ನಗರಸಭೆ ಆಡಳಿತದ ವಿರುದ್ಧ ಜಯಜವೇ ಪ್ರತಿಭಟನೆ

KannadaprabhaNewsNetwork |  
Published : Oct 29, 2025, 01:00 AM IST
ಕೆ ಕೆ ಪಿ ಸುದ್ದಿ 02: | Kannada Prabha

ಸಾರಾಂಶ

ಕನಕಪುರ: ನಗರಸಭೆಯ ಅಧಿಕಾರಿಗಳು, ಸದಸ್ಯರು ನಗರ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಮೋಜು ಮಸ್ತಿಯಲ್ಲಿ ತೊಡಗಿರುವುದು ನಗರ ನಾಗರಿಕರ ದುರ್ದೈವ ಎಂದು ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರ ಸ್ವಾಮಿ ವಿಷಾದಿಸಿದರು.

ಕನಕಪುರ: ನಗರಸಭೆಯ ಅಧಿಕಾರಿಗಳು, ಸದಸ್ಯರು ನಗರ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಮೋಜು ಮಸ್ತಿಯಲ್ಲಿ ತೊಡಗಿರುವುದು ನಗರ ನಾಗರಿಕರ ದುರ್ದೈವ ಎಂದು ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರ ಸ್ವಾಮಿ ವಿಷಾದಿಸಿದರು.

ನಗರಸಭೆ ಮುಂದೆ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಗರಸಭೆ ಸೋಮಾರಿ ಕಟ್ಟೆಯಂತಾಗಿದೆ. ಆಯುಕ್ತರು ರಜೆ ಹಾಕಿ ಒಂದು ತಿಂಗಳು ಕಳೆದರೂ ಬಂದಿಲ್ಲ. ಸಿಬ್ಬಂದಿ ಹಾಗೂ ಅಧಿಕಾರಿಗಳು ತಮಗೆ ಇಷ್ಟ ಬಂದ ರೀತಿ ಬಂದು ಹೋಗುತ್ತಾರೆಯೇ ಹೊರತು ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಗರ ಜನತೆಗೆ ಅನುಕೂಲ ಮಾಡಿ ಕೊಡಲು ಪ್ರತಿ ವಾರ್ಡ್‌ನಲ್ಲೂ ಈ ಖಾತಾ ಆಂದೋಲನಕ್ಕೆ ಚಾಲನೆ ನೀಡಿದ್ದನ್ನು ಕಡೆಗಣಿಸಿಕುವ ಅಧಿಕಾರಿಗಳು ಆರು ತಿಂಗಳು ಕಳೆದರೂ ನಗರದ ಸಾರ್ವಜನಿಕರಿಗೆ ಇ- ಖಾತಾ ದಾಖಲಾತಿ ಕೊಡದಿರುವುದು ಅವರ ಕೆಲಸದ ವೈಖರಿ ತೋರಿಸುತ್ತದೆ. ಸಾರ್ವಜನಿಕರಿಗೆ ಖಾತೆ ಮಾಡಿಕೊಡುವಲ್ಲಿ ನಗರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮೂರು ತಿಂಗಳ ಅವಧಿಯೊಳಗೆ ಖಾತೆ ಮಾಡಬೇಕು ಎಂಬ ನಿಯಮವಿದ್ದರೂ, ಅಧಿಕಾರಿಗಳು ಸಾರ್ವಜನಿಕರಿಗೆ ಖಾತೆ ಮಾಡಿಕೊಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಪ್ರತಿ ದಿನವೂ ಜನರು ನಗರಸಭೆಗೆ ಅಲೆದಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತ ಸಂಘದ ಸಂತಾಲಕ ಚೀಲೂರು ಮುನಿರಾಜು ಮಾತನಾಡಿ, ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 138 ಕೋಟಿ ವೆಚ್ಚದಲ್ಲಿ ನಗರದ ಪ್ರತಿ ಮನೆಗೂ ಕಾವೇರಿ ಕುಡಿಯುವ ನೀರು ಪೈಪ್ ಗಳ ಅಳವಡಿಸಲು ರಸ್ತೆಗಳನ್ನು ಅಗೆದು ಹಾಕಿರುವುದರ ಜೊತೆಗೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇದರಿಂದ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ನಗರಸಭೆ ವಿಫಲವಾಗಿದೆ. ಹೌಸಿಂಗ್ ಬೋರ್ಡ್ ಬಳಿಯಿಂದ ರೈಸ್‌ಮಿಲ್‌ವರೆಗಿನ ಎಂ ಜಿ. ರಸ್ತೆ ಮೂಲಕ ನಡೆಸುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿ ವಿಳಂಬದಿಂದ ತಾಲೂಕಿನ ಜನರ ಓಡಾಟದ ಜೊತೆಗೆ ನಗರದಲ್ಲಿ ಶಾಲಾ ಮಕ್ಕಳು, ವಾಹನ ಸವಾರರು ತಮ್ಮ ಜೀವ ಕೈಯಲ್ಲಿಡಿದು ರಸ್ತೆ ದಾಟುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಶಿವಸ್ವಾಮಿ, ಮಲ್ಲಯ್ಯ, ಶಿವರಾಜ್, ಭಾಸ್ಕರ್, ರವಿ, ಶ್ರೀನಿವಾಸ, ದೇವರಾಜು, ಹರೀಶ್, ಗಿರೀಶ ಶೇಖರ್, ಶಿವು ಇತರರು ಪಾಲ್ಗೊಂಡಿದ್ದರು.

(ಫೋಟೋ ಕ್ಯಾಫ್ಷನ್‌)

ಕನಕಪುರ ನಗರಸಭೆಯ ಕಾರ್ಯವೈಖರಿಯನ್ನು ಖಂಡಿಸಿ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರ್ ಸ್ವಾಮಿ ನೇತೃತ್ವದಲ್ಲಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು