ಜೇಸಿಐ ವ್ಯಕ್ತಿತ್ವ ವಿಕಸನದ ಬೃಹತ್ ಕ್ರಿಯಾಶೀಲ ಸಂಸ್ಥೆ: ರಮೇಶ್‌ ದಾಡಿಗಲ್‌

KannadaprabhaNewsNetwork |  
Published : Mar 22, 2024, 01:02 AM IST
ಚಿತ್ರ:21ಎಸ್‍ಪಿಟಿ7-ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆದ ಜೇಸಿಐ ಸ್ಥಳೀಯ ಘಟಕಗಳ ಸಭೆಯನ್ನು ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಜೆ.ಎಫ್.ಎಸ್. ರಮೇಶ್ ಉದ್ಘಾಟಿಸಿದರು.ವಸಂತ್, ಆಶಾ, ರಂಗಸ್ವಾಮಿ, ನೆಲ್ಸನ್, ಪ್ರಜ್ವಲ್, ಸಂಪತ್, ಜಗದೀಶ್ ಇದ್ದರು. | Kannada Prabha

ಸಾರಾಂಶ

ಸೋಮವಾರಪೇಟೆ ಪಟ್ಟಣದ ಮಹಿಳಾ ಸಮಾಜದಲ್ಲಿ ಸ್ಥಳೀಯ ಜೆಸಿಐ ಸಂಸ್ಥೆಗಳ ಸದಸ್ಯರ ಸಭೆ ನಡೆಯಿತು. ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕಕ್ಕೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ರಾಷ್ಟ್ರೀಯ ಉಪಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಜೇಸಿಐ ವಿಶ್ವದ ಅತಿ ದೊಡ್ಡ ಯುವ ಸಮೂಹವನ್ನೊಳಗೊಂಡ ವ್ಯಕ್ತಿತ್ವ ವಿಕಸನ ಕ್ರಿಯಾಶೀಲ ಸಂಸ್ಥೆಯಾಗಿದೆ. ಸಮಾಜದಲ್ಲಿ ಯುವಕರನ್ನು ಕ್ರಿಯಾಶೀಲ ನಾಗರಿಕರನ್ನಾಗಿ ರೂಪಿಸುವುದೇ ಜೇಸಿಐ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ರಮೇಶ್ ದಾಡಿಗಲ್ ಹೇಳಿದ್ದಾರೆ.

ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಸ್ಥಳೀಯ ಜೆಸಿಐ ಸಂಸ್ಥೆಗಳ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನತೆಯಲ್ಲಿ ಗುಣಾತ್ಮಕ ಬದಲಾವಣೆ ಮಾಡುವುದು, ಜೀವನಾಭಿವೃದ್ದಿ ಅವಕಾಶಗಳನ್ನು ಒದಗಿಸುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಸಂಸ್ಥೆಯು ಸದಸ್ಯರಿಗೆ 10 ಲಕ್ಷ ರು., ಆಕಸ್ಮಿಕ ಮರಣ ವಿಮಾ ಸೌಲಭ್ಯ ಕಲ್ಪಿಸುವ ಮೂಲಕ ಜೇಸಿ ಕುಟುಂಬದ ಬೆನ್ನೆಲುಬಾಗಿದೆ ಎಂದು ಹೇಳಿದರು.

ಜೇಸಿಐ ಕುಶಾಲನಗರ ನಿಸರ್ಗ ಮತ್ತು ಜೆಸಿಐ ಸುಂಟಿಕೊಪ್ಪ ಘಟಕಗಳು ಭಾಗವಹಿಸಿದ್ದವು. ಸ್ಥಳೀಯ ಘಟಕಗಳಲ್ಲಿ ಮೂರು ತಿಂಗಳಲ್ಲಿ ನಡೆದ ಕಾರ್ಯಕ್ರಮಗಳ ವರದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರಿಗೆ ನೀಡಿದರು. ನಂತರ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಘಟಕಕ್ಕೆ ನೂತನವಾಗಿ ಸೇರ್ಪಡೆಗೊಂಡ ಸದಸ್ಯರಿಗೆ ರಾಷ್ಟ್ರೀಯ ಉಪಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು.

ವಲಯ 14ರ ಅಧ್ಯಕ್ಷೆ ಆಶಾ ಜೈನ್, ಜೆಎಸಿ ಅಲ್ಯೂಮಿನಿಯಂ ಕ್ಲಬ್ ನ ವಲಯ ಅಧ್ಯಕ್ಷ ರಂಗಸ್ವಾಮಿ, ನ್ಯಾಷನಲ್ ಕೋಆರ್ಡಿನೇಟರ್ ನೆಲ್ಸನ್ ಡಿಸೋಜ, ವಲಯ 14ರ ನಿರ್ದೇಶಕ ಪ್ರಜ್ವಲ್ ಎಸ್. ಜೈನ್, ಸೋಮವಾರಪೇಟೆ ಘಟಕ ಅಧ್ಯಕ್ಷ ಎಸ್. ಆರ್. ವಸಂತ್, ಸುಂಟಿಕೊಪ್ಪ ಘಟಕದ ಅಧ್ಯಕ್ಷ ಸಂಪತ್ ಕುಮಾರ್, ಕುಶಾಲನಗರ ಘಟಕದ ಅಧ್ಯಕ್ಷ ಜಗದೀಶ್, ಟೂರ್ ಕೋಆರ್ಡಿನೇಟರ್ ಎಅ ಪ್ರಶಾಂತ್, ಕಾರ್ಯದರ್ಶಿ ಜಗದಾಂಬ ಗುರುಪ್ರಸಾದ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!