ಕನ್ನಡಪ್ರಭ ವಾರ್ತೆ ಹಾಸನ
ಪ್ರಸ್ತುತ ೧೧ ಚುನಾಯಿತ ಸದಸ್ಯ ಬಳಗದೊಂದಿಗೆ ೪೧೪೫ ಜನಸಂಖ್ಯೆಯನ್ನು ಈ ಗ್ರಾಮ ಪಂಚಾಯಿತಿಯು ಒಳಗೊಂಡಿದೆ. ಹಸಿರ ಸಿರಿಯ ನಡುವೆ ಕಂಗೊಳಿಸುತ್ತಿರುವ ಈ ಗ್ರಾಮ ಪಂಚಾಯಿತಿಯು ಜೀರೋ ಕಾರ್ಬೋನ್ ಗುರಿಯೆಡೆಗೆ ಸಾಗುವತ್ತ ಹಲವು ಕ್ರಮಗಳನ್ನು ಕೈಗೊಂಡಿದೆ.ಗ್ರಾಮ ಪಂಚಾಯಿತಿ ಕಚೇರಿಗೆ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಂಡು ಸಂಪೂರ್ಣ ಕಚೇರಿಗೆ ಬೇಕಾದ ವಿದ್ಯುತ್ ಉತ್ಪಾದಿಸಿಕೊಳ್ಳುತ್ತಿದೆ. ಇದರ ಜೊತೆಗೆ ಮಳೆಮಾಪನ ಯಂತ್ರ, ಸೋಲಾರ್ ಆಧಾರಿತ ತಂತಿ ಬೇಲಿ, ಸಿಸಿ ಕ್ಯಾಮೆರಾಗಳು, ಇಂಟರ್ನೆಟ್ ಸಂಪರ್ಕ, ಯಂತ್ರ ಮತ್ತು ಅಂಚೆ ಕಚೇರಿಗಳು ಸಹ ಸೋಲಾರ್ ಸಹಾಯದಿಂದ ನಡೆಯುತ್ತಿವೆ.ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಇಪ್ಪತ್ತು ಸೋಲಾರ್ ಹೈ ಮಾಸ್ಕ್ ಬೀದಿದೀಪಗಳು, ಮತ್ತು ೧೯೦ ಸೋಲಾರ್ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ವಿದ್ಯುತ್ ವೆಚ್ಚವನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿದೆ.ಸೋಲಾರ್ ಲಾಟಿನು:
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮನೆಗಳು ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸಿಕೊಂಡು ಸ್ವಾವಲಂಬಿಯಾಗಿವೆ. ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲದಿಂದ ಸೋಲಾರ್ ಲಾಟಿನುಗಳನ್ನು ದುರ್ಬಲ ವರ್ಗದ ಸಮುದಾಯಕ್ಕೆ ವಿತರಿಸಲಾಗಿದೆ.ಹಲವು ಮನೆಗಳು ಸೋಲಾರ್ ಆಧಾರಿತ ನೀರು ಕಾಯಿಸುವ ವ್ಯವಸ್ಥೆಯನ್ನು ಹೊಂದಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಕಡಾ ೧೦೦ರಷ್ಟು ಮನೆಗಳು ಅಡಿಗೆ ಮಾಡಲು ಐPಉ ಬಳಸುವ ಮೂಲಕ ಇಂಗಾಲ ಸೂಸುವಿಕೆ ತಗ್ಗಲು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ.
ಒಂದು ಲಕ್ಷ ಗಿಡ:
ಹಲವು ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡ ಪರಿಣಾಮ ಬಿರಡಹಳ್ಳಿ ಗ್ರಾಮ ಪಂಚಾಯಿತಿಯು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿದೆ. ಮತ್ತು ಉತ್ತಮ ಸೇವೆಯನ್ನು ಗ್ರಾಮೀಣ ಜನರಿಗೆ ತಲುಪಿಸುವುದನ್ನು ಮುಂದುವರೆಸುತ್ತಿದೆ.