ಹಾಗಲವಾಡಿ ಸಹಕಾರ ಸಂಘಕ್ಕೆ ಜಯಪ್ರಕಾಶ್ ಅಧ್ಯಕ್ಷ

KannadaprabhaNewsNetwork |  
Published : Jan 24, 2025, 12:47 AM IST
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಉಪಾಧ್ಯಕ್ಷರಾಗಿ ವೇದಾತಿ ಹರೀಶ್ ಅವಿರೋಧವಾಗಿ ಆಯ್ಕೆಯಾದರು. | Kannada Prabha

ಸಾರಾಂಶ

ತಾಲೂಕಿನ ಹಾಗಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಹಾಗೂ ಉಪಾಧ್ಯಕ್ಷರಾಗಿ ವೇದಾವತಿ ಹರೀಶ್ ಅವಿರೋಧ ಆಯ್ಕೆಯಾದರು. 12 ಜನ ನಿರ್ದೇಶಕರಲ್ಲಿ ನಾಲ್ಕು ಗೈರು ಆಗಿದ್ದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಹಾಗಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಹಾಗೂ ಉಪಾಧ್ಯಕ್ಷರಾಗಿ ವೇದಾವತಿ ಹರೀಶ್ ಅವಿರೋಧ ಆಯ್ಕೆಯಾದರು. 12 ಜನ ನಿರ್ದೇಶಕರಲ್ಲಿ ನಾಲ್ಕು ಗೈರು ಆಗಿದ್ದರು.ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯಪ್ರಕಾಶ್ ಉಪಾಧ್ಯಕ್ಷ ಸ್ಥಾನಕ್ಕೆ ವೇದಾವತಿ ಹರೀಶ್ ಮಾತ್ರವೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರಿಂದ ಚುನಾವಣೆ ಅಧಿಕಾರಿ ಲಿಯಾಖಾತ್ ಅಲಿ ಖಾನ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ ಸಹಕಾರ ಸಂಘದ ಅಭಿವೃದ್ದಿಗೆ ಕೆ.ಎನ್ ರಾಜಣ್ಣ ಅವರ ಸಹಕಾರ ಪಡೆದು ಅಭಿವೃದ್ದಿ ಪಡಿಸಲಾಗುತ್ತದೆ. ಸಹಕಾರ ಸಂಘದಿಂದ ಪ್ರತಿಯೊಬ್ಬ ರೈತರಿಗೂ ಸಾಲ ಸೌಲಭ್ಯವನ್ನು ಕೊಡಿಸಲಾಗುತ್ತಿದ್ದು , ರೈತರಿಗೆ ಅಡಿಕೆ ಸಾಲ , ವಾಹನಸಾಲ , ಚಿನ್ನಾಭರಣ ಸಾಲ , ಬೆಳೆ ಸಾಲ ಜತಗೆ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ್ದು , ನಮ್ಮ ಸಹಕಾರ ಸಂಘದ ವತಿಯಿಂದ ರೈತರಿಗೆ ಎಟಿಎಂ , ಜನ ಔಷಧ ಕಟ್ಟಡ ಹಾಗೂ ಹಾರ್ಡ್ ವೇರ್ ಗಳನ್ನು ಮಾಡಿದ್ದು ಅನೇಕ ಯೋಜನೆಗಳನ್ನು ರೈತರಿಗೆ ನೀಡಿದ್ದು‌ ಮುಂಬರುವ ದಿನಗಳಲ್ಲಿ ಹೆಚ್ಚು ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತದೆ. ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಸಹಕಾರಿ‌ ಕ್ಷೇತ್ರಕ್ಕೆ‌ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದು‌ ಅವರ ಸಹಕಾರ ಪಡೆದು ಹೆಚ್ಚು ಅನುದಾನ ತಂದು ಸಹಕಾತ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷೆ ವೇದಾವತಿ ಹರೀಶ್ ಮಾತನಾಡಿ ಸರ್ಕಾರದಿಂದ ಬರುವ ಅನುದಾನವನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇವೆ. ಜತೆಗೆ ನಮ್ಮ ಎಲ್ಲ ನಿರ್ದೇಶಕರ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಸಹಕರಿಸಲಾಗುತ್ತದೆ. ರೈತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ದನಾಗಿರುತ್ತೇನೆ ನನ್ನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು. ನಿರ್ದೇಶಕರಾದ ದಯಾನಂದ್ , ನಾಗೇಂದ್ರಪ್ಪ , ಯರ್ರಯ್ಯ ,ಗಂಗಮ್ಮ ,ಹೊನ್ನಪ್ಪ‌, ಮೋಹನ್ ಕುಮಾರ್ , ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ , ಯೋಗೀಶ್ , ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನಿಜಾನಂದಮೂರ್ತಿ , ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ