ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯಲ್ಲಿ ಶಿವಸಿಂಪಿ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಮಹಾಶಿವರಾತ್ರಿಯಂದು ನಡೆದ ಶಿವದಾಸಿಮಯ್ಯನವರ ಜಯಂತಿ ಉತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬನಹಟ್ಟಿ ಮಹಾಂತ ಮಂದಾರ ಮಠದ ಶರಣರಾದ ಮಹಾಂತ ದೇವರು ಮಾತನಾಡಿ, ರಜೆಯಿಲ್ಲದೆ ಸರ್ಕಾರವೇ ಶಿವದಾಸಿಮಯ್ಯ ಜಯಂತಿ ಆಚರಿಸಬೇಕು. ಈ ಸಮುದಾಯಕ್ಕೆ ೨ಎ ಮೀಸಲು ಘೋಷಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ತಕ್ಷಣವೇ ಜಾರಿಯಾಗಬೇಕು. ಶಿಕ್ಷಣದಲ್ಲಿ, ಧಾರ್ಮಿಕವಾಗಿ ಇತ್ತೀಚಿನ ದಿನಗಳಲ್ಲಿ ಪ್ರಗತಿ ಕಾಣುತ್ತಿರುವ ಸಮಾಜ ರಾಜಕೀಯವಾಗಿಯೂ ಮುಂದೆ ಬರಬೇಕೆಂದ ಅವರು, ಪ್ರತಿಯೊಬ್ಬರೂ ಸಮಾಜದೊಂದಿಗೆ ಬೆರೆತು ಸಂಘಟಿತ ಸಮಾಜ ನಿರ್ಮಿಸಿದಲ್ಲಿ ಸಮಾಜದೊಂದಿಗೆ ವ್ಯಕ್ತಿಯೂ ಬೆಳೆಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಘಟಿತರಾಗಬೇಕು ಅಂದಾಗ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ, ಉಪನ್ಯಾಸಕ ವಿಶ್ವಜ ಕಾಡದೇವರ ಮಾತನಾಡಿದರು. ಬನಹಟ್ಟಿ ಶಿವಸಿಂಪಿ ಸಮಾಜದ ಅಧ್ಯಕ್ಷ ಸಿದ್ದಲಿಂಗಪ್ಪ ತುಂಗಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕೀರ್ತಿ ಆಳಗಿ, ಐಶ್ವರ್ಯ ಅವರಿಗೆ ಸನ್ಮಾನಿಸಲಾಯಿತು.