ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಕುವೆಂಪು ಪ್ರತಿಮೆ ಆವರಣದಲ್ಲಿ ತಾಲೂಕು ವಿಶ್ವಮಾನವ ಕುವೆಂಪು ಜಯಂತಿ ಆಚರಣೆ ಸಮಿತಿಯಿಂದ ಆಯೋಹಿಸಿದ್ದ ಕುವೆಂಪು ಅವರ 121ನೇ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ವಿಶ್ವ ಮಾನವ ಸಂದೇಶ ಸಾರಿದೆ ಕುವೆಂಪು ಅವರ ಮಾನವೀಯ ಮೌಲ್ಯಗಳ ಮಹತ್ವ ಮತ್ತು ಸಂದೇಶಗಳು, ಆಲೋಚನೆಗಳು ಹಾಗೂ ವಿಚಾರಧಾರೆ ಅರ್ಪಣೆ ಮಾಡಿಕೊಂಡು ದೇಶಕ್ಕೆ ಸಮಾನತೆಯ ಸಂದೇಶವನ್ನು ದೇಶದೆಲ್ಲೆಡೆ ಸಾರಬೇಕು. ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕಾಗಿದೆ ಎಂದರು.ಮಾಜಿ ಶಾಸಕಿ ವಿಜಯಲಕ್ಷ್ಮಮ್ಮ ಬಂಡಿಸಿದ್ದೇಗೌಡ ಉದ್ಘಾಟಿಸಿ ಮಾತನಾಡಿ, ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರಂತೆ ಮನುಷ್ಯನ ಜೀವಿತಾವಧಿಯಲ್ಲಿ ಸರಳ ಚಿಂತನೆ ಹಾಗೂ ಸರಳ ಜೀವನ ಅನುಸರಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಗಾಂಧಿವಾದಿ ಡಾ.ಸುಜಯಕುಮಾರ್ ಅವರು ಕುವೆಂಪು ಸಾಹಿತ್ಯದಲ್ಲಿ ವಿಶ್ವಮಾನವನ ಪ್ರಜ್ಞೆ ಕುರಿತ ವಿಚಾರಧಾರೆಗಳ ಬಗ್ಗೆ ತಿಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಾಧಕರನ್ನು ಗೌರವಿಸಲಾಯಿತು.ಸಮಾರಂಭದಲ್ಲಿ ವಿಶ್ವಮಾನವ ಕುವೆಂಪು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಸಿ.ಸ್ವಾಮೀಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್ ದಿನೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜು, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಲುವೇಗೌಡ, ರಂಗನಾಯಕಿ ಸಮಾಜದ ಆಶಾಲತಾ ಎಂ.ಪುಟ್ಟೇಗೌಡ ಕಸಾಪ ಪುರಸಭಾ ಮಾಜಿ ಸದಸ್ಯ ಕೃಷ್ಣಪ್ಪ, ಅಧ್ಯಕ್ಷ ಸಿದ್ದಲಿಂಗು, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಬಿ. ಕುಮಾರ್, ಅಲಯನ್ಸ್ ಅಧ್ಯಕ್ಷೆ ಸರಸ್ವತಿ ಪಶ್ಚಿಮವಾಹಿನಿ, ಗಂಜಾಂ ರವಿಚಂದ್ರ, ಪಾಂಡು, ಗೌಡಹಳ್ಳಿ ದೇವರಾಜು, ಕೆ.ಟಿ. ರಂಗಪ್ಪ, ಉದ್ಯೋಗದಾತ ರುಕ್ಮಾಂಗದ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಕೆ.ಬಿ. ಬಸವರಾಜು, ಪುರುಷೋತ್ತಮ ಚಿಕ್ಕಪಾಳ್ಯ, ಕರವೇ ಶಂಕರ್ ಚಂದಗಾಲು, ಮಹೇಶ್ ಕಾಳೇನಹಳ್ಳಿ, ಅರಕೆರೆ ಸಿದ್ದರಾಜು ಸೇರಿದಂತೆ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಇಲಾಖೆ ಮುಖ್ಯಸ್ಥರು ಹಾಜರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿಯಿಂದ ಕುವೆಂಪು ಭಾವಚಿತ್ರವನ್ನು ಬೆಳ್ಳಿರಥದ ಮೇಲೆ ಇರಿಸಿ ಅಲಂಕರಿಸಿ ಮೆರವಣಿಗೆ ಮೂಲಕ ವೇದಿಕೆ ವರೆಗೆ ತರಲಾಯಿತು.