ಗವಿಮಠದ ಜಾತ್ರೋತ್ಸವ: ಭಕ್ತಿಯಿಂದ ಸಮರ್ಪಣೆ ಆಗುತ್ತಿವೆ ರೊಟ್ಟಿ, ಧಾನ್ಯ

KannadaprabhaNewsNetwork |  
Published : Jan 24, 2024, 02:05 AM IST
23ಕೆಪಿಎಲ್2:ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ತಾಲೂಕಿನ ಚಿಲವಾಡಗಿ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಧಾನ್ಯ, ರೊಟ್ಟಿ ಸಮರ್ಪಿಸಲು ತೆರಳುತ್ತಿರುವುದು.  | Kannada Prabha

ಸಾರಾಂಶ

ಜಾತ್ರೆಯ ದಿನಗಳು ಸಮೀಪ ಆಗಿದ್ದು, ವಾರಗಳಿಂದ ಭಕ್ತರು ರೊಟ್ಟಿ, ಧಾನ್ಯ ಸಂಗ್ರಹಿಸಿ ಗವಿಮಠಕ್ಕೆ ತರುತ್ತಿದ್ದಾರೆ. ಮಹಾರಥೋತ್ಸವದಿನ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಲಿದ್ದಾರೆ. ಈಗಾಗಲೇ ಭಕ್ತರು ರೊಟ್ಟಿ ತಯಾರಿಸಿ ನೀಡುತ್ತಿದ್ದಾರೆ. ಸುಮಾರು 16 ಲಕ್ಷದಷ್ಟು ರೊಟ್ಟಿ ಸಂಗ್ರಹವಾಗುವ ನಿರೀಕ್ಷೆಯಿದೆ.

ಕೊಪ್ಪಳ: ಜ.27ರಂದು ಜರುಗುವ ಗವಿಮಠದ ಜಾತ್ರೋತ್ಸವಕ್ಕೆ ಗ್ರಾಮೀಣ ಭಾಗ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಭಕ್ತಿಯಿಂದ ಭಕ್ತರು ರೊಟ್ಟಿ, ದವಸ ಧಾನ್ಯಗಳನ್ನು ಸಮರ್ಪಿಸುತ್ತಿದ್ದಾರೆ.ಈಗಾಗಲೇ ಜಾತ್ರೆಯ ದಿನಗಳು ಸಮೀಪ ಆಗಿದ್ದು, ವಾರಗಳಿಂದ ಭಕ್ತರು ರೊಟ್ಟಿ, ಧಾನ್ಯ ಸಂಗ್ರಹಿಸಿ ಗವಿಮಠಕ್ಕೆ ತರುತ್ತಿದ್ದಾರೆ. ಮಹಾರಥೋತ್ಸವದಿನ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಲಿದ್ದಾರೆ. ಈಗಾಗಲೇ ಭಕ್ತರು ರೊಟ್ಟಿ ತಯಾರಿಸಿ ನೀಡುತ್ತಿದ್ದಾರೆ. ಸುಮಾರು 16 ಲಕ್ಷದಷ್ಟು ರೊಟ್ಟಿ ಸಂಗ್ರಹವಾಗುವ ನಿರೀಕ್ಷೆಯಿದೆ.ಶ್ರದ್ಧೆಯಿಂದ ಆಗಮನ: ಗವಿಮಠದ ಜಾತ್ರೆಗೆ ರೊಟ್ಟಿ, ಧಾನ್ಯ ಅರ್ಪಿಸುವ ಭಕ್ತರು ಭಕ್ತಿ, ಶ್ರದ್ಧೆಯಿಂದ ಆಗಮಿಸುತ್ತಿದ್ದಾರೆ.ಭಜನೆಗಳ ಮೂಲಕ, ಎತ್ತಿನ ಬಂಡಿಗಳ ಮೂಲಕ, ಟ್ರ್ಯಾಕ್ಟರ್ ಗಳ ಮೂಲಕ ಗ್ರಾಮಸ್ಥರು ಆಗಮಿಸಿ, ಭಜನೆ ಸಲ್ಲಿಸಿ ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ. ರೊಟ್ಟಿ ಜಾತ್ರೆ ಎಂದೇ ಪ್ರಸಿದ್ಧಿ: ಗವಿಮಠಕ್ಕೆ ಜಾತ್ರೆಯ ಮಹಾಪ್ರಸಾದಕ್ಕೆ ಲಕ್ಷ ಲಕ್ಷ ರೊಟ್ಟಿಗಳು ಬರುತ್ತವೆ. ಸುಮಾರು 16 ಲಕ್ಷಕ್ಕೂ ಅಧಿಕ ರೊಟ್ಟಿಗಳು ಬರುತ್ತಿದ್ದು, ಗವಿಸಿದ್ದೇಶ್ವರ ಜಾತ್ರೆ ರೊಟ್ಟಿ ಜಾತ್ರೆ ಎಂದು ಪ್ರಸಿದ್ದ ಆಗಿದೆ. ಬೃಹಾದಾಕಾರದ ೪೫*೫೦ ವಿಸ್ತೀರ್ಣದ ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕಾರ್ಯ ಸಾಗಿದೆ.

ಗವಿಮಠದ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಹರ್ಬಲ್‌ಗಾರ್ಡನ್‌ನಲ್ಲಿರುವ ಸುಮಾರು ಆರು ಎಕರೆಯಷ್ಟು ವಿಶಾಲವಾದ ಆವರಣದಲ್ಲಿ ಭವ್ಯವಾದ ಅಡುಗೆಮನೆ, ಆಹಾರ ಸಂಗ್ರಹಣೆ ಕೊಠಡಿ, ತರಕಾರಿ ಸಂಗ್ರಹಣೆ ಕೊಠಡಿ, ತರಕಾರಿ ಹೆಚ್ಚುವ ಸ್ಥಳ, ಹಾಗೂ ಪ್ರಸಾದ ಸ್ವೀಕರಿಸಲು ಈ ಬಾರಿಇನ್ನೂ ಹೆಚ್ಚು ವಿಶಾಲವಾದ ಸ್ಥಳಾವಕಾಶವನ್ನು ಕಲ್ಪಿಸಿದೆ. ಭಕ್ತರು ಪ್ರಸಾದ ಸೇವನೆಗೆ ಸಾಲಾಗಿ ಬರಲು ಅಚ್ಚುಕಟ್ಟಾದ ಸಾಲುಗಳನ್ನು ನಿರ್ಮಿಸಲಾಗಿದೆ.ಕೌಂಟರ್ ವ್ಯವಸ್ಥೆ: ಈ ವರ್ಷ ಸುಮಾರು ೭೬ ಕೌಂಟರಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ೪೦ ಕೌಂಟರಗಳು ಅನ್ನ ಸಾರು, ೩೬ ಕೌಂಟರ ಗಳು ಸಿಹಿ ಪದಾರ್ಥ ವಿತರಣೆಗೆ ನಿರ್ಮಿಸಲಾಗಿದೆ.ನೀರಿನ ವ್ಯವಸ್ಥೆ : ೭೦ ನೀರಿನ ಕೊಳಾಯಿ(ನಲ್ಲಿ) ಇರುವಎರಡು ನೀರಿನ ಕಟ್ಟೆಗಳು, ೫೦ ನೀರಿನ ಕೊಳಾಯಿ(ನಲ್ಲಿ)ಇರುವಇಂದುಕಟ್ಟೆಯನ್ನು ಸಿದ್ಧಗೊಳಿಸಲಾಗಿದೆ. ೨೫೦-೩೦೦ ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆಕಲ್ಪಿಸಲಾಗಿದೆ.

ಮಾದಲಿ ಕಟ್ಟೆ: ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆಯ ವಿಶೇಷವೂ ಹೌದುಅದಕ್ಕೆಂದೇ ೧೬*೬ ಅಡಿ ವಿಸ್ತೀರ್ಣದ ೩, ೨೦*೬ ಅಡಿ ವಿಸ್ತೀರ್ಣದ ೩ ಕಟ್ಟೆಗಳು ಒಟ್ಟು ೬ ಮಾದಲಿ ಕಟ್ಟೆಗಳು ನಿರ್ಮಾಣಗೊಂಡಿವೆ.

ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೆಕವಾಗಿ (೪೦+೩೬) ಕೌಂಟರಗಳನ್ನು ಪ್ರಸಾದ ನೀಡಿಸಿಕೊಳ್ಳಲಿಕ್ಕೆ ವ್ಯವಸ್ಥೆಕಲ್ಪಿಸಲಾಗಿದೆ.ಅಲ್ಲದೇ ೦೪ ಪ್ರವೇಶ ದ್ವಾರಗಳು, ೬೫ ಅಡಿಯಅನ್ನ ಸಂಗ್ರಹಣಾಕಟ್ಟೆ, ಇವುಗಳ ಜೊತೆಗೆ ಪ್ರತಿದಿನ ಪ್ರಸಾದದಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರಇಲಾಖೆಯ ಅಧಿಕಾರಿಗಳು, ಪೋಲಿಸರುಇರುತ್ತಾರೆ.ಪ್ರಸಾದ ನಿಲಯದ ಸುತ್ತಲೂ ಪೋಲಿಸ್ ಕಣ್ಗಾವಲುಇದ್ದು, ತಂತಿ ಬೇಲಿಯನ್ನೂ ಸಹ ಅಳವಡಿಸಲಾಗಿದೆ.ಮಹಾದಾಸೋಹದಲ್ಲಿ ಭಕ್ತರ ಸುರಕ್ಷತೆಗಾಗಿ ಹೊರ, ಒಳಾಂಗಣ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.ಜಾತ್ರಾಮಹೋತ್ಸವ ಮಹಾದಾಸೋಹದಲ್ಲಿಒಂದು ದಿನಕ್ಕೆ ಸುಮಾರು ೩೦೦ ರಿಂದ ೪೦೦ರವರೆಗೆ ಭಕ್ತರು ಪ್ರಸಾದತಯಾರಿಸುವ ಸೇವೆಯಲ್ಲಿತೊಡಗಿಕೊಂಡರೆೆ, ಪ್ರಸಾದ ವಿತರಣೆಯಲ್ಲಿ ಸುಮಾರು ೫೦೦ ರಿಂದ ೬೦೦ ಭಕ್ತರು ಪಾಲ್ಗೊಳ್ಳುವರು. ಜಾತ್ರಾಮಹೋತ್ಸವ ಪ್ರಾರಂಭದಿಂದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿ ಸುಮಾರು ೨೫ ಸಾವಿರ ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಳ್ಳುವರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ