ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಅವರು ಕೊಳ್ಳೇಗಾಲ ಮತ್ತು ಹನೂರು ತಾಲೂಕು ಉಪ್ಪಾರ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಉಪ್ಪಾರ ಸಮಾಜ ಶೈಕ್ಷಣಿಕವಾಗಿ ಸುಶಿಕ್ಷಿತರಾಗಬೇಕು. ರಾಜ್ಯ ಮಾತ್ರವಲ್ಲ ದೇಶದಲ್ಲೂ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿವರ್ಹಿಸುವಂತಾಗಬೇಕು, ಸುಶಿಕ್ಷಿತ ಸಮಾಜದ ಅಭ್ಯುದಯಕ್ಕೆ ನಾನು ಬದ್ಧನಾಗಿರುವೆ ಎಂದರು.
ಪ್ರಧಾನ ಕಾರ್ಯದರ್ಶಿ ಮಾದೇಶ್ ಮಾತನಾಡಿ, ನಮ್ಮ ಸಂಘ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದು ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಉನ್ನತ ಶಿಕ್ಷಣಕ್ಕಾಗಿ ಅನೇಕ ಕಾಯ೯ಕ್ರಮ ರೂಪಿಸಿ ಸ್ಪಂದಿಸಲಾಗುತ್ತಿದ್ದು, ಎಲ್ಲರ ಸಹಕಾರದಿಂದ ಸಂಘ ಹಲವು ವರುಷಗಳಿಂದ ಸಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 51 ಮಕ್ಕಳಿಗೆ ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು. ಈವೇಳೆ ನೌಕರರ ಸಂಘದ ಅಧ್ಯಕ್ಷ ಪ್ರಿಯಾಶಂಕರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ
ಕುಂತೂರು ರಾಜೇಂದ್ರ, ಉಪ್ಪಾರ ನಿಗಮ ಮಾಜಿ ರಾಜ್ಯಾಧ್ಯಕ್ಷ ಶಿವಕುಮಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಯೋಗೇಶ್,ಉಪ್ಪಾರ ಸಂಘದ ಅಧ್ಯಕ್ಷ ರಮೇಶ್ , ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ತಾ.ಪಂ. ಮಾಜಿ ಸದಸ್ಯ ಮರಿಸ್ವಾಮಿ, ರೇವಣ್ಣ, ರಾಜು ,ಉಪ್ಪಾರ ನೌಕರರ ಸಂಘದನೌಕರರ ಸಂಘದ ಪದಾಧಿಕಾರಿಗಳು ಇದ್ದರು.---- ನಾನು ಹಲವು ಸಭೆ ಸಮಾರಂಭಗಳಲ್ಲಿ ವಿಷಯಕ್ಕೆ ಅನುಗುಣವಾಗಿ ಮಾತನಾಡಿರುತ್ತೇನೆ. ಅದು ಯಾರನ್ನು ಉದ್ದೇಶಿಸಿ ಅಲ್ಲ, ಅಥವಾ ಯಾರನ್ನೊ ಒಲೈಕೆಗಾಗಿ ಮಾತನಾಡಿಲ್ಲ, ಕೆಲವು ವೇಳೆ ಅರ್ಥೈಸಿಕೊಳ್ಳುವಲ್ಲಿ ಮಾತನಾಡಿರುತ್ತೇನೆ, ಆದರೆ ಇದಕ್ಕೆ ಹಲವು ಮುಖಂಡರು ಅನ್ಯ ರೀತಿ ಅಥ೯ಮಾಡಿಕೊಳ್ಳುವುದು ಬೇಡ. ನಾನು ಬಹುತೇಕ ಕಾಯ೯ಕ್ರಮಗಳಲ್ಲಿ ಕೆಲವು ವಿಚಾರ, ವಿಷಯಗಳಿಗೆ ಅನುಗುಣವಾಗಿ ವಿಚಾರವನ್ನು ಪ್ರಸ್ತಾಪಿಸಿರುತ್ತೆನೆ, ನಾನು ಯಾವ ಧರ್ಮ, ಯಾವ ಜನಾಂಗದ ವಿರೋಧಿಯೂ ಅಲ್ಲ, ಎಲ್ಲರನ್ನು ಸರಿದೂಗಿಸಿಕೊಂಡು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೆನೆ. ಕ್ಷೇತ್ರದ ಅಭಿವೃದ್ಧಿಗೆ ಅದ್ಯತೆ ನೀಡುತ್ತಿರುವೆ.
- ಎ.ಆರ್. ಕೃಷ್ಣಮೂರ್ತಿ, ಶಾಸಕರು--- 29ಕೆಜಿಎಲ್ 24ಕೊಳ್ಳೇಗಾಲದ ಗುರುಭವನದಲ್ಲಿ ಅಯೋಜಿಸಲಾಗಿದ್ದ ಭಗೀರಥ ಉಪ್ಪಾರ ನೌಕರರ ಸಂಘದ ಪ್ರತಿಭಾ ಪುರಸ್ಕಾರಸಮಾರಂಭದಲ್ಲಿ ಸಾಧಕ ವಿದ್ಯಾಥಿ೯ಗಳನ್ನು ಅಭಿನಂದಿಸಲಾಯಿತು.
--