ಸಚಿವರ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್‌ ಕಾರ್ಯಕರ್ತರು

KannadaprabhaNewsNetwork |  
Published : May 31, 2025, 01:49 AM IST
ಶೃಂಗೇರಿ ಕ್ಷೇತ್ರದ ಖಾಂಡ್ಯ ಕ್ಲಬ್‌ನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಶುಕ್ರವಾರ ಕೇಕ್‌ ಕಟ್‌ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. | Kannada Prabha

ಸಾರಾಂಶ

ಚಿಕ್ಕಮಗಳೂರುಕಳೆದ 15 ದಿನಗಳ ಕಾಲ ಸುರಿದ ಭಾರೀ ಮಳೆಗೆ ಹಾನಿಯಾಗಿರುವ ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ಶುಕ್ರವಾರ ಪ್ರವಾಸ ಕೈಗೊಂಡಿದ್ದ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಳೆದ 15 ದಿನಗಳ ಕಾಲ ಸುರಿದ ಭಾರೀ ಮಳೆಗೆ ಹಾನಿಯಾಗಿರುವ ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರಗಳಲ್ಲಿ ಶುಕ್ರವಾರ ಪ್ರವಾಸ ಕೈಗೊಂಡಿದ್ದ ರಾಜ್ಯದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಮೂಡಿಗೆರೆ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಬಳಿಕ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಖಾಂಡ ಕ್ಲಬ್‌ಗೆ ಮಧ್ಯಾಹ್ನ ತೆರಳುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಕೇಕ್ ತಂದಿಟ್ಟರು. ಅದರ ಮೇಲೆ ಸಾಹುಕರ್‌ ಎಂಬುದಾಗಿ ಬರೆಸಲಾಗಿತ್ತು.

ಸತೀಶ್‌ ಜಾರಕಿಹೊಳಿ ಅವರ ಹುಟ್ಟುಹಬ್ಬ ಜೂನ್‌ 1 ರಂದು. ಸಚಿವರಿಗೆ ಎರಡು ದಿನ ಮೊದಲೇ ಜಿಲ್ಲೆಯ ಕಾಂಗ್ರೆಸ್‌ ಕಾರ್ಯ ಕರ್ತರು ಹುಟ್ಟುಹಬ್ಬ ಆಚರಿಸಲು ಕೇಕ್‌ ತಂದಿಟ್ಟಿದ್ದರು. ಸಚಿವರು ಕೇಕ್‌ ಕಟ್‌ ಮಾಡಿದರು. ಆಗ ಸ್ಥಳದಲ್ಲೇ ಇದ್ದ ಶಾಸಕರಾದ ಟಿ.ಡಿ. ರಾಜೇಗೌಡ ಹಾಗೂ ಎಚ್‌.ಡಿ. ತಮ್ಮಯ್ಯ ಸಚಿವರಿಗೆ ಕೇಕ್‌ ತಿನ್ನಿಸಿದರು.

-- ಬಾಕ್ಸ್ಸ್--

ಶಾಲೆಗೆ ಭೇಟಿ:

ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಲು ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದ ಸಚಿವರು, ಶುಕ್ರವಾರ ಶಾಲೆಗಳ ಆರಂಭದ ದಿನವಾಗಿದ್ದರಿಂದ ಆಲ್ದೂರು ಹೋಬಳಿ ಚಂಡಗೋಡು ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಇದೇ ವೇಳೆಯಲ್ಲಿ ಮಕ್ಕಳೊಂದಿಗೆ ಸಚಿವರು ಮಾತನಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ಎಚ್‌.ಡಿ. ತಮ್ಮಯ್ಯ, ನಯನಾ ಮೋಟಮ್ಮ ಇದ್ದರು.ಸಂಪುಟ ವಿಸ್ತರಣೆ:

ಸಂಪುಟ ವಿಸ್ತರಣೆ ವಿಚಾರ ಅದು ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ಹಂತದಲ್ಲಿರುವ ವಿಚಾರ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಪ್ರತಿಕ್ರಿಯೆ ನೀಡಿದರು.

ಸಿಎಂ ಬದಲಾವಣೆ ವಿಚಾರ ನಾಲ್ಕು ತಿಂಗಳಿಂದ ಸ್ತಬ್ಧವಾಗಿದೆ. ಡಿಕೆಶಿ ಸಿಎಂ ಆಗಲು ಒಂದು ಬಣದ ಆಗ್ರಹ ವಿಚಾರ ಇದ್ದೇ ಇದೆ. ಮಾಡೋದು ಬಿಡೋದು ವರಿಷ್ಠರಿಗೆ ಬಿಟ್ಟದ್ದು. ಸಿಎಂ ರೇಸಲ್ಲಿ ಇರುವ ಬಗ್ಗೆ ಕೇಳಿದಾಗ ಇದು ನಮಗೆ ಸಂಭಂಧಪಟ್ಟ ವಿಚಾರ ಅಲ್ಲ. ಮಂತ್ರಿಯಾಗಿದ್ದೇವೆ ಒಳ್ಳೆ ಕೆಲಸ ಮಾಡ್ಕೊಂಡು ಹೊಗ್ತೀವಿ ಅಷ್ಟೆ. ಜಲಸಂಪನ್ಮೂಲ ಇಲಾಖೆಯಲ್ಲಿ ವರ್ಗಾವಣೆ ಈ ವಿಚಾರವನ್ನು ಪತ್ರಿಕೆಯಲ್ಲಿ ನೋಡಿದ್ದೇನೆ. ಅದನ್ನ ಸಿಎಂ ಡಿಸಿಎಂ ಸರಿ ಮಾಡಿಕೊಳ್ಳುತ್ತಾರೆ. ಅವರ ಮಟ್ಟದಲ್ಲಿರುವ ವಿಚಾರ ಅವರ ಇಲಾಖೆ ಮತ್ತು ಸಿಎಂ ಗೆ ಸೇರಿದ್ದು ಎಂದು ಹೇಳಿದರು.

30 ಕೆಸಿಕೆಎಂ 5ಶೃಂಗೇರಿ ಕ್ಷೇತ್ರದ ಖಾಂಡ್ಯ ಕ್ಲಬ್‌ನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಶುಕ್ರವಾರ ಕೇಕ್‌ ಕಟ್‌ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್