ಮಂಗಳೂರಿನ ಖ್ಯಾತ ಹಾಗೂ ಪ್ರಥಮ ಇಂಟರ್ ವೆನ್ಶನಲ್ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಹಾಗೂ ಈ ಕ್ಷೇತ್ರದ ಮುಂಚೂಣಿಯ ಪ್ರವರ್ತಕ ಡಾ.ಎಚ್.ಪ್ರಭಾಕರ್ ಅವರು ಪ್ರತಿಷ್ಠಿತ ‘ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕೊಚ್ಚಿಯಲ್ಲಿ ನಡೆದ ‘ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ ರಾಷ್ಟ್ರೀಯ ಸಮಾವೇಶದಲ್ಲಿ ಆಯ್ಕೆಯಾದರು.
ಮಂಗಳೂರು: ಮಂಗಳೂರಿನ ಖ್ಯಾತ ಹಾಗೂ ಪ್ರಥಮ ಇಂಟರ್ ವೆನ್ಶನಲ್ ಕಾರ್ಡಿಯಾಲಜಿಸ್ಟ್ (ಹೃದ್ರೋಗ ತಜ್ಞ) ಹಾಗೂ ಈ ಕ್ಷೇತ್ರದ ಮುಂಚೂಣಿಯ ಪ್ರವರ್ತಕ ಡಾ.ಎಚ್.ಪ್ರಭಾಕರ್ ಅವರು ಪ್ರತಿಷ್ಠಿತ ‘ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ಯ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕೊಚ್ಚಿಯಲ್ಲಿ ನಡೆದ ‘ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿ’ ರಾಷ್ಟ್ರೀಯ ಸಮಾವೇಶದಲ್ಲಿ ಆಯ್ಕೆಯಾದರು. ಇದು ಹೃದ್ರೋಗ ಚಿಕಿತ್ಸಾ ವಿಜ್ಞಾನದ (ಕಾರ್ಡಿಯಾಲಜಿ) ಪ್ರಗತಿಗೆ ಅವರು ನೀಡಿರುವ ಅತ್ಯುತ್ತಮ ಕೊಡುಗೆಗಳು ಹಾಗೂ ವೈದ್ಯಕೀಯ ಸಮುದಾಯಕ್ಕೆ ಅವರು ಸಲ್ಲಿಸಿರುವ ಸಮರ್ಪಿತ ಸೇವೆಗೆ ಸಂದ ಪ್ರತಿಷ್ಠಿತ ಗೌರವವಾಗಿದೆ. ಕರಾವಳಿ ಕರ್ನಾಟಕ, ಮಲೆನಾಡು ಮತ್ತು ಉತ್ತರ ಕೇರಳಾದ್ಯಂತ ಇಂಟರ್ ವೆನ್ಶನಲ್ ಕಾರ್ಡಿಯಾಲಜಿ ವಿಧಾನವನ್ನು ಪರಿಚಯಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಡಾ.ಎಚ್.ಪ್ರಭಾಕರ್ ಮುಂಚೂಣಿಯ ಪಾತ್ರ ವಹಿಸಿದ್ದಾರೆ. ಕಳೆದ 25 ವರ್ಷಗಳಿಂದ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮುಖ್ಯ ಇಂಟರ್ ವೆನ್ಶನಲ್ ಕಾರ್ಡಿಯಾಲಜಿಸ್ಟ್ ಆಗಿ ಹೃದಯರೋಗ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.
ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಹೃದ್ರೋಗ ಸಮ್ಮೇಳನವನ್ನು ಆಯೋಜಿಸಿದ ಮೊದಲ ಹೃದ್ರೋಗ ತಜ್ಞರು ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಡಾ.ಎಚ್. ಪ್ರಭಾಕರ್ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೆಬಲ್ ಸಮೂಹ ಸಂಸ್ಥೆಗಳ ನಿರ್ದೇಶಕ ಫಾ.ಫೌಸ್ತಿನ್ ಲೂಕಸ್ ಲೋಬೊ ಅವರು ಅಭಿನಂದಿಸಿದ್ದಾರೆ.