ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಈ ವೇಳೆ ಬ್ಯಾಂಕಿನ ಅಧ್ಯಕ್ಷ ಸುರೇಶ ಅಬಕಾರ ಮಾತನಾಡಿ, ₹೭೦ ಕೋಟಿ ಠೇವು ಹೊಂದಿರುವ ಸಹಕಾರಿ ಬ್ಯಾಂಕಿಗೆ ಕೊಡುವ ಪ್ರಶಸ್ತಿಗೆ ಕಾಡಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಆಯ್ಕೆಗೊಂಡಿರುವುದು ಸಂತಸ ತಂದಿದ್ದು, ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ತಿಳಿಸಿದರು.ಶಂಕರ ಜುಂಜಪ್ಪನವರ ಮಾತನಾಡಿ, ನೇಕಾರಿಕೆ ಪ್ರಧಾನವಾಗಿರುವ ರಬಕವಿ-ಬನಹಟ್ಟಿ ತಾಲೂಕಿಗೆ ಬ್ಯಾಂಕಿನ ಕೊಡುಗೆ ದೊಡ್ಡದು. ಸಹಕಾರಿ ರಂಗದ ಕೊಡುಗೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದು ಸಂತಸವಾಗಿದೆ ಎಂದರು.
ಉಪಾಧ್ಯಕ್ಷ ಮಲ್ಲಿನಾಥ ಕಕಮರಿ, ನಿರ್ದೇಶಕರಾದ ಸಿದ್ರಾಮ ಸವದತ್ತಿ, ಓಂಪ್ರಕಾಶ ಕಾಬರಾ, ರಾಮಣ್ಣ ಭದ್ರನ್ನವರ, ಶ್ರೀಶೈಲ ಯಾದವಾಡ, ರಾಜಶೇಖರ ಶಿವಪೂಜಿ, ಈಶ್ವರ ಪಟಗುಂಡಿ, ಶಂಕರ ಕೆಸರಗೊಪ್ಪ, ಈರಣ್ಣ ಬಾಣಕಾರ, ಸವಿತಾ ಬಾಣಕಾರ, ರೇಖಾ ಹಿರೇಮಠ, ದೇವೇಂದ್ರ ಬಸಪ್ಪಗೋಳ, ಮಲ್ಲು ಗಸ್ತಿ, ಮಹೇಂದ್ರ ಹೊರಗಿನಮನಿ, ಶಿವಲಿಂಗಪ್ಪ ಫಕೀರಪುರ, ವ್ಯವಸ್ಥಾಪಕ ಮಹಾಲಿಂಗ ಬಾಗಲಕೋಟ ಉಪಸ್ಥಿತರಿದ್ದರು.