ್ರವ್ಯ ಮತ್ತು ಕಪ್ಪುಶಕ್ತಿಯ ಇರುವಿಕೆಯ ಅಧ್ಯಯನದ ಬಗ್ಗೆ ಅನುಕೂಲಕಾರಿಯಾಗಿದೆ ಎಂದು ಮೈಸೂರಿನ ಮಹಾರಾಣಿ ಕಾಲೇಜು ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶಿವಲಿಂಗಸ್ವಾಮಿ ಪ್ರತಿಪಾದಿಸಿದರು.

ನಗರದ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಸರ್ಕಾರಿ ಮಹಿಳಾ ಮಹಾವಿದ್ಯಾಲಯ (ಸ್ವಾಯತ್ತ) ಹಾಗೂ ತಾಂತ್ರಿಕ ವಿಭಾಗದಿಂದ ಭೌತಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು ಕುರಿತು ನಡೆದ ಭೌತಶಾಸ್ತ್ರ ವಿಭಾಗದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

ಶಕ್ತಿ ಸಂರಕ್ಷಣಾ ವಿಜ್ಞಾನದಲ್ಲಿ ಕ್ರಯೋಜನಿಕ್ ತಂತ್ರಜ್ಞಾನದಂತಹ ಉನ್ನತ ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಸಂಶೋಧನೆಯಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎ.ರಘು ಮಾತನಾಡಿದರು. ವಿಭಾಗದ ಮುಖ್ಯಸ್ಥರಾದ ಪ್ರೊ. ಹೇಮಲತ ಅವರು ಭೌತಶಾಸ್ತ್ರದ ಪ್ರಗತಿಗಳು ವಿವಿಧ ಕ್ಷೇತ್ರಗಳಲ್ಲಿ ಹೊಸ ಅನ್ವಯಿಕೆಗಳಿಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ವಿವರಿಸಿದರು.

ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜಪ್ರಭು ಉದ್ಘಾಟಿಸಿದರು. ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಆರ್.ಎಸ್.ಮಧುಕೇಶ್ವರ, ಲತಾ, ಕೆ.ಪಿ. ರವಿಕಿರಣ್, ಡಾ.ಕೆ.ಎಂ.ಮಂಗಳಮ್ಮ, ಡಾ.ಎ.ರಘು ಇತರರು ಭಾಗವಹಿಸಿದ್ದರು.

ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿ ಮಹಾಲಿಂಗಪ್ಪ ಆಯ್ಕೆ

ಮಂಡ್ಯ:

ಕರ್ನಾಟಕ ಮಾನವ ಸಂಪನ್ಮೂಲ ಸೇವೆ ಒದಗಿಸುವ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾಗಿ ಮಹಾಲಿಂಗಪ್ಪ (ಮಹಾಲಿಂಗೇಗೌಡ ಮುದ್ದನಘಟ್ಟ) ಆಯ್ಕೆಯಾಗಿದ್ದಾರೆ.

ರಾಜ್ಯಕ್ಕೆ ಸೇರಿದ ಅಸಂಘಟಿತ ಗುತ್ತಿಗೆದಾರ /ಏಜೆನ್ಸಿ ಸಂಸ್ಥೆಗಳ / ಮಾಲೀಕರನ್ನು ಒಟ್ಟುಗೂಡಿಸುವ ಉದ್ದೇಶವನ್ನು ಸಂಘ ಹೊಂದಿದ್ದು, ರಾಜ್ಯ, ಹೊರ ರಾಜ್ಯ, ವಿದೇಶಗಳು ಸೇರಿದಂತೆ ಈ ಕ್ಷೇತ್ರದಲ್ಲಿ 50 ಲಕ್ಷಕ್ಕೂ ಅಧಿಕ ಜನರಿಗೆ ಹೊರಗುತ್ತಿಗೆ ಮೂಲಕ ಲಕ್ಷಾಂತರ ಜನರಿಗೆ ನೇರ ಉದ್ಯೋಗ ಒದಗಿಸಿ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ. ಸಂಸ್ಥೆಗೆ ಮೊದಲ ಅಧ್ಯಕ್ಷರಾಗಿ ಮಂಡ್ಯದ ಮಹಾಲಿಂಗಪ್ಪ (ಮಹಾಲಿಂಗೇಗೌಡ ಮುದ್ದನಘಟ್ಟ) ಆಯ್ಕೆಯಾಗಿದ್ದಾರೆ.

ಮಹಾಲಿಂಗೇಗೌಡ ಮುದ್ದನಘಟ್ಟ ಸೇವಾ ಟ್ರಸ್ಟ್ ಮೂಲಕ ಹಲವಾರು ಸಮಾಜಿಕ ಸೇವಾ ಕಾರ್‍ಯದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ತಾಲೂಕಿನ ಬಸರಾಳು ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುವ ಮೂಲಕ ಗ್ರಾಮೀಣ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು.

Share this article