ಶೋಷಿತ ಸಮುದಾಯದಲ್ಲಿ ಜನಿಸಿದವರು ದಾರ್ಶನಿಕರಾಗಿದ್ದಾರೆ

KannadaprabhaNewsNetwork |  
Published : Oct 29, 2025, 01:00 AM IST
ವಾಲ್ಮೀಕಿ ಜಯಂತಿ ಮೆರವಣಿಗೆಯಲ್ಲಿ ಶಾಸಕರಾದ ಟಿ ರಘುಮೂರ್ತಿ ಹಾಗೂ ಮುಖಂಡರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಶಾಸಕ ಟಿ.ರಘುಮೂರ್ತಿ ಹೇಳಿಕೆ । ಪರಶುರಾಂಪುರದಲ್ಲಿ ವಾಲ್ಮೀಕಿ ಜಯಂತಿಯ ಅದ್ಧೂರಿ ಮೆರವಣಿಗೆ

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಶೋಷಿತ ಸಮುದಾಯಗಳಲ್ಲಿ ಹುಟ್ಟಿ ಬೆಳೆದವರೇ ದಾರ್ಶನಿಕರಾಗಿ ಬಾಳಿ ಬದುಕಿ ಮಾನವನ ಜಗತ್ತಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಪರಶುರಾಂಪುರ ಗ್ರಾಮದಲ್ಲಿ ಸ್ಥಳೀಯ ಆಡಳಿತ, ವಾಲ್ಮೀಕಿ ನಾಯಕ ಸಂಘ, ಗ್ರಾಮದ ನಾಯಕ ಸಮುದಾಯದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಭಾರತ ದೇಶದ ಇತಿಹಾಸದಲ್ಲಿ ವಾಲ್ಮೀಕಿ, ವ್ಯಾಸ, ಕೃಷ್ಣ, ಕನಕ, ಬಸವ, ಅಂಬೇಡ್ಕರ್ ಇವರೆಲ್ಲರೂ ಶೋಶಿತ ಸಮುದಾಯದಲ್ಲಿ ಜನಿಸಿದವರು. ಇವರು ಜಗತ್ತಿಗೆ ನೀಡಿದ ಸಂದೇಶ ಹಾಗೂ ಸಮಾಜ ಉಪಯೋಗಿ ಕಾರ್ಯಗಳು ಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಹ ತೀರ ಪ್ರಸ್ತುತವೇನಿಸಿವೆ ನಾವು ಇವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ನಮ್ಮ ಬದುಕು ಹಸನಾಗುತ್ತದೆ ಎಂದರು.

ನಿವೃತ್ತ ಪ್ರಾಚಾರ್ಯ ಟಿ.ಎಲ್.ಸುಧಾಕರ್ ಪ್ರಾಸ್ತಾವಿಕ ಮಾತನಾಡಿ, ನಾಯಕ ಸಮುದಾಯದವರು ಶಿಕ್ಷಣಕ್ಕೆ ಆದ್ಯತೆ ನೀಡಿ ಮಹರ್ಷಿ ತಿಳಿಸಿದಂತೆ ಕೌಟುಂಬಿಕ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ನಾವು ಅಳವಡಿಸಿಕೊಂಡರೆ ಮಾತ್ರ ಜಯಂತೋತ್ಸವಗಳಿಗೆ ಅರ್ಥ ಬರುತ್ತದೆ ನಮ್ಮವರ ಜನವಸತಿ ಪ್ರದೇಶಗಳಲ್ಲಿ ಶೈಕ್ಷಣಿಕ ಪರಿಸರ ನಿರ್ಮಾಣ ಮಾಡಿಕೊಟ್ಟು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಸಮುದಾಯಗಳೊಂದಿಗೆ ಸಹ ಉತ್ತಮ ಸಂಬಂಧ ಇಟ್ಟುಕೊಂಡು ಸದಾ ಸಮಾಜ ಮುಖಿಯಾಗಿ ನಮ್ಮ ಧಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.

ಇದೇ ವೇಳೆ ಬೆಳ್ಳಿಯ ಸಾರೋಟಿನಲ್ಲಿ ವಾಲ್ಮೀಕಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಿಸಿ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿವಿಧ ಜನಪದ ಕಲಾತಂಡಗಳ ಮೂಲಕ ಗ್ರಾಮದ ಬೀದಿಗಳಲ್ಲಿ ಸಂಜೆವರೆಗೆ ಸಾಂಸ್ಕೃತಿಕ ಮತ್ತು ಸಾಹಿತ್ಯದ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು. ಗ್ರಾಪಂ ಅಧ್ಯಕ್ಷ ಎಂ.ರುದ್ರೇಶ, ಉಪಾಧ್ಯಕ್ಷ ತಿಪ್ಪಮ್ಮ, ಸದಸ್ಯರಾದ ನಾಗಭೂಷಣ, ಬೊಮ್ಮಕ್ಕ, ರವಿ, ಮುಖಂಡರಾದ ಜೆ.ಒ.ಚೆನ್ನಕೇಶವ, ವಾಲ್ಮೀಕಿ, ನಿವೃತ್ತ ಪ್ರಾಚಾರ್ಯ ಟಿಎಲ್ ಸುಧಾಕರ, ಐಓಸಿ ನಾಗರಾಜ, ಜಯಣ್ಣ, ತಿಪ್ಪಮ್ಮ, ಪ್ರಸನ್ನ, ಕೇಶವ, ರಂಗಸ್ವಾಮಿ, ತಿಪ್ಪೇರುದ್ರ, ಮಂಜುನಾಥ, ಬಸವರಾಜ, ಬೊಮ್ಮಯ್ಯ, ಮುತ್ತಯ್ಯ, ಹೊರಕೆರೆ ಪ್ರಸನ್ನ, ವಿವಿಧ ಗ್ರಾಮದ ನಾಯಕ ಸಮುದಾಯದ ಯುವಕರು ಸಂಘಟನೆಯ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು