ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಸಂಪನ್ನ

KannadaprabhaNewsNetwork |  
Published : Jul 08, 2024, 12:35 AM IST
ಬೈಲಹೊಂಗಲ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯಾವಳಿ ನಡೆದವು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ಪಟ್ಟಣದ ಹಳೆಯ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವವು ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆದು ಸಂಪನ್ನಗೊಂಡಿತು. ಐದು ದಿನಗಳ ಕಾಲ ನೆರವೇರಿದ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಹನಮಂತ ದೇವರ ಪ್ರತಿಮೆಗೆ ಅಭಿಷೇಕ, ಕುಂಕುಮಾರ್ಚಣೆ, ಅಲಂಕಾರ, ಬುತ್ತಿ ಪೂಜೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಟ್ಟಣದ ಹಳೆಯ ಹನಮಂತ ದೇವರ ದೇವಸ್ಥಾನದ ಜಾತ್ರಾ ಮಹೋತ್ಸವವು ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆದು ಸಂಪನ್ನಗೊಂಡಿತು.

ಐದು ದಿನಗಳ ಕಾಲ ನೆರವೇರಿದ ಜಾತ್ರಾ ಮಹೋತ್ಸವದಲ್ಲಿ ಪ್ರತಿದಿನ ಹನಮಂತ ದೇವರ ಪ್ರತಿಮೆಗೆ ಅಭಿಷೇಕ, ಕುಂಕುಮಾರ್ಚಣೆ, ಅಲಂಕಾರ, ಬುತ್ತಿ ಪೂಜೆ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು. ದೊಡ್ಡ ಕೆರೆ ಪಕ್ಕದ ಬಯಲು ಕುಸ್ತಿ ಕಣದಲ್ಲಿ ನಡೆದ ಕುಸ್ತಿ ಪಂದ್ಯಾವಳಿ ರೋಚಕವಾಗಿ ನಡೆದವು. ರಾಜ್ಯ, ಹೊರ ರಾಜ್ಯದ ಕುಸ್ತಿ ಪಟುಗಳು ಭಾಗವಹಿಸಿ ಶಕ್ತಿ ಪ್ರದರ್ಶಿಸಿದರು. ಸುಮಾರು 60ಕ್ಕೂ ಹೆಚ್ಚು ಕುಸ್ತಿಪಟುಗಳು ಸೆಣಸಿದರು. ಮೊದಲ ಜೋಡಿ ಕುಸ್ತಿಯಲ್ಲಿ ಕೊಲ್ಲಾಪೂರ ಪೈಲ್ವಾನ ಪ್ರಕಾಶ ಗೊಡಗೇರಿ ಜೊತೆ ಸೆಣಸಿದ ಕೊಲ್ಲಾಪೂರ ಪೈಲ್ವಾನ ನೂರುದ್ದಿನ ಇಂಗಳೆ ಅವರನ್ನು ಸೋಲಿಸಿದರು. ಜಾತ್ರಾ ಕಮಿಟಿ ಮುಖಂಡರಾದ ಮಹಾಬಳೇಶ್ವರ ಬೋಳನ್ನವರ, ವಿಠ್ಠಲ ಅಂದಾನಿ, ಶಂಕರ ಕಡಕೋಳ, ಶ್ರೀಶೈಲ ಗೀರನವರ, ಉಮೇಶ ಬೋಳನ್ನವರ, ದೇವೇಂದ್ರಪ್ಪ ಪೂಜೇರಿ, ಭಗವಂತ ಬಡಿಗೇರ, ಸೋಮನಗೌಡ ಪಾಟೀಲ, ಅನೇಕರು ಜಾತ್ರೆ ಯಶಸ್ವಿಗೆ ಶ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಪೋಷಣೆಯೇ ಬಾಲ್ಯದ ಅಡಿಪಾಯ: ಸುಮಂಗಲ
ಸಂಸ್ಕಾರಯುತ ಸಮಾಜ ಕಟ್ಟಲು ಗಣೇಶೋತ್ಸವ ಪ್ರೇರಣೆ: ಕಾಮತ್