ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಗತಿಪರ ಕೃಷಿಕರಾದ ರಾಮಕೃಷ್ಣ ಶರ್ಮ ಬಂಟಕಲ್ಲು ಅವರು ಮಲ್ಲಿಗೆ ಕೃಷಿ ಬಗ್ಗೆ, ಕೃಷಿ ಪಂಡಿತ ಕುದಿ ಶ್ರೀನಿವಾಸ ಭಟ್ ಅವರು ಹಣ್ಣಿನ ಬೆಳೆಗಳ ಬಗ್ಗೆ ಹಾಗೂ ಕುಮಾರಸ್ವಾಮಿ ಉಡುಪ ಅವರು ತಾರಸಿ ಕೃಷಿ ಬಗ್ಗೆ ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಲಾಭದಾಯಕ ಹೇಗೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಕೃಷಿಕ ಸಂಘದ ಕರಂಬಳ್ಳಿ ವಲಯ, ಕರಂಬಳ್ಳಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಗಳ ಜಂಟಿ ಆಶ್ರಯದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಾಕ್ಷಿಕೆ, ತೋಟಗಾರಿಕಾ ಹಣ್ಣು ಬೆಳೆಸುವ ಬಗ್ಗೆ ಮಾಹಿತಿ, ತಾರಸಿ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಗತಿಪರ ಕೃಷಿಕರಾದ ರಾಮಕೃಷ್ಣ ಶರ್ಮ ಬಂಟಕಲ್ಲು ಅವರು ಮಲ್ಲಿಗೆ ಕೃಷಿ ಬಗ್ಗೆ, ಕೃಷಿ ಪಂಡಿತ ಕುದಿ ಶ್ರೀನಿವಾಸ ಭಟ್ ಅವರು ಹಣ್ಣಿನ ಬೆಳೆಗಳ ಬಗ್ಗೆ ಹಾಗೂ ಕುಮಾರಸ್ವಾಮಿ ಉಡುಪ ಅವರು ತಾರಸಿ ಕೃಷಿ ಬಗ್ಗೆ ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಲಾಭದಾಯಕ ಹೇಗೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ನುರಿತ ಹಿರಿಯ ಅನುಭವಿ ಕೃಷಿಕ ವಿಠಲದಾಸ ಉಪಾಧ್ಯ ಪಾಡಿಗಾರ್ ಅವರನ್ನು ಸನ್ಮಾನಿಸಲಾಯಿತು.
ಶ್ರೀನಿವಾಸ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಅರ್ಚಕ ದಿವಾಕರ ಐತಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೃಷಿಕ ಸಂಘದ ಅಧ್ಯಕ್ಷ ಶ್ರೀಪತಿ ಭಟ್ ಕರಂಬಳ್ಳಿ ಸ್ವಾಗತಿಸಿದರು. ಕರಂಬಳ್ಳಿ ಬ್ರಾಹ್ಮಣ ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್, ಪೆರಂಪಲ್ಲಿ ಕೃಷಿಕ ಸಂಘ ಅಧ್ಯಕ್ಷ ರವೀಂದ್ರ ಪೂಜಾರಿ, ಹರಿಕೃಷ್ಣ ಶಿವತ್ತಾಯ ಪೆರಂಪಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ್ ಭಟ್ ವಂದಿಸಿದರು. ರಂಗನಾಥ ಸಾಮಗ ಸಹಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.