ಲಕ್ಷ್ಮೀಪುರ ಸೊಸೈಟಿ ಅಧ್ಯಕ್ಷ ಜಯಕುಮಾರ್

KannadaprabhaNewsNetwork |  
Published : Jul 19, 2025, 02:00 AM IST
18ಕೆಆರ್ ಎಂಎನ್ 1.ಜೆಪಿಜಿರಾಮನಗರ ತಾಲೂಕಿನ ಲಕ್ಷ್ಮೀಪುರ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷ ಎಲ್.ವಿ.ಜಯಕುಮಾರ್ ಹಾಗೂ ಉಪಾಧ್ಯಕ್ಷ ಜಿ.ಎಚ್.ಗೋಪಾಲ್ ಅವರನ್ನು ಮುಖಂಡರು ಅಭಿನಂದಿಸಿದರು. | Kannada Prabha

ಸಾರಾಂಶ

ರಾಮನಗರ: ತಾಲೂಕಿನ ಲಕ್ಷ್ಮೀಪುರ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಲ್.ವಿ.ಜಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಜಿ.ಎಚ್.ಗೋಪಾಲ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ರಾಮನಗರ: ತಾಲೂಕಿನ ಲಕ್ಷ್ಮೀಪುರ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಲ್.ವಿ.ಜಯಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಜಿ.ಎಚ್.ಗೋಪಾಲ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಬ್ಯಾಂಕ್ ಪ್ರತಿನಿಧಿ ಸೇರಿ ಒಟ್ಟು 13 ನಿರ್ದೇಶಕರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಎಲ್.ವಿ.ಜಯಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎಚ್.ಗೋಪಾಲ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ರಿಟರ್ನಿಂಗ್ ಅಧಿಕಾರಿಯಾಗಿದ್ದ ಮಂಜುನಾಥ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸಂಘದ ಸಿಇಒ ಮಹಾಲಿಂಗಯ್ಯ ಇದ್ದರು.

ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಯರೇಹಳ್ಳಿ ಮಂಜು, ಲಕ್ಷ್ಮೀಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಪರಿಮಿತಿ 12 ಗ್ರಾಮಗಳನ್ನು ಒಳಗೊಂಡಿದೆ. ಈ ಸಂಘಕ್ಕೆ ಪಕ್ಷಾತೀತವಾಗಿ 12 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುವ ಕೆಲಸ ಮಾಡಿ ಸಂಘಕ್ಕೆ ಆಗುತ್ತಿದ್ದ ಹೊರೆ ತಪ್ಪಿಸಿದ್ದೀರಿ. ಅದಕ್ಕೆ ಕಾರಣರಾದ ಎರಡು ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ನಿರ್ದೇಶಕರಾದ ಎಚ್.ಎನ್.ಅಶೋಕ್ ಆಶಯದಂತೆ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಸಾಲಿನಲ್ಲಿ 5.5 ಕೋಟಿ ರು. ಬೆಳೆ ಸಾಲ ವಿತರಣೆ ಮಾಡಿದ್ದು, ಆಭರಣ ಸಾಲ, ಸ್ವಸಹಾಯ ಸಂಘಗಳಿಗೆ ಹೆಚ್ಚು ಸಾಲ ವಿತರಣೆ ಮಾಡುವ ಕೆಲಸವನ್ನು ಎಲ್ಲರೂ ಸೇರಿ ಮಾಡಿ ಎಂದು ಸಲಹೆ ನೀಡಿದರು.

ಸೊಸೈಟಿ ಎಂದರೆ ಕೇವಲ ಬೆಳೆ ಸಾಲ ವಿತರಣೆ ಮಾಡುವುದು ಅಷ್ಟೇ ಅಲ್ಲದೆ ಸ್ವಯಂ ಉದ್ಯೋಗ ಮಾಡುವವರು ಸಾಲ ಪಡೆಯಬಹುದಾಗಿದೆ. ಈ ಬಗ್ಗೆ ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಅರಿವು ಮೂಡಿಸಿ, ವಿದ್ಯಾವಂತ ಯುವಕರು ಸಾಲ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಷ್ಟದಲ್ಲಿರುವ ಸಹಕಾರಿ ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಿದರೆ ಸಾಲ ಯೋಜನೆಗಳು ಸಂಘಕ್ಕೆ ಮತ್ತಷ್ಟು ಸಿಗಲು ಸಾಧ್ಯ. ಸಂಘದ ಆಡಳಿತ ಮಂಡಳಿ ಮತ್ತು ಸಿಇಓ ಅವರು ಒಗ್ಗಟ್ಟಾಗಿ ಸಂಘವನ್ನು ಮುನ್ನಡೆಸಿದಾಗ ಸಂಘ ಅಭಿವೃದ್ಧಿಯಾಗುವ ಜೊತೆಗೆ ಸಹಕಾರಿಗಳಿಗೆ ಸೌಲಭ್ಯಗಳನ್ನು ಕೊಡಲು ಸಾಧ್ಯವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ನಾರಾಯಣ, ಪುಟ್ಟಸ್ವಾಮಯ್ಯ, ವೆಂಕಟಗಿರಯ್ಯ, ವೆಂಕಟೇಶಯ್ಯ, ಪುಟ್ಟಮಾರಯ್ಯ, ರಾಮದಾಸ್, ವೀರಭದ್ರಯ್ಯ, ಸುನಂದ, ಜಯರತ್ನ, ಮುನಿಯಪ್ಪ, ಸಿಇಓ ಹೆಚ್.ಪಿ.ಮಹಲಿಂಗಯ್ಯ, ಗುಮಾಸ್ತ ಮುತ್ತುರಾಜು, ಗ್ರಾಮದ ಮುಖಂಡರಾದ ವೀರಭದ್ರಯ್ಯ (ಗುಂಡಪ್ಪ), ನಾಗೇಶ್, ಮಹದೇವಯ್ಯ, ಗೋಕುಲ್, ನಾಗರಾಜು, ಆನಂದ್, ಹಾಪ್‌ಕಾಮ್ಸ್ ಪುಟ್ಟಸ್ವಾಮಯ್ಯ ಮತ್ತಿತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

18ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ತಾಲೂಕಿನ ಲಕ್ಷ್ಮೀಪುರ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷ ಎಲ್.ವಿ.ಜಯಕುಮಾರ್ ಹಾಗೂ ಉಪಾಧ್ಯಕ್ಷ ಜಿ.ಎಚ್.ಗೋಪಾಲ್ ಅವರನ್ನು ಮುಖಂಡರು ಅಭಿನಂದಿಸಿದರು.

PREV

Latest Stories

ಒಳಮೀಸಲಾತಿ ಜಾರಿ ಮಾಡದಿದ್ದರೆ, ಕರ್ನಾಟಕ ಬಂದ್‌: ಮಾಜಿ ಸಚಿವ ನಾರಾಯಣಸ್ವಾಮಿ
ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಮುಖ್ಯ: ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಮಕ್ಕಳಿಂದ ಪರಿಸರ ಸ್ನೇಹಿ ಇಟ್ಟಿಗೆ ತಯಾರಿ: ರವೀಂದ್ರ ರುದ್ರವಾಡಿ