ಜಯದೇವ ಶ್ರೀಗಳು ನಾಡು ಕಂಡ ಶ್ರೇಷ್ಠ ಯತಿ

KannadaprabhaNewsNetwork |  
Published : Oct 06, 2026, 01:45 AM IST
ಕ್ಯಾಪ್ಷನ3ಕೆಡಿವಿಜಿ40 ದಾವಣಗೆರೆಯಲ್ಲಿಂದು ನಡೆದ ಜಯದೇವ ಲೀಲೆ ಪ್ರವಚನ ಕಾರ್ಯಕ್ರಮವನ್ನು ಡಾ.ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ ಮಹಾನ್ ಚೇತನ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.

- ಜಯದೇವ ಲೀಲೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಡಾ.ಬಸವಪ್ರಭು ಶ್ರೀ ಅಭಿಮತ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದ ಮಹಾನ್ ಚೇತನ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಜಯದೇವ ವೃತ್ತದಲ್ಲಿರುವ ಶಿವಯೋಗಾಶ್ರಮದ ಆವರಣದಲ್ಲಿ ಶನಿವಾರ ಸಂಜೆ ಲಿಂ. ಶ್ರೀ ಜಯದೇವ ಮುರುಘ ರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವ, ರಥೋತ್ಸವ ಅಂಗವಾಗಿ ಆಯೋಜಿಸಿದ್ದ ಜಯದೇವ ಲೀಲೆ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಮಾನವ ಜೀವನದಲ್ಲಿ ಜನನ-ಮರಣ ಎಂಬ ಎರಡು ಹಂತಗಳಿವೆ. ಜನನ ಮರಣದ ನಡುವೆ ಇರುವ ಜೀವನ ಬಹಳ ಮುಖ್ಯ. ಜೀವನದ ಸಾರ್ಥಕತೆ ಸಮಾಜ ಸೇವೆಯಿಂದ ಸಾಧ್ಯ. ಸಮಾಜದ ಉದ್ಧಾರವೇ ಆತ್ಮೋದ್ಧಾರವೆಂದು ಭಾವಿಸಿ ಸಮಾಜ ಸೇವೆಯೇ ಲಿಂಗಪೂಜೆ ಎಂದು ತಿಳಿದು, ಸೇವೆ ಮಾಡಿದವರು ಜಯದೇವ ಜಗದ್ಗುರು ಅವರು ನಾಡು ಕಂಡ ಶ್ರೇಷ್ಠ ಯತಿಗಳು. ಒಂದು ಯುಗದ ಕತ್ತಲನ್ನು ಹೊಡೆದೊಡಿಸಿದ ಜ್ಞಾನದ ಸೂರ್ಯ ಎಂದು ಬಣ್ಣಿಸಿದರು.

ಜಯದೇವ ಶ್ರೀಗಳು ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು, ತಿಪಟೂರು, ಅರಸೀಕೆರೆ, ಧಾರವಾಡ, ಕೊಲ್ಲಾಪುರ, ಕಾಶಿ ಮುಂತಾದ ಸ್ಥಳಗಳಲ್ಲಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ನಮ್ಮ ನಾಡಿನ ಗಣ್ಯರಾದ ಬಿ.ಡಿ.ಜತ್ತಿ, ಎಸ್.ನಿಜಲಿಂಗಪ್ಪ, ಜಿ.ಎಸ್. ಶಿವರುದ್ರಪ್ಪ, ಪಾಟೀಲ್ ಪುಟ್ಟಪ್ಪ, ಎಂ.ಚಿದಾನಂದ ಮೂರ್ತಿ, ಚೆನ್ನವೀರ ಕಣವಿ, ಕೊಂಡಜ್ಜಿ ಬಸಪ್ಪ ಇನ್ನೂ ಅನೇಕರು ಈ ಪ್ರಸಾದ ನಿಲಯಗಳಲ್ಲಿ ಓದಿ ತಮ್ಮ ಬದುಕನ್ನು ಉದ್ಧರಿಸಿಕೊಂಡಿದ್ದಾರೆ ಎಂದು ನುಡಿದರು.

ಪ್ರವಚನಕಾರ ಮಹಾಂತೇಶ ಶಾಸ್ತ್ರಿ ಮಾತನಾಡಿ, ಜಯದೇವ ಲೀಲೆ ಪ್ರವಚನ ಕೇಳಿದರೆ ಜೀವನ ಪಾವನ, ಧನ್ಯವಾಗುತ್ತದೆ. ಜಯದೇವ ಶ್ರೀಗಳ ಆದರ್ಶ ಗುಣಗಳು, ನಮ್ಮ ಮನದಲ್ಲಿ ಹುಟ್ಟಿ ಲೋಕಕ್ಕೆ ಒಳಿತು ಮಾಡುವ ಗುಣ ಜಯದೇವ ಜಗದ್ಗುರುಗಳ ಲೀಲೆ ಕೇಳಿದಾಗ ಬರುತ್ತದೆ ಎಂದರು.

ಸಮಾರಂಭದಲ್ಲಿ ಟ್ರಸ್ಟಿನ ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶಪ್ಪ, ಸೋಗಿ ಶಾಂತಕುಮಾರ, ಮಹಿಳಾ ಬಸವ ಕೇಂದ್ರದ ಮಹದೇವಮ್ಮ, ವಿಭೂತಿ ಬಸವಾನಂದರು ಇತರರು ಇದ್ದರು. ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ನಡೆಸಿಕೊಟ್ಟರು.

- - -

(ಬಾಕ್ಸ್‌)

* ಆಸ್ಪತ್ರೆ ಕಟ್ಟಲು ಮಹಾರಾಜರಿಗೆ ₹40 ಸಾವಿರ ನೀಡಿದ್ದ ಜಗದ್ಗುರು

ಅಜ್ಞಾನ, ಅನಕ್ಷರತೆ, ಬಡತನ, ಅಸಮಾನತೆ, ಸಮಸ್ಯೆಗಳನ್ನು ಕಿತ್ತು ಹಾಕಿದ ದಾರ್ಶನಿಕರು ಜಯದೇವ ಶ್ರೀ. ಸುತ್ತು-ಕಟ್ಟು ಎಂಬ ಸಂದೇಶವನ್ನು ನೀಡಿದರು. ಪೂಜ್ಯರ ಸಮಾಜಸೇವಾ ಕಾರ್ಯಗಳನ್ನು ನೋಡಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಸಂಸ್ಥಾನಕ್ಕೆ ಕರೆಯಿಸಿ ಗೌರವಿಸುತ್ತಾರೆ. ಆಗ ಸ್ವಾಮೀಜಿಯವರು ಮೈಸೂರು ಮಹಾರಾಜರಿಗೆ ಮೈಸೂರಿನಲ್ಲಿ ಆಸ್ಪತ್ರೆಯನ್ನು ಕಟ್ಟಲು ಅಂದು ₹40 ಸಾವಿರ ನೀಡಿದ ದಾನಿಗಳು. ಅಷ್ಟೇ ಅಲ್ಲದೇ ಜಯದೇವ ಜಗದ್ಗುರು ಅವರು ಪೀಠಕ್ಕೆ ಬಂದ ನಂತರ 1934 ಕ್ಕೆ ₹18 ಲಕ್ಷಗಳನ್ನು ಸಮಾಜದ ಉಚಿತ ಹಾಸ್ಟೆಲ್, ಆಸ್ಪತ್ರೆಗೆ ಉಳಿದ ದಾನ ಧರ್ಮಕ್ಕೆ ಉಪಯೋಗಿಸಿದ್ದಾರೆ ಎಂದು ನಾಲ್ವಡಿ ಕೃಷ್ಣರಾಜ ಒಡೆಯರು ಹೇಳುತ್ತಾರೆ. ಇಂದು ಬೆಂಗಳೂರಿನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯು ಪ್ರಸಿದ್ಧಿ ಪಡೆದಿದೆ. ಇಂತಹ ಆಸ್ಪತ್ರೆಗೆ ಜಗದ್ಗುರುಗಳವರು ಧನಸಹಾಯ ಮಾಡಿದ್ದಾರೆ. ಮಹಾತ್ಮ ಗಾಂಧೀಜಿಯವರು ಜಗದ್ಗುರುಗಳನ್ನು ಹಾವೇರಿಯ ಹೊಂಡದ ಮಠದಲ್ಲಿ ಭೇಟಿ ಮಾಡಿದ್ದರು ಎಂಬುದು ವಿಶೇಷ ಎಂದು ಡಾ.ಬಸವಪ್ರಭು ಸ್ವಾಮೀಜಿ ಸ್ಮರಿಸಿದರು.

- - -

-3ಕೆಡಿವಿಜಿ40: ದಾವಣಗೆರೆಯಲ್ಲಿ ಶನಿವಾರ ನಡೆದ ಜಯದೇವ ಲೀಲೆ ಪ್ರವಚನ ಕಾರ್ಯಕ್ರಮವನ್ನು ಡಾ.ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ಮತದಾರರ ಶುದ್ಧೀಕರಣಕ್ಕೆ ಎಸ್‌ಐಆರ್ ಅಗತ್ಯ: ಯತ್ನಾಳ
₹5 ಕೋಟಿ ವೆಚ್ಚದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳ: ಶಾಸಕ ಮಂಜುನಾಥ್‌