ದುಡಿಯದೇ ಉಣ್ಣಬೇಡ, ಉಣ್ಣದೇ ಮಲಗಬೇಡಾ ಎಂಬ ಉಕ್ತಿಯಂತೆ, ಕಾಯವನು ದಂಡಿಸಿ ನಿತ್ಯ ಕಾಯಕ ಅರಿವು ಮೂಡಿಸಿದವರು ಶರಣ ಜೇಡರ ದಾಸಿಮಯ್ಯನವರು ಎಂದು ಡೋಣಿಯ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.
ನರಗುಂದ: ದುಡಿಯದೇ ಉಣ್ಣಬೇಡ, ಉಣ್ಣದೇ ಮಲಗಬೇಡಾ ಎಂಬ ಉಕ್ತಿಯಂತೆ, ಕಾಯವನು ದಂಡಿಸಿ ನಿತ್ಯ ಕಾಯಕ ಅರಿವು ಮೂಡಿಸಿದವರು ಶರಣ ಜೇಡರ ದಾಸಿಮಯ್ಯನವರು ಎಂದು ಡೋಣಿಯ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.
ಅವರು ತಾಲೂಕಿನ ಶಿರೋಳದ ತೋಂಟದಾರ್ಯಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ 22ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಎರಡು ಪಕ್ಷಿ ಒಂದೇ, ಕಣ್ಣು ಎರಡು ನೋಟ ಒಂದೇ, ಇದು ಸೃಷ್ಟಿಯ ಕೌತುಕವಾದರೆ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರ ವಿಚಾರಧಾರೆಗಳು ಒಂದೇ ಆಗಿರುವುದು ಕಲ್ಯಾಣ ಕ್ರಾಂತಿಗೆ ಕಾರಣವಾಯಿತು. ಹರ ಭಕ್ತ ಹರಳಯ್ಯನವರಿಗೆ ಬಸವಣ್ಣನವರು ಶರಣು ಶರಣಾರ್ಥಿ ಎನ್ನುವ ಮೂಲಕ ಶರಣರ ಸಂಕುಲದ ಆತ್ಮಾವಲೋಕನಕ್ಕೆ ನಾಂದಿಯಾಯಿತು. ಬಿದಿರು ಸೀಳಿ ಬುಟ್ಟಿ ಮಾಡಿ, ಮಾರಾಟ ಮಾಡುವ ಶರಣ ಮೇದಾರ ಕೇತಯ್ಯ ಎದೆಯಲ್ಲಿ ನೆಟ್ಟ ಬಿದಿರಿನ ನೋವನ್ನು ಲೆಕ್ಕಿಸದೆ ಮಡದಿ ಸಾತವ್ವೆ ಜತೆಗೂಡಿ ನಿತ್ಯದ ಜಂಗಮ ದಾಸೋಹ ಸೇವೆಯನ್ನು ಮಾಡಿದ ರೋಚಕ ವಿಷಯ, ಶರಣ ಹೂಗಾರ ಮಾದಯ್ಯನವರ ಮೂಲಕ ಬಸವಣ್ಣನವರು ಶಿವನ ಮೊರೆ ಹೋದರು. ಘಂಟೆ ಹರಿದು ಬೀಳುವಂತೆ ಬಾರಿಸಿದ ವೀರಘಂಟಿ ಮಾಚಿದೇವರ ಪ್ರಾರ್ಥನೆ ಶಿವ ಸಾನಿಧ್ಯ ತಲುಪಿತು. ಕೇತಯ್ಯನವರ ದೇಹದ ಅಗಾಧ ನೋವು ಮಾಯವಾಯಿತು. ಈ ಮೂಲಕ ಸೇವಾ ಪ್ರವೃತ್ತಿಯ ಮಹತ್ವವನ್ನು ಜಗತ್ತಿಗೆ ಸಾರಿದವರು ಎಂದರು.
ದಾಸೋಹ ದಾನಿಗಳಾದ ಗಜೇಂದ್ರಗಡದ ನವೀನ ಹೊನವಾಡ ಮತ್ತು ಶಿರೋಳ ಪಿಡಿಓ ಮಲ್ಲಪ್ಪ ಪೂಜಾರ ಶ್ರೀ ಮಠದಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಸಂಪಾದನಾಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು, ಶಾಂತಲಿಂಗ ಶ್ರೀಗಳು, ಸಂಗಮೇಶ ಪಾಟೀಲ, ಅಡವೇಶಕುಮಾರ, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ನಾಗನಗೌಡ ತಿಮ್ಮನಗೌಡ್ರ, ಆರ್.ಐ. ನದಾಫ, ಹನಮಂತ ಕಾಡಪ್ಪನವರ, ಚಿಂಚಣಿಯ ಅಲ್ಲಮಪ್ರಭು ಸಿದ್ಧ ಸಂಸ್ಥಾನಮಠದ ಸದ್ಭಕ್ತರು, ಸಂಜು ಪರೀಟ ಸೇರಿದಂತೆ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.