ಜಯ ಕರ್ನಾಟಕದ ಮಹಿಳಾ, ವಿದ್ಯಾರ್ಥಿ ಘಟಕ ಅಸ್ತಿತ್ವಕ್ಕೆ

KannadaprabhaNewsNetwork |  
Published : Sep 16, 2026, 02:30 AM IST
15ಜಯ | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಜಯ ಕರ್ನಾಟಕದ ವತಿಯಿಂದ ಅಸ್ತಿತ್ವಕ್ಕೆ ಬಂದ ಮಹಿಳಾ ಘಟಕದ ಅಧ್ಯಕ್ಷೆ ಸ್ಮಿತಾ ಸುಧೀರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ಯಾಮಿಲ್ ಮಲ್ಪೆಗೆ ಪದ ಪ್ರಧಾನ ಸಮಾರಂಭ ಸೆ. 13ರಂದು ಜರುಗಿತು.

ಉಡುಪಿ : ಉಡುಪಿ ಜಿಲ್ಲಾ ಜಯ ಕರ್ನಾಟಕದ ವತಿಯಿಂದ ಅಸ್ತಿತ್ವಕ್ಕೆ ಬಂದ ಮಹಿಳಾ ಘಟಕದ ಅಧ್ಯಕ್ಷೆ ಸ್ಮಿತಾ ಸುಧೀರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ಯಾಮಿಲ್ ಮಲ್ಪೆಗೆ ಪದ ಪ್ರಧಾನ ಸಮಾರಂಭ ಸೆ. 13ರಂದು ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಯ ಕರ್ನಾಟಕದ ಉಡುಪಿ ಜಿಲ್ಲಾಧ್ಯಕ್ಷ ಲೂವಿಸ್ ಎಮ್. ಅವರು ಪದಪ್ರಧಾನ ಮಾಡಿದರು. ಜಯ ಕರ್ನಾಟಕದ ಎಲ್ಲರ ಸಹಕಾರದಿಂದ ತಮ್ಮ ಇತಿಮಿತಿಯನ್ನರಿತು ಕಾರ್ಯ ನಿರ್ವಹಿಸುವುದಾಗಿ ನೂತನ ಘಟಕಗಳ ಅಧ್ಯಕ್ಷರು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಜಯ ಕರ್ನಾಟಕದ ವಿವಿಧ ಘಟಕಗಳ ಜವಾಬ್ದಾರಿ, ಕಾರ್ಯವ್ಯಾಪ್ತಿ, ಕಾರ್ಯ ನಿರ್ವಹಣೆಯ ಕುರಿತು ಗೌರವ ಸಲಹೆಗಾರ ಸುಧಾಕರ್ ರಾವ್ ಬಾರ್ಕೂರು, ಪ್ರಧಾನ ಸಂಚಾಲಕ ರತ್ನಾಕರ ಮೊಗವೀರ, ಜಿಲ್ಲಾ ಉಪಾಧ್ಯಕ್ಷ ಪ್ರತಾಪ ಶೆಟ್ಟಿ ಸಾಸ್ತಾನ, ಗೌರವ ಸಲಹೆಗಾರ ಶಶಿಕಾಂತ ಶೆಟ್ಟಿ, ಗೌರವ ಅಧ್ಯಕ್ಷ ಪ್ರಕಾಶ್ ಸಜ್ಜನ್, ಸಂಘಟನಾ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ಮಾದ್ಯಮ ವಕ್ತಾರ ಶ್ರೀನಿವಾಸ ಶೆಟ್ಟಿ ತೋನ್ಸೆ ಹೋರಾಟ ಸಮಿತಿಯ ಅಧ್ಯಕ್ಷ ಕರುಣಾಕರ ಪೂಜಾರಿ, ಉಪಾಧ್ಯಕ್ಷ ಮಹೇಶ್ ಕೋಟ್ಯಾನ್ ಮತ್ತು ಸದಸ್ಯರು ಉಪಸ್ಥಿತರಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್ ಸ್ವಾಗತಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಎಚ್.ಪ್ರಭಾಕರ್
ಕರಾವಳಿ ಸಮಸ್ಯೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಪರಿಹಾರ: ನೀರೆ ಕೃಷ್ಣ ಶೆಟ್ಟಿ