ಕನ್ನಡಪ್ರಭ ವಾರ್ತೆ ಮೈಸೂರುಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅವರ ಜನಸ್ಪಂದನ ಟ್ರಸ್ಟ್ ವತಿಯಿಂದ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಮಹಿಳಾ ದಿನಾಚರಣೆ ಜರುಗಿತು.ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಇಂದು ನಾವು ವೈಜ್ಞಾನಿಕವಾಗಿ ಮುಂದುವರೆಯುತ್ತಿರುವ ಕಾಲಘಟ್ಟದಲ್ಲಿದ್ದೇವೆ. ಮಹಿಳೆ ಎಂದರೇ ಮನೆಗೆ ಸೀಮಿತವಾದ ಕಾಲವೊಂದಿತ್ತು. ಬದಲಾದ ಸನ್ನಿವೇಶದಲ್ಲಿ ಶೈಕ್ಷಣಿಕವಾಗಿ ಸಧೃಢವಾಗುತ್ತಿದ್ದು ಸಮಾಜದ ಎಲ್ಲಾ ರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಮಹಿಳೆ ಕುಟುಂಬದ ಕಣ್ಣಾಗಿ ಅತ್ಯಂತ ತಾಳ್ಮೆ, ಸಹನೆ, ಸಮಾಧಾನ, ಸಮಚಿತ್ತದಿಂದ ಸಂಸಾರದ ಹೊಣೆಗಾರಿಕೆಯನ್ನು ನಿಭಾಯಿಸುತ್ತಾ ತನ್ನ ಮಹತ್ವಪೂರ್ಣ ಜವಾಬ್ದಾರಿ ಮೆರೆಯುತ್ತಿದ್ದಾರೆ ಎಂದರು.ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರೇ ಮೇಲುಗೈ ಸಾಧಿಸುತ್ತಿದ್ದಾರೆ. ಪುರುಷನಿಗೆ ಸಮಾನವಾಗಿ ಎಲ್ಲಾ ರಂಗದಲ್ಲೂ ತಮ್ಮ ವೈಶಿಷ್ಟ್ಯತೆ ಮೆರೆಯುತ್ತಿದ್ದಾರೆ. ಆದರೆ ತನ್ನ ಸಂಕುಚಿತ ಮನೋಭಾವದಿಂದ ನಾಲ್ಕು ಗೋಡೆಗೆ ಸೀಮಿತವಾಗಿ ಮೌಢ್ಯದಿಂದ ಹೊರಬರಲು ಇವತ್ತಿಗೂ ಹೆಣಗಾಡುತ್ತಿರುವುದು ವಿಪರ್ಯಾಸ ಎಂದು ಅವರು ಹೇಳಿದರು.ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಈ ವರ್ಷ ಮಹಿಳಾ ಹಕ್ಕು, ಸಮಾನತೆ, ಸಬಲೀಕರಣದ ಧ್ಯೇಯಯೊಂದಿಗೆ ಮಹಿಳೆ ಇನ್ನೂ ಹೆಚ್ಚು ಕ್ರಿಯಾತ್ಮಕವಾಗಿ, ಸಕ್ರೀಯವಾಗಿರಬೇಕು ಎಂದರು.ಸಹಾಯಕ ಪ್ರಾಧ್ಯಾಪಕಿ ಡಾ. ತ್ರಿವೇಣಿ ಮಾತನಾಡಿ, ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಿಂದ ಪಿತೃ ಪ್ರಧಾನತೆಯತ್ತ ಭಾರತ ಬದಲಾದಾಗಲೇ ಮಹಿಳೆಯ ಬದುಕು ಅತಂತ್ರವಾಯಿತು. ನಾಲ್ಕು ಗೋಡೆಯ ಮಧ್ಯೆ ಅವಳನ್ನು ನರಳುವಂತೆ ಮಾಡಿದ ವ್ಯವಸ್ಥೆಯ ವಿರುದ್ಧ ನಾವು ಸಾಗಬೇಕಾಗಿದೆ. ಈ ದೆಸೆಯಲ್ಲಿ ಬಸವಣ್ಣ, ಗಾಂಧಿ, ಅಂಬೇಡ್ಕರ್‌ಮೊದಲಾದ ಮಹಾನ್‌ಚೇತನಗಳ ಶ್ರಮದ ಹೊರತಾಗಿಯೂ ಇಂದಿಗೂ ಬದಲಾಗದ ವ್ಯವಸ್ಥೆಗೆ ನಾವೇ ಕಾರಣರು ಎಂದರು. ಡಾ. ತ್ರಿವೇಣಿ, ವೈದ್ಯೆ ಡಾ. ಸುಜಾತಾ ರಾವ್, ಪೌರಕಾರ್ಮಿಕೆ ರತ್ನಮ್ಮ ಅವರನ್ನು ಅಭಿನಂದಿಸಲಾಯಿತು.ನಗರ ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಲತಾ ಮೋಹನ್, ಕೆಪಿಸಿಸಿ ಮಾಜಿ ಸದಸ್ಯೆ ವೀಣಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಭವ್ಯಾ, ಇಂದಿರಾ, ಆಶ್ರಯ ಸಮಿತಿ ಸದಸ್ಯರಾದ ಲೀಲಾ ಪಂಪಾಪತಿ, ಗುಣಶೇಖರ್, ಮಹ್ಮದ್ ಫಾರೂಖ್, ರೂಪೇಶ್, ಚಂದ್ರಕಲಾ, ಮಾಜಿ ನಗರಾಧ್ಯಕ್ಷೆ ರಾಧಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ಶ್ರೀಧರ್, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಮುಖಂಡರಾದ ರವಿಶಂಕರ್, ರೂಪೇಶ್, ರಾಕೇಶ್ ಜ್ಯೋತಿ, ಲಕ್ಷ್ಮಿ ಇದ್ದರು.---------------- eom/mys/dnm/