ರಾಜಕೀಯದಿಂದ ಜನೌಷಧಿ ಕೇಂದ್ರಗಳ ಬಂದ್

KannadaprabhaNewsNetwork |  
Published : May 31, 2025, 01:54 AM IST
ಹೊನ್ನಾಳಿ ಫೋಟೋ 30ಎಚ್.ಎಲ್.ಐ1. ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ನೂರಾರು ಜನ ಬಿಜೆಪಿ ಮುಖಂಡರು, ಕಾರ್ಯಕರ್ತರು, ಕಪ್ಪು ಬ್ಯಾಡ್ಜ್ ಧರಿಸಿಕೊಂಡು ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ   ಮೌನ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ  ಅರಕೆರೆ ನಾಗರಾಜ  ಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರಿ ಆಸ್ಪತ್ರೆಯಲ್ಲಿ ಕಡುಬಡವರ ಕೈಗೆಟುಕುವ ದರದಲ್ಲಿ ದೊರೆಯುತ್ತಿದ್ದ ಜನೌಷಧಿ ಮಳಿಗೆಗಳನ್ನು ಮುಚ್ಚುವ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಬಿಜೆಪಿ ಹೊನ್ನಾಳಿ ಮಂಡಲದ ಅಧ್ಯಕ್ಷ ಅರಕೆರೆ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

- ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಪ್ರತಿಭಟನೆಯಲ್ಲಿ ನಾಗರಾಜ್

- - -

ಹೊನ್ನಾಳಿ: ಸರ್ಕಾರಿ ಆಸ್ಪತ್ರೆಯಲ್ಲಿ ಕಡುಬಡವರ ಕೈಗೆಟುಕುವ ದರದಲ್ಲಿ ದೊರೆಯುತ್ತಿದ್ದ ಜನೌಷಧಿ ಮಳಿಗೆಗಳನ್ನು ಮುಚ್ಚುವ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಬಿಜೆಪಿ ಹೊನ್ನಾಳಿ ಮಂಡಲದ ಅಧ್ಯಕ್ಷ ಅರಕೆರೆ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಎದುರು ನೂರಾರು ಮುಖಂಡರು, ಕಾರ್ಯಕರ್ತರು, ಕಪ್ಪು ಬ್ಯಾಡ್ಜ್ ಧರಿಸಿ, ರಾಜ್ಯ ಸರ್ಕಾರದ ವಿರುದ್ಧ ನಡೆದ ಮೌನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಕಡುಬಡವರಿಗೆ ಅತಿ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುವ ಜನೌಷಧಿ ಕೇಂದ್ರಗಳನ್ನು ರಾಜಕೀಯ ದ್ವೇಷ ಮನೋಭಾವನೆಯಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಚ್ಚಲು ಹೊರಟಿರುವುದು ಜನವಿರೋಧಿ ನೀತಿ ಎಂದು ದೂರಿದರು.

ಕೇವಲ ಜನೌಷಧಿ ಯೋಜನೆ ಮಾತ್ರವಲ್ಲದೇ ಪಿ.ಎಂ. ಕಿಸಾನ್ ಸನ್ಮಾನ ಯೋಜನೆಯಡಿ ಕೇಂದ್ರದಿಂದ ರೈತರಿಗೆ ₹6 ಸಾವಿರ ಹಾಗೂ ರಾಜ್ಯದಿಂದ ₹4 ಸಾವಿರ ನೀಡುವ ಯೋಜನೆಯಲ್ಲಿ ರಾಜ್ಯ ನೀಡುತ್ತಿರುವ ₹4 ಸಾವಿರ ಸೌಲಭ್ಯಗಳನ್ನು ಕೂಡ ಕೈಬಿಟ್ಟಿದೆ. ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ ಎಂದು ಆರೋಪಿಸಿದರು.

ಹಿರಿಯ ಮುಖಂಡರಾದ ಎಂ.ಎಸ್.ಪಾಲಾಕ್ಷಪ್ಪ, ಜೆ.ಕೆ. ಸುರೇಶ್, ಸಿ.ಆರ್.ಶಿವಾನಂದ ಮಾತನಾಡಿದರು. ಮೌನ ಧರಣಿಯಲ್ಲಿ ಮಾರುತಿ ನಾಯ್ಕ, ಕೆ. ರಂಗಪ್ಪ, ಬೀರಪ್ಪ,ಬಾಬು ಹೋಬಳದಾರ್, ಕೆ.ವಿ. ಶ್ರೀಧರ, ಅನಿಲ್, ನ್ಯಾಮತಿ ರವಿಕುಮಾರ್ ಇತರರು ಇದ್ದರು.

- - -

30ಎಚ್.ಎಲ್.ಐ1:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ