ಡಂಬಳ: ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಿರಂಜನ ಜ್ಯೋತಿ ಮೃತ್ಯುಂಜಯ ಮಹಾಸ್ವಾಮಿಗಳಗಳ ಜಯಂತ್ಯುತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ನ. 10ರಿಂದ 17ರ ವರೆಗೆ ಪ್ರತಿ ದಿನ ಸಂಜೆ 7 ಗಂಟೆಯಿಂದ 8ರ ವರೆಗೆ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಂಸ್ಥೆಯ ಕೆ.ಕೆ. ನಂದಿಕೋಲ ಪ್ರೌಢಶಾಲಾ ಆವರಣದಲ್ಲಿ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಜರುಗುವುದು.
ಹಿರೇವಡ್ಡಟ್ಟಿ ಗ್ರಾಮದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಪ್ರವಚನ ಮಾಡುವರು, ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸುವರು.
ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮ ತಾಯಿ ನೇತೃತ್ವ ವಹಿಸುವರು, ಮುಖ್ಯ ಅತಿಥಿಗಳಾಗಿ ಡಾ. ಎ.ಸಿ. ಚಾಕಲಬ್ಬಿ, ಡಾ. ಉಮೇಶ ಪುರದ, ಗೌಸುಸಾಬ್ ದೊಟಿಹಾಳ, ಮಹೇಶ ನರಿಬೋಳ, ತೋಟೆಂದ್ರಕುಮಾರ ಕರಡಕರ್, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಆಗಮಿಸಲಿದ್ದಾರೆ.ನ.16ರಂದು ನಡೆಯುವ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯ ಪ್ರಭುಶಾಂತ ಶ್ರೀಗಳು ವಹಿಸುವರು, ಅತಿಥಿಗಳಾಗಿ ಉದ್ಯಮಿ ಆನಂದಸ್ವಾಮಿ ಗಡ್ಡದೇವರಮಠ, ಟಿ.ಈಶ್ವರ, ಸಂಯುಕ್ತ ಬಂಡಿ, ಶಶಿಕಲಾ ಪಾಟೀಲ್, ಶೋಭಾ ಮೇಟಿ, ಗ್ರಾಪಂ ಅಧ್ಯಕ್ಷೆ ನಾಗವ್ವ.ವೆಂ.ಬಳ್ಳಾರಿ, ಕೆ.ವಿ. ಹಂಚಿನಾಳ, ನಾಗೇಶ ಹುಬ್ಬಳ್ಳಿ, ಹೇಮಂತಗೌಡ ಪಾಟೀಲ್, ಆನಂದಗೌಡ ಪಾಟೀಲ್, ಡಿ.ಡಿ.ಮೋರನಾಳ, ಹೇಮಗಿರಿಶ ಹಾವಿನಾಳ, ರವಿ ಕರಿಗಾರ, ರಾಜು ಕುರಡಗಿ, ಸದಾಶಿವಯ್ಯ ಮದರಿಮಠ, ಎಸ್.ಎಚ್. ಶಿವನಗೌಡರ, ಕಿರಣ ಪ್ರಕಾಶ ಬೂಮಾ, ಶರಣಪ್ಪ ಸಾಸನೂರ, ಸುರೇಶ ನಾಯ್ಕರ, ಸೋಮರಡ್ಡಿ ನಡೂರ, ಮದರಸಾಬ್ ಸಿಂಗನಮಲ್ಲಿ ಆಗಮಿಸುವರು.
ನ. 17ರಂದು ಮಹನ್ಯಾ ಗುರು ಪಾಟೀಲ್ ಅವರಿಂದ ಸಂಗೀತ ಸಂಜೆ ನಡೆಯಲಿದೆ ಎಂದು ಜಯಂತ್ಯುತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಸಮಿತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.