ಜನಿವಾರ ಕೇಸ್‌: ವಿವಿಧ ಬ್ರಾಹ್ಮಣ ಸಂಘಟನೆ ಕಿಡಿ

KannadaprabhaNewsNetwork |  
Published : May 06, 2026, 03:15 AM IST
ೀ | Kannada Prabha

ಸಾರಾಂಶ

ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ, ಮಾಂಗಲ್ಯ ಸರ, ಮೂಗುತಿ, ಕಿವಿ ಓಲೆ ತೆಗೆಸಿದ ಕ್ರಮ ಖಂಡಿಸಿ ತಾಲೂಕಿನ ವಿವಿಧ ಬ್ರಾಹ್ಮಣ ಸಂಘಟನೆಗಳು, ಜನಿವಾರ ಧರಿಸುವ ಸಮುದಾಯಗಳ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಶೃಂಗೇರಿ ಬಂದ್, ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ, ಮಾಂಗಲ್ಯ ಸರ, ಮೂಗುತಿ, ಕಿವಿ ಓಲೆ ತೆಗೆಸಿದ ಕ್ರಮ ಖಂಡಿಸಿ ತಾಲೂಕಿನ ವಿವಿಧ ಬ್ರಾಹ್ಮಣ ಸಂಘಟನೆಗಳು, ಜನಿವಾರ ಧರಿಸುವ ಸಮುದಾಯಗಳ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಶೃಂಗೇರಿ ಬಂದ್, ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.

ಪಟ್ಟಣದಲ್ಲಿ ವರ್ತಕರು ಅಂಗಡಿ ಹೋಟೇಲುಗಳನ್ನು ಕೆಲಹೊತ್ತು ಬಂದ್ ಮಾಡಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು,ಬೆಳಿಗ್ಗೆ ಪಟ್ಟಣ ಪಂಚಾಯಿುತಿ ಮುಂಬಾಗದಿಂದ ಹೊರಟ ಬೃಹತ್ ಪ್ರತಿಭಟನೆ ಮುಖ್ಯ ರಸ್ತೆಯಲ್ಲಿ ಸಾಗಿ ತಾಲೂಕು ಕಚೇರಿ ಎದರು ಸಮಾವೇಶಗೊಂಡಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಬ್ರಾಹ್ಮಣ ಮಹಾ ಸಭಾದ ಜಿ.ಎಂ.ಸತೀಶ್ ಬ್ರಾಹ್ಮಣ ಸಮುದಾಯದ ವಿರುದ್ದ ಧ್ವೇಷ ಹರಡುವ ಕೆಲಸ ಮಾಡಲಾಗುತ್ತಿದೆ.ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ.ಪ್ರಗತಿ ಪರ,ಎಡಪಂಥೀಯ ಹೆಸರಲ್ಲಿ ಜನರಲ್ಲಿ ಧ್ವೇಷ ಮನೋಭಾವನೆ ಬಿತ್ತುವ ಕೆಲಸ ಮಾಡಲಾಗುತ್ತಿದೆ,

ಜನಿವಾರ ತೆಗೆಸಿದರೆ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗುತ್ತದೆ ಎಂಬ ವಿಕೃತ ಆನಂದ ಪಡುವ ಜನರಿಂದ ಇಂತಹ ಕೆಲಸ ನಡೆಯುತ್ತಿದೆ.ಜನಿವಾರವನ್ನು ಕೇವಲ ಬ್ರಾಹ್ಮಣ ಸಮುದಾಯ ಮಾತ್ರ ಧರಿಸುವುದಿಲ್ಲ.ಅನೇಕ ಸಮುದಾಯಗಳಿವೆ.ಬ್ರಾಹ್ಮಣ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಬ್ರಾಹ್ಮಣ ದ್ವೇಷಿ,ವಿಷ ಬೀಜ ಬಿತ್ತುವ ಕೆಲಸ ಬಿಡಬೇಕು.ಹಿಂದೂ ಧರ್ಮ ಸಂಸ್ಕ್ರತಿ,ಸಂಸ್ಕಾರಗಳ ಜತೆ ಚೆಲ್ಲಾಟವಾಡುವ ಕೆಲಸ ಬೇಡ.ಕಾನೂನು ರೂಪಿಸಬೇಕು.ಇಂತಹ ನಿಯಮಗಳ‍ನ್ನು ಕೈಬಿಡಬೇಕು ಎಂದರು.

ತಾಲೂಕು ಬ್ರಾಹ್ಮಣ ಸಭಾದ ಅಧ್ಯಕ್ಷ ಬಿ.ಎಲ್.ರವಿಕುಮಾರ್ ಮಾತನಾಡಿ, ಜನಿವಾರ ಸಮ್ಮ ಸಮಾಜದ ಅಸ್ಮಿತೆ.ಇಂತಹ ಜನಿವಾರವನ್ನು ಪರೀಕ್ಷಾ ಕೇಂದ್ಪದಲ್ಲಿ ಕಟ್ ಮಾಡಿ ತೆಗೆಯಲಾಗಿದೆ.ಸ ರ್ಕಾರ ಪರೀಕ್ಷೆಗೆ ಕಾನೂನು ನಿಯಮಾವಳಿ ರೂಪಿಸಬೇಕು.ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕು ಬ್ರಾಹ್ಮಣ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಮಾತನಾಡಿ, ಬ್ರಾಹ್ಮಣರು ಹೇಡಿಗಳಲ್ಲ.ಯಾರಿಗೂ ಅನ್ಯಾಯ ಮಾಡಿದವರಲ್ಲ.ಸಮಾಜದ ಎಲ್ಲಾ ವರ್ಗದವರಿಗೂ ಬೇಕಾದ ಸಮುದಾಯ.ಆದರೆ ಜನಿವಾರ,ಸಂಸ್ಕಾರದ ವಿಷಯದಲ್ಲಿ ಇಂದು ಬೀದಿಗಿಳಿದಿರುವುದು ವಿಪರ್ಯಾಸ.ವಸ್ತ್ರ ಸಂಹಿತೆ ಹೆಸರಲ್ಲಿ ಬ್ರಾಹ್ಮಣ ಜನಾಂಗದ ಅಭ್ಯರ್ಥಿಗಳ ಜನಿವಾರ ಕತ್ತರಿಯಲ್ಲಿ ಕಟ್ ಮಾಡಿ ತೆಗೆದಿರುವುದು ಖಂಡನೀಯ ಎಂದರು.

ಬ್ರಾಹ್ಮಣ ಸಮುದಾಯದವರ ತಾಳ್ಮೆ ಪರೀಕ್ಷೆ ಮಾಡುವುದು ಬೇಡ.ಧರ್ಮ,ಸಂಪ್ರದಾಯ,ಸಂಸ್ಕ್ರತಿಗೆ ಧಕ್ಕೆಯಾದರೆ ಚಂಡಿ ಚಾಮುಂಡಿಗಳಾಗಲು ಗೊತ್ತಿದೆ. ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸಬಾರದು. ಕೇವಲ ಶೃಂಗೇರಿಯಲ್ಲ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.

ಕಾಂಗ್ರೇಸ್ ಮುಖಂಡ ಕೆ.ಎಂ.ರಮೇಶ್ ಭಟ್, ಜಯಶ್ರೀ ಗಣೇಶ್, ವಿಜಯರಂಗ ಗುಡ್ಡೇತೋಟ, ಅಂಬಳೂರು ರಾಮಕೃಷ್ಣ, ತಲಗಾರು ಉಮೇಶ್ ಮತ್ತಿತರರು ಮಾತನಾಡಿದರು.

ಬಿಸಿಲ ತಾಪವನ್ನು ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ತಹಸಿಲ್ದಾರ್ ಅನೂಪ್ ಸಂಜೋಗ್ ಮನವಿ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಮತ ಗೊಂದಲ: ಆಯೋಗಕ್ಕೆ ವೀಕ್ಷಕರ ವರದಿ
ಬಿಸಿಲಾಘಾತ: ಆಸ್ಪತ್ರೆಯಲ್ಲಿ 10 ಬೆಡ್‌ಗಳು ಸನ್ನದ್ಧ