ಅರಣ್ಯ ಇಲಾಖೆ ಕಾಡಿನ ಬೆಳವಣಿಗೆಗೆ ಪೂರಕ ಕ್ರಮ ಕೈಗೊಳ್ಳಲು ವನ್ಯಜೀವಿ ಸಂರಕ್ಷಣಾಕ್ರಿಯಾ ತಂಡ ಒತ್ತಾಯ
ಭದ್ರಾ ಅಭಯಾರಣ್ಯ ಹುಲಿ ಮೀಸಲು ಪ್ರದೇಶದಲ್ಲಿ ಹುಲಿ ಘರ್ಜನೆಗಿಂತ ಜೆಸಿಬಿ ಯಂತ್ರಗಳ ಸದ್ದು ಜೋರಾಗಿ ಪ್ರಾಣಿ ಪಕ್ಷಿಗಳ ಸ್ವಚ್ಛಂದತೆಗೆ ಮಾರಾಕವಾಗುತ್ತಿದೆ ಎಂದು ವನ್ಯಜೀವ ಸಂರಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಭದ್ರಾ ಅಭಯಾರಣ್ಯದ ಮುತ್ತೋಡಿ ಮತ್ತು ಲಕ್ಕವಳ್ಳಿ ವಲಯಗಳಲ್ಲಿ ಕಾರ್ಮಿಕರಿಂದ ಮಾಡಿಸಬೇಕಾದ ಕೆಲಸಗಳನ್ನು ಜೆಸಿಬಿ ಯಂತ್ರ ಬಳಸಿ ಮಾಡಲಾಗುತ್ತಿದೆ. ಇದು ಮೀಸಲು ಮತ್ತು ಅಭಯಾರಣ್ಯದ ಕಾನೂನಿಗೆ ವಿರೋಧ ಮತ್ತು ನೇರ ಉಲ್ಲಂಘನೆ. ಈ ಎರಡೂ ವಲಯಗಳಲ್ಲಿ ಈಗಾಗಲೇ ಜೆಸಿಬಿ ಬಳಸಿ ಹುಲ್ಲುಗಾವಲನ್ನು ಪುನರ್ ಸ್ಥಿತಿಗೆ ತಂದು ಸಸ್ಯಾಹಾರಿ ಪ್ರಾಣಿಗಳಿಗೆ ಹುಲ್ಲು ಹಾಗೂ ಅವು ತಿನ್ನುವ ಹಸಿರು ಗಿಡಗಳನ್ನು ಸಮೃದ್ಧವಾಗಿ ದೊರಕಿಸುವ ಉದ್ದೇಶ ಹೊಂದಿದ್ದರೂ ಯಂತ್ರ ಬಳಕೆ ಕಾನೂನಿಗೆ ವಿರೋಧ.ವಾಗಿದೆ. ಈ ಹಿಂದೆ ಸಹ ಅಭಯಾರಣ್ಯದಲ್ಲಿ ಸಸ್ಯಾಹಾರಿ ಪ್ರಾಣಿಗಳು ಮೇಯದ ಪಾರ್ಥೇನಿಯಂ, ಯುಪಟೇರಿಯಂ ಮತ್ತು ಮೈಕೇನಿಯ ರಾಕ್ಷಸ ಕಳೆಗಳ ನಾಶ ಪಡಿಸಲು ಯಂತ್ರ ಬಳಸಿದಾಗ ಪರಿಸರಾಸಕ್ತರು ವಿರೋಧಿಸಿದಾಗ ಅರಣ್ಯಇಲಾಖೆ ಅಧಿಕಾರಿಗಳು ಈ ತಪ್ಪು ಪುನರಾವರ್ತನೆಯಾಗದು ಎಂದು ಭರವಸೆ ನೀಡಿದ್ದರು. ರಾಕ್ಷಸ ಕಳೆಗಳನ್ನು ಜೆಸಿಬಿ ಬಳಸಿ ನಿರ್ಮೂಲನ ಮಾಡುವಾಗ ಅಭಯಾರಣ್ಯದಲ್ಲಿ ಸಹಜವಾಗಿ ಬೆಳೆಯುವ ಮತ್ತು ಕಾಡು ಪ್ರಾಣಿಗಳು ತಿನ್ನುವ ಕಾಡುಗಿಡ ಮತ್ತು ಬಿದಿರು ಬೊಂಬಿನ ಸಸಿಗಳು ನಾಶವಾಗುವುದಲ್ಲದೆ, ನೆಲ ಹಾಗೂ ಕುರುಚಲು ಗಿಡ ಗಳಲ್ಲಿ ಗೂಡುಕಟ್ಟಿ ಮೊಟ್ಟೆಇಟ್ಟು ಪಕ್ಷಿಗಳು ಸಂತತಿ ಬೆಳೆಸುವುದಕ್ಕೂ ಇದು ಮಾರಕವಾಗುತ್ತದೆ.ಭೂಮಿಯಲ್ಲೇ ಸಂಚರಿಸುವ ಹಾವು ಸೇರಿದಂತೆ ಸರೀ ಸೃಪಗಳು, ಹುತ್ತಗಳು ನಾಶವಾಗುತ್ತವೆ. ಅರಣ್ಯ ಇಲಾಖೆ ಈ ಸೂಕ್ಷ್ಮ ಸಂಗತಿಗಳನ್ನು ಆಲೋಚಿಸದೆ ಜೆಸಿಬಿಗಳನ್ನು ಅವ್ಯಾಹತವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
--ಫೋಟೋ