ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಅವರು ಪಟ್ಟಣದ ಪತ್ರಕರ್ತರ ಭವನದ ಹತ್ತಿರ ಇರುವ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಾಲೂಕು ಕಸಾಪ ಗೌರವಾನ್ವಿತ ಸದಸ್ಯರು ಹಾಗೂ ಹೋರಾಟಗಾರರು ಮತ್ತು ಸಾಹಿತ್ಯಾಭಿಮಾನಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಇದ್ದ ಸರ್ವಾಧಿಕಾರಿ ಅಧ್ಯಕ್ಷರ ವಿರುದ್ಧ ನಾವು ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯ ಎದುರಾಗಿತ್ತು. ಬೀದಿ ಹೋರಾಟ ಹಾಗೂ ಕಾನೂನು ಹೋರಾಟ ಮಾಡಿ ಒಂದೂವರೆ ವರ್ಷದ ನಂತರ ಆ ಸ್ಥಾನದಿಂದ ಅವರನ್ನು ಕೆಳಗಿಳಿಸಿದ್ದೇವೆ. ಇಲ್ಲದಿದ್ದರೆ ಪರಿಷತ್ ಉಳಿಯುತ್ತಿರಲಿಲ್ಲ ಎಂದು ಹೇಳಿದರು.
ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ. ಹೇಗಾದರೂ ಮಾಡಿ ಪರಿಷತ್ ಅನ್ನು ಉಳಿಸಿಕೊಳ್ಳಬೇಕು. ಕಳೆದ ಎರಡು ಅವಧಿಯಲ್ಲಿ ಅಧಿಕಾರಶಾಹಿಗಳು ಬಂದು ಪರಿಷತನ್ನು ಅಧೋಗತಿಗೆ ತೆಗದುಕೊಂಡು ಹೋಗಿದ್ದಾರೆ. ಹತ್ತು ವರ್ಷಗಳ ಹಿಂದೆ ಪರಿಷತ್ ಚೆನ್ನಾಗಿಯೇ ಇತ್ತು, ಚಾಮರಾಜಪೇಟೆಯ ಕಸಾಪ ಕಚೇರಿ ಆವರಣದಲ್ಲಿ ನಿತ್ಯ ಜನಜಾತ್ರೆ ಕಾಣುತ್ತಿತ್ತು. ಸಾಹಿತಿಗಳ ಸಭೆಗಳು, ಹೋರಾಟಗಾರ ಚರ್ಚೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅಲ್ಲಿಗೆ ಜನ ಬರುತ್ತಿದ್ದರು. ಆದರೆ, ಕಳೆದ ಅಧ್ಯಕ್ಷರ ಪರಿಷತ್‌ಗೆ ಜನರು, ಹೋರಾಟಗಾರರು ಅವಧಿಯಲ್ಲಿ ಸಾಹಿತಿಗಳು, ಬರಲೇಬಾರದು ಎಂಬ ಕೆಟ್ಟ ಹಠವಿತ್ತೋ ಗೊತ್ತಿಲ್ಲ. ಅಲ್ಲಿನ ಸಭಾಂಗಣಗಳ ಬಾಡಿಗೆ ಹೆಚ್ಚಳ ಮಾಡಿದರು. ಅದೇ ಕಾರಣಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ, ಗೋಷ್ಠಿಗಳು, ಸಭೆಗಳು ಯಾವುದೂ ಪರಿಷತ್‌ನಲ್ಲಿ ನಡೆಯಲಿಲ್ಲ ಎಂದರು. ಈ ಹಿಂದೆ ಜಾರಿಯಲ್ಲಿದ್ದ ಕನ್ನಡ ಕನ್ನಡ ನಿಘಂಟು ಯೋಜನೆಯನ್ನು ಪ್ರತಿ ಕನ್ನಡಿಗರ ಮನೆಗೆ ತಲುಪಿಸುವ ಕಾರ್ಯ, ಯುವ ಲೇಖಕರಿಗೆ ತರಬೇತಿ ಶಿಬಿರ, ಕನ್ನಡ ಪುಸ್ತಕ ಸಂತೆ, ಹೊರನಾಡಿನ ಲೇಖಕರ ಕೃತಿಗಳ ಪ್ರಕಟ ಯೋಜನೆ ಮರುಸ್ಥಾಪಿಸಲಾಗುವುದು. ಜೊತೆಗೆ ನಾಡು-ನುಡಿ, ಭಾಷೆ, ನೆಲ-ಜಲ ಹಾಗೂ ಕನ್ನಡ ಶಾಲೆ ಉಳಿವಿಗೆ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಧರ್ಮರಾಜ್ ಖಡ್ಗ, ಹಿರಿಯ ಪತ್ರಕರ್ತರು ಹಾಗೂ ಕನ್ನಡ ಪರ ಹೋರಾಟಗಾರರಾದ ಪುಟ್ಟಣ್ಣ ಗೋಕಾಕ್, ಪ್ರಕಾಶ್‌ಮೂರ್ತಿ, ಸಿ. ಕೆ. ರಾಮೇಗೌಡ, ಬಾನಾ ಚಂದ್ರಶೇಖರ್, ಶಂಕರ ಪ್ರಸಾದ್, ದಿನೇಶ್, ರೈತ ಸಂಘದ ಮುಖಂಡರಾದ ಸಿ. ಜಿ. ರವಿ, ಬರಗೂರು ಶಂಕರ್, ಮೀಸೆ ಮಂಜಣ್ಣ, ಸಾಹಿತಿಗಳಾದ ಉಮೇಶ್ ತೆಂಕನಹಳ್ಳಿ, ಹಳ್ಳಿ ವೆಂಕಟೇಶ್, ವೆಂಕಟೇಶ್ ಪ್ರಸಾದ್, ಕನ್ಯಾಶ್ರೀ, ಹೇಮಲತಾ, ಗಿರೀಶ್, ಕೆಂಪೇಗೌಡ ಸೇನೆ ಅಧ್ಯಕ್ಷ ಮಹೇಶ್, ರಾಜ್ಯ ಉಪಾಧ್ಯಕ್ಷ ಎಂ. ಎನ್. ಗಣೇಶ್ ಮತ್ತಿತರಿದ್ದರು.