ಕನ್ನಡಪ್ರಭ ವಾರ್ತೆ ಶಿರಾ
ಅವರು ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ನಡೆದ ಧರ್ಮ ಧ್ವಜ ಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಾವೆಲ್ಲರೂ ಭಗವಂತನ ಅಂಶವೇ ಆಗಿದ್ದು, ನಾವೆಲ್ಲರೂ ಪ್ರೀತಿ, ಸಹಬಾಳ್ವೆಯಿಂದ ಬದುಕಿದಲ್ಲಿ ಅದರಿಂದಲೇ ಭಗವಂತನನ್ನು ಕಾಣಲು ಸಾಧ್ಯವಾಗಲಿದೆ ಎಂದರು.
ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಮುನ್ನಡೆದಾಗ ಮನುಷ್ಯ ಜನ್ಮ ಸಾರ್ಥಕತೆ ಕಾಣಲಿದೆ.ಮನುಷ್ಯತ್ವ ಹಾಗೂ ಮಾನವೀಯ ಮೌಲ್ಯಗಳ ಅರ್ಥ ಮಾಡಿಕೊಂಡರೆ ಅದೇ ಧರ್ಮ ಎಂದರು. ಈ ಸಂದರ್ಭದಲ್ಲಿ ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಶ್ರೀಮಠದ ಕಾರ್ಯನಿರ್ವಾಹಕ ತಮ್ಮಣ್ಣ, ನಾದೂರು ಗ್ರಾಮ ಪಂಚಾಯತಿ ಅಧ್ಯಕ್ಷ ತುಳಸಿ ಮಧುಸೂದನ್, ಮೆಹರ್ ತಾಜ್ ಬಾಬು, ಮೇಘಶ್ರೀ ನವೀನ್, ಸದಸ್ಯ ಭೂತ ರಾಜು, ನಿರಂಜನ್ ಸೇರಿದಂತೆ ಹಲವರು ಹಾಜರಿದ್ದರು.