ಕನ್ನಡಪ್ರಭ ವಾರ್ತೆ ಹನೂರುತೋಟದ ಮನೆಯ ಮೇಲೆ ಚಿರತೆ ದಾಳಿ ಸಾಕು ನಾಯಿಯನ್ನು ಹೊತ್ತೊಯ್ದ ಘಟನೆ ಗಂಗನ ದೊಡ್ಡಿ ಗ್ರಾಮದಲ್ಲಿ ಜರುಗಿದೆ.
ಅರಣ್ಯಾಧಿಕಾರಿಗಳ ದೌಡು:
ಗಂಗನ ದೊಡ್ಡಿ ಗ್ರಾಮದಲ್ಲಿ ಹಾಡಹಾಗಲೇ ಚಿರತೆ ನಾಯಿ ಒಂದನ್ನು ಹೊತ್ತೊಯ್ದದಿರುವುದನ್ನು ಪ್ರತ್ಯಕ್ಷವಾಗಿ ನೋಡಿದ ರೈತ ಮೂರ್ತಿ ವಿಚಾರ ಹರಡಿ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿರುವ ರೈತ ಬಾಂಧವರು ಭಯಭೀತರಾಗಿದ್ದು, ಸುದ್ದಿ ತಿಳಿದ ತಕ್ಷಣ ವಲಯ ಅರಣ್ಯ ಅಧಿಕಾರಿ ನಾಗರಾಜ್ ಅವರ ಸೂಚನೆಯ ಮೇರೆಗೆ ಡಿಆರ್‌ಎಫ್ ವಿನಾಯಕ್ ಹಾಗೂ ಗಾರ್ಡ್ ಅಶೋಕ್ ಭೇಟಿ ನೀಡಿ ತೋಟದ ಜಮೀನಿನಲ್ಲಿ ಓಡಾಡಿರುವ ಚಿರತೆಯ ಹೆಜ್ಜೆ ಗುರುತನ್ನು ಪತ್ತೆಹಚ್ಚಿ ಹಿರಿಯ ಅಧಿಕಾರಿಗಳಿಗೆ ಚಿರತೆ ರೈತನ ಜಮೀನಿಗೆ ಬಂದು ಹೋಗಿರುವುದನ್ನು ಮಾಹಿತಿಯನ್ನು ನೀಡಿದರು.ಚಿರತೆ ಸೆರೆಹಿಡಿಯಲು ರೈತ ಸಂಘಟನೆ ಒತ್ತಾಯ:
ಗಂಗನ ದೊಡ್ಡಿ ಬಸಪ್ಪನ ದೊಡ್ಡಿ ಮತ್ತು ನಾಗಣ್ಣ ನಗರ ಸುತ್ತಮುತ್ತಲಿನ ಉಡುತೊರೆ ಹಳ್ಳದ ಸುತ್ತಮುತ್ತಲಿನ ಪ್ರದೇಶಗಳಲ್ಲೂ ರೈತರ ಜಮೀನುಗಳಲ್ಲಿ ಕಳೆದ ಒಂದು ವರ್ಷದಿಂದ ಚಿರತೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ವಿಫಲರಾಗಿದ್ದು ಅನಾಹುತ ಸಂಭವಿಸುವ ಮುನ್ನ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆಹಿಡಿದು, ರೈತರಿಗೆ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಸಂಘಟನೆಯೊಂದಿಗೆ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಾಜ್ಯ ರೈತ ಸಂಘ ತಾಲೂಕು ಘಟಕ ಮುಖಂಡ ಅಮ್ಜದ್ ಖಾನ್ ಹೇಳಿದರು.29ಸಿಎಚ್ಎನ್11 ಹನೂರು ತಾಲೂಕಿನ ಗಂಗನದೊಡ್ಡಿ ರೈತ ಮೂರ್ತಿ ಜಮೀನಿನಲ್ಲಿ ಚಿರತೆ ದಾಳಿ ಸಾಕು ನಾಯಿಯನ್ನು ಹೊತ್ತೊಯ್ದಿರುವ ಬಗ್ಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.