ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಯುವ ಘಟಕ ಜಿಲ್ಲಾಧ್ಯಕ್ಷರಾಗಿ ಜನಾರ್ಧನ್ ನೇಮಕ

KannadaprabhaNewsNetwork |  
Published : Sep 07, 2025, 01:00 AM IST
6ಕೆಆರ್ ಎಂಎನ್ 8.ಜೆಪಿಜಿಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಯುವ ಘಟಕ ನೂತನ ಜಿಲ್ಲಾಧ್ಯಕ್ಷ ಎಸ್.ಜನಾರ್ಧನ್ ಅವರನ್ನು ಅಭಿನಂದಿಸಲಾಯಿತು | Kannada Prabha

ಸಾರಾಂಶ

ರಾಮನಗರ: ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಯುವ ಘಟಕವನ್ನು ರಚಿಸಲಾಗಿದ್ದು, ನೂತನ ಜಿಲ್ಲಾಧ್ಯಕ್ಷರಾಗಿ ಎಸ್. ಜನಾರ್ಧನ್ ಮತ್ತು ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ನೇಮಕಗೊಂಡಿದ್ದಾರೆ.

ರಾಮನಗರ: ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಯುವ ಘಟಕವನ್ನು ರಚಿಸಲಾಗಿದ್ದು, ನೂತನ ಜಿಲ್ಲಾಧ್ಯಕ್ಷರಾಗಿ ಎಸ್. ಜನಾರ್ಧನ್ ಮತ್ತು ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ನೇಮಕಗೊಂಡಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಪದಾಧಿಕಾರಿಗಳು ಸಭೆ ನಡೆಸಿ ಒಕ್ಕೂಟದ ಯುವ ಘಟಕವನ್ನು ರಚನೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿನಯ್, ಶಿವಣ್ಣ, ಸಂಘಟನಾ ಕಾರ್ಯದರ್ಶಿ ಪ್ರವೀಣ್,

ರಾಮನಗರ ತಾಲೂಕು ಅಧ್ಯಕ್ಷರಾಗಿ ಶಂಕರ್ ಗೊಲ್ಲರದೊಡ್ಡಿ, ಕನಕಪುರ ತಾಲೂಕು ಅಧ್ಯಕ್ಷರಾಗಿ ವಿನೋದ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.

ಯುವ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್, ಜಿಲ್ಲೆಯ ಐದು ತಾಲುಕುಗಳಲ್ಲಿ ಸಣ್ಣ ಸಮುದಾಯ ಗಳಿಗೆ ತೊಂದರೆಯಾದರೆ ಯುವ ಘಟಕ1 ಹೋರಾಟ ಮಾಡಬೇಕು. ಅಧ್ಯಕ್ಷರಾಗುವುದು ಮುಖ್ಯವಲ್ಲ. ನೊಂದವರ ಧ್ವನಿಯಾಗಿ ಆ ಹುದ್ದೆಯನ್ನು ಸಮರ್ಪಕವಾಗಿ ನಿಭಾಯಿಸುವುದು ಮುಖ್ಯ ಎಂದರು.

ಯುವ ಘಟಕದ ಪದಾಧಿಕಾರಿಗಳು ಸಣ್ಣ ಸಮುದಾಯಗಳ ಆಶೋತ್ತರಗಳಿಗೆ ಸ್ಪಂದಿಸಬೇಕು. ಜೊತೆಗೆ ಒಕ್ಕೂಟವನ್ನು ಸಂಘಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಒಕ್ಕೂಟಕ್ಕೆ ಕೆಟ್ಟ ಹೆಸರು ಬರದಂತೆ ಅಕ್ರಮ ಚಟುವಟಿಕೆಗಳಿಂದ ದೂರ ಉಳಿಯಬೇಕು. ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸಂಘಟನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣ್ ಮಾತನಾಡಿ, ಹಿಂದುಳಿದ ಜಾತಿಗನ್ನು ಒಗ್ಗೂಡಿಸಲು ಯುವ ಘಟಕ ರಚನೆ ಮಾಡಲಾಗುತ್ತಿದೆ. ಯುವಕರು ಉತ್ಸಾಹ ದಿಂದ ಮುಂದೆ ಬಂದಿರುವುದು ಹಿಂದುಳಿದ ಜಾತಿ ಮುಂದುವರೆದ ಜಾತಿಗಳಾಗಲು ಒಳ್ಳೆಯ ಅವಕಾಶ. ಸಣ್ಣ ಪುಟ್ಟ ಜಾತಿಗಳು ಇಂದಿಗೂ ಅಭಿವೃದ್ಧಿ ಹೊಂದಿಲ್ಲ. ಹಾಗಾಗಿ ಆರ್ಥಿಕ, ರಾಜಕೀಯ, ಸಾಮಾಜಿಕ ವಾಗಿ ಸಬಲರಾದವರು ನೇತೃತ್ವ ವಹಿಸಿ ಸಂಘಟನೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.

ಯುವ ಘಟಕ ಜಿಲ್ಲಾಧ್ಯಕ್ಷ ಎಸ್ .ಜನಾರ್ಧನ್ ಮಾತನಾಡಿ, ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪಕ್ಷ ಬೇಧ , ಜಾತಿ ತಾರತಮ್ಯ ಇಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಎಲ್ಲ ಜಾತಿಗಳನ್ನು ಸಮಾನವಾಗಿ ಕೊಂಡೊಯ್ಯುತ್ತೇನೆ ಎಂದು ಹೇಳಿದರು.

ಒಕ್ಕೂಟದ ಹಿರಿಯ ಕಾರ್ಯಾಧ್ಯಕ್ಷ ರಾದ ರಂಗಪ್ಪ, , ಖಜಾಂಚಿ ಹರೀಶ್ ಕುಮಾರ್, ಮುಖಂಡರಾದ ರಂಗನಾಥ್, ದೇವರಾಜು, ಸುಗ್ಗನಹಳ್ಳಿ ಗ್ರಾಪಂ ಅಧ್ಯಕ್ಷೆ ಅರ್ಪಿತಾ, ಶೃತಿ, ಶ್ರೀನಿವಾಸ್, ಲೋಕೇಶ್, ಗಂಗಾಧರ್, ಚಂದ್ರಶೇಖರ್ ಹಾಜರಿದ್ದರು.

6ಕೆಆರ್ ಎಂಎನ್ 8.ಜೆಪಿಜಿ

ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಯುವ ಘಟಕ ನೂತನ ಜಿಲ್ಲಾಧ್ಯಕ್ಷ ಎಸ್.ಜನಾರ್ಧನ್ ಅವರನ್ನು ಅಭಿನಂದಿಸಲಾಯಿತು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ