ಪಾಂಡವಪುರ:
ಹಿಂದಿನ ಉಪಾಧ್ಯಕ್ಷ ಡಿ.ಕೆ.ಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಜಯರಾಮೇಗೌಡ ಹೊರತು ಪಡಿಸಿ ಉಳಿದ ಸದಸ್ಯರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾದ ಸಹಾಯಕ ನಿರ್ದೇಶಕ ರಮೇಶ್ ಘೋಷಿಸಿದರು.
ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಮೇಲುಕೋಟೆ ಗ್ರಾಪಂ ಜೆಡಿಎಸ್ ತೆಕ್ಕೆಯಲ್ಲಿದ್ದು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಾರ್ಗದರ್ಶನದೊಂದಿಗೆ ನೂತನ ಉಪಾಧ್ಯಕ್ಷರಾಗಿ ಜಯರಾಮೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.ಕ್ಷೇತ್ರದ ಶಾಸಕ ದರ್ಶನ್‌ಪುಟ್ಟಣ್ಣಯ್ಯ ತಾಲೂಕಿನ ಅಭಿವೃದ್ಧಿ ಪಡಿಸಲು ವಿಫಲರಾಗಿದ್ದಾರೆ. ರಸ್ತೆಗಳ ಅಭಿವೃದ್ಧಿ ಕುಂಠಿತಗೊಂಡಿದೆ, ಶಾಸಕರು ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದರು.
ವಿದ್ಯಾರ್ಥಿ ದಿಸೆಯಲ್ಲಿ ಒಮ್ಮೆಯಾದರೂ ಕವಿಶೈಲ ವೀಕ್ಷಿಸಿ: ಎಸ್.ಎನ್.ಜಯರಾಂ
ಕುವೆಂಪು ಎಂದರೆ ಒಂದು ಕನ್ನಡ ಸಾರಸ್ವತ ಲೋಕದ ಶಕ್ತಿ. ವಿದ್ಯಾರ್ಥಿ ಜೀವನದಲ್ಲಿ ಒಮ್ಮೆಯಾದರೂ ಕವಿಶೈಲ್ ವೀಕ್ಷಿಸಬೇಕು ಎಂದು ಕಿಕ್ಕೇರಿ ಇನ್ಸ್ ಪೆಕ್ಟರ್ ಎಸ್.ಎನ್. ಜಯರಾಂ ಹೇಳಿದರು.
ಪ್ರಕೃತಿಯೊಂದಿಗೆ ಬದುಕಿ ತಮ್ಮ ಪ್ರತಿ ಕಾವ್ಯ, ಸಾಹಿತ್ಯದಲ್ಲಿ ಪ್ರಕೃತಿಯ ಚಿತ್ರಣವನ್ನು ತಿಳಿಸುತ್ತ ಸಮಾಜದ ಅಂಕುಡೊಂಕುಗಳನ್ನು ನೇರವಾಗಿ ತಿಳಿಸಿಕೊಟ್ಟ ರಸಋಷಿ ಕುವೆಂಪು. ಮಾತೃಭಾಷೆ ಸರ್ವಶ್ರೇಷ್ಠವಾಗಿದ್ದು, ಜ್ಞಾನಾರ್ಜನೆಗೆ ಬೇಕಿರುವುದು ಪರಭಾಷೆಯಲ್ಲ ಮಾತೃಭಾಷೆ ಎಂಬುದನ್ನು ತಮ್ಮ ಆರಂಭಿಕ ಕಾವ್ಯ ಲೋಕದ ಪಯಣದಲ್ಲಿ ಸಾಬೀತುಪಡಿಸಿದರು ಎಂದರು.
ಪ್ರಾಂಶುಪಾಲ ಎಂ.ಆರ್.ಸಹದೇವ್ ಮಾತನಾಡಿ, ಕುವೆಂಪು ಕನ್ನಡ ಸಾರಸ್ವತ ಲೋಕ ಗಟ್ಟಿಗೊಳಿಸಿದ್ದಾರೆ. ಇವರ ಮಂತ್ರಮಾಂಗಲ್ಯ ಸರಳ ವಿವಾಹದಿಂದ ಶ್ರೀಸಾಮಾನ್ಯರನ್ನು ಸಾಲ ಶೂಲೆಯಿಂದ ದೂರಮಾಡಲಿದೆ ಎಂದರು.